ಕಾಪು: ಫೆ.19ರಂದು ಗೃಹ ಸಾಲ ಮೇಳ
ಉಡುಪಿ, ಫೆ.13: ಕಾಪು ಪುರಸಭಾ ವ್ಯಾಪ್ತಿಯ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳ ಸಹಯೋಗದೊಂದಿಗೆ ಪಿಎಂಎವೈ ಯೋಜನೆಯಡಿ (ಕಡಿಮೆ ಬಡ್ಡಿ ದರದಲ್ಲಿ) ಬೃಹತ್ ಗೃಹ ಸಾಲ ಮೇಳವನ್ನು ಫೆ.19ರಂದು ಬೆಳಗ್ಗೆ 10:30ರಿಂದ 12:00ರವರೆಗೆ ಕಾಪು ಪುರಸಭೆ ಸಬಾಂಗಣದಲ್ಲಿ ಆಯೋಜಿಸಲಾಗಿದೆ.
ಸ್ವಂತ ನಿವೇಶನ ಹೊಂದಿದ್ದು, ಮನೆ ನಿರ್ಮಿಸಲು ಆಸಕ್ತಿ ಇರುವ ಫಲಾನುಭವಿಗಳು ಕಾರ್ಯಕ್ರಮಕ್ಕೆ ಹಾಜರಾಗಿ ಇದರ ಸದುಪಯೋಗ ಪಡೆದು ಕೊಳ್ಳುವಂತೆ ಕಾಪು ಪುರಸಬೆಯ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story