ಫೆ.15ಕ್ಕೆ ಪ್ರೊ.ಹಸನ್ ಮನ್ಸೂರ್ ಸ್ಮರಣಾರ್ಥ ಉಪನ್ಯಾಸ
ಬೆಂಗಳೂರು, ಫೆ. 12: ಮಾನವ ಹಕ್ಕುಗಳ ಹೋರಾಟಗಾರ ಪ್ರೊ.ಹಸನ್ ಮನ್ಸೂರ್ ಸ್ಮರಣಾರ್ಥ ‘ರಾಜದ್ರೋಹ: ಪ್ರತಿನಿತ್ಯ ನಡೆಯುವ ಸಾಮಾನ್ಯ ಅಪರಾಧ’ ಎಂಬ ವಿಷಯದ ಕುರಿತು ಫೆ.15ರಂದು ಪಿಯುಸಿಎಲ್‌ನಿಂದ ಉಪನ್ಯಾಸ ಏರ್ಪಡಿಸಲಾಗಿದೆ.
ಫೆ.15ರ ಮಧ್ಯಾಹ್ನ 3:30ಕ್ಕೆ ಇಲ್ಲಿನ ಪೂರ್ಣಿಮಾ ಚಿತ್ರಮಂದಿರದ ಎದುರಿನಲ್ಲಿರುವ ಜೈಭೀಮ್ ಭವನದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಹೈಕೋರ್ಟಿನ ಹಿರಿಯ ವಕೀಲ ಬಿ.ಟಿ.ವೆಂಕಟೇಶ್ ಉಪನ್ಯಾಸ ನೀಡಲಿದ್ದಾರೆಂದು ಪಿಯುಸಿಎಲ್ ಮುಖ್ಯಸ್ಥ ವೈ.ಜೆ.ರಾಜೇಂದ್ರ ತಿಳಿಸಿದ್ದಾರೆ.
Next Story





