Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿದ್ರೆಯ ಕುರಿತು ಈ ಮಿಥ್ಯೆಗಳ ಹಿಂದಿನ...

ನಿದ್ರೆಯ ಕುರಿತು ಈ ಮಿಥ್ಯೆಗಳ ಹಿಂದಿನ ಸತ್ಯ ನಿಮಗೆ ಗೊತ್ತಿರಲಿ

ವಾರ್ತಾಭಾರತಿವಾರ್ತಾಭಾರತಿ13 Feb 2020 9:11 PM IST
share

ನಿಮಗೆ ಪ್ರತಿದಿನ ಅಗತ್ಯವಾದಷ್ಟು ನಿದ್ರೆ ದೊರೆಯುತ್ತದೆಯೇ? ರಾತ್ರಿ ಸುಖಕರವಾದ ನಿದ್ರೆಯು ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯಲು ನೆರವಾಗುತ್ತದೆ. ನಮ್ಮನ್ನು ಆರೋಗ್ಯಯುತ ಮತ್ತು ಫಿಟ್ ಆಗಿರಿಸುವಲ್ಲಿ ನಿದ್ರೆಯ ಗುಣಮಟ್ಟ ಮತ್ತು ಪ್ರಮಾಣ ಮಹತ್ವದ ಪಾತ್ರವನ್ನು ಹೊಂದಿದೆ. ಮಾನವನಿಗೆ ದಿನಕ್ಕೆ ಕನಿಷ್ಠ 7-8 ಗಂಟೆಗಳ ನಿದ್ರೆ ಅಗತ್ಯವಾಗಿದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ ಮತ್ತು ಇದನ್ನು ಕಡೆಗಣಿಸುವಂತಿಲ್ಲ. ನಿದ್ರೆಯ ಕುರಿತು ಕೆಲವು ಸಾಮಾನ್ಯ ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ......

► ವಯಸ್ಸಾದವರು ಕಡಿಮೆ ನಿದ್ರೆ ಮಾಡಿದರೆ ಸಾಕು

 - ಇದು ನಿದ್ರೆಯ ಕುರಿತು ಅತ್ಯಂತ ಸಾಮಾನ್ಯ ಮಿಥ್ಯೆಗಳಲ್ಲೊಂದಾಗಿದೆ. ಆದರೆ ಇದು ನಿಜವಲ್ಲ. ಸಾಧಾರಣ ವಯಸ್ಕರಂತೆ ಹಿರಿಯ ಜೀವಗಳಿಗೂ ದಿನಕ್ಕೆ 7-8 ಗಂಟೆಗಳ ನಿದ್ರೆಯು ಅಗತ್ಯವಾಗಿದೆ. ವಾಸ್ತವದಲ್ಲಿ ನಮಗೆ ವಯಸ್ಸಾಗುತ್ತಿದ್ದಂತೆ ನಿದ್ರೆಯ ಸ್ವರೂಪದಲ್ಲಿ ಬದಲಾವಣೆಯಾಗಬಹುದು,ಆದರೆ ಅಗತ್ಯವಿರುವ ನಿದ್ರೆಯ ಪ್ರಮಾಣದಲ್ಲಿ ವ್ಯತ್ಯಾಸವಾಗದಿರಬಹುದು. ವಯಸ್ಸಾದವರು ರಾತ್ರಿಯಲ್ಲಿ ಹೆಚ್ಚು ಎಚ್ಚರವಾಗಿರುತ್ತಾರೆ ಮತ್ತು ಇದರಿಂದಾಗಿ ವಯಸ್ಕರಿಗೆ ಹೋಲಿಸಿದರೆ ಅವರ ನಿದ್ರೆಯ ಪ್ರಮಾಣ ಕಡಿಮೆಯಾಗಿರುತ್ತದೆ. ಹೀಗಾಗಿ ಅವರು ಹಗಲಿನಲ್ಲಿ ಚುಟುಕು ನಿದ್ರೆ ಮಾಡುತ್ತಿರುತ್ತಾರೆ. ಅಲ್ಲದೆ ಯುವಜನರಿಗೆ ಹೋಲಿಸಿದರೆ ವಯಸ್ಸಾದವರು ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳುವುದು ಸಾಮಾನ್ಯ.

►  ನಾವು ಮಲಗಿದಾಗ ಮಿದುಳು ವಿಶ್ರಾಂತಿಯಲ್ಲಿರುತ್ತದೆ

ನಾವು ನಿದ್ರಿಸಿದ್ದಾಗ ಮಿದುಳು ಸೇರಿದಂತೆ ನಮ್ಮ ಶರೀರವು ವಿಶ್ರಾಂತಿಯನ್ನು ಪಡೆಯುತ್ತಿರುತ್ತದೆ ಎನ್ನುವುದು ಸಂಪೂರ್ಣವಾಗಿ ತಪ್ಪುಗ್ರಹಿಕೆಯಾಗಿದೆ. ವಾಸ್ತವಿಕವಾಗಿ ನಾವು ಗಾಢ ನಿದ್ರೆಯಲ್ಲಿರುವಾಗ ಮಿದುಳು ಸಕ್ರಿಯವಾಗಿರುತ್ತದೆ ಮತ್ತು ಹೆಚ್ಚು ವ್ಯಸ್ತವಾಗಿರುತ್ತದೆ. ಉಸಿರಾಟ,ಹೃದಯದ ರಕ್ತ ಪೂರೈಕೆ ಕೆಲಸ ಇತ್ಯಾದಿ ಶಾರೀರಿಕ ಕಾರ್ಯಗಳ ನಿಯಂತ್ರಣವನ್ನು ಮಿದುಳು ಯಥಾಪ್ರಕಾರ ನಿರ್ವಹಿಸುತ್ತಿರುತ್ತದೆ. ಅದು ಅಂದಿನ ದಿನ ಏನೇನು ನಡೆಯಿತು ಎನ್ನುವುದರ ಕುರಿತು ಮಾಹಿತಿಗಳನ್ನು ವರ್ಗೀಕರಿಸುತ್ತದೆ ಮತ್ತು ಸಂಸ್ಕರಿಸುತ್ತದೆ,ಬಳಿಕ ಎಲ್ಲ ಮಾಹಿತಿಗಳನ್ನು ನಮ್ಮ ದೀರ್ಘಾವಧಿಯ ನೆನಪಿನಲ್ಲಿ ದಾಸ್ತಾನಾಗಿರಿಸುತ್ತದೆ. ಇದು ಕಲಿಯುವಿಕೆ ಮತ್ತು ಜ್ಞಾಪಕ ಶಕ್ತಿಗೆ ಮುಖ್ಯವಾಗಿದೆ.

►  ಗೊರಕೆ ಹೊಡೆಯುವುದು ಸಾಮಾನ್ಯ

ಇದು ನಿಜವಲ್ಲ. ಗೊರಕೆ ಹೆಚ್ಚಿನ ಪ್ರಕರಣಗಳಲ್ಲಿ ಸಾಮಾನ್ಯ ಸಮಸ್ಯೆಯಲ್ಲ ಮತ್ತು ಇದನ್ನು ಕಡೆಗಣಿಸುವಂತಿಲ್ಲ. ಪ್ರತಿ ದಿನ ನೀವು ಗೊರಕೆ ಹೊಡೆಯುತ್ತಿದ್ದರೆ ಅದಕ್ಕೆ ಅಬ್‌ಸ್ಟ್ರಕ್ಟಿವ್ ಸ್ಲೀಪ್ ಆಪ್ನಿಯಾ ಕಾರಣವಾಗಿರಬಹುದು. ಸ್ಲೀಪಿಂಗ್ ಆಪ್ನಿಯಾ ಸ್ಥಿತಿಯಲ್ಲಿ ನಮ್ಮ ಉಸಿರಾಟ ವ್ಯವಸ್ಥೆಗೆ ತಡೆಯುಂಟಾಗುತ್ತದೆ ಮತ್ತು ಕೆಲವು ಸೆಕೆಂಡ್‌ಗಳ ಕಾಲ ಉಸಿರಾಟ ಸ್ಥಗಿತಗೊಳ್ಳುತ್ತದೆ. ಇದು ರಾತ್ರಿಯಿಡೀ ಆಗಾಗ್ಗೆ ಪುನರಾವರ್ತನೆಯಾಗಬಹುದು. ಇದು ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಗೊರಕೆ ಸ್ಲೀಪ್ ಆಪ್ನಿಯಾದ ಸಂಕೇತವೂ ಆಗಿರಬಹುದು ಮತ್ತು ಹೃದ್ರೋಗಗಳು,ಮಧುಮೇಹದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

►  ಮದ್ಯಪಾನ ಮಾಡಿದರೆ ಒಳ್ಳೆಯ ನಿದ್ರೆ ಬರುತ್ತದೆ

ಮದ್ಯಪಾನವು ಅಲ್ಪಾವಧಿಯಲ್ಲಿ ನಿದ್ರೆಗೆ ನೆರವಾಗಬಹುದು,ಆದರೆ ದೀರ್ಘಾವಧಿಯಲ್ಲಿ ಅದು ನಿದ್ರೆಯ ಸ್ವರೂಪದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಮದ್ಯಪಾನವು ಆಗಾಗ್ಗೆ ನಿದ್ರೆಯಿಂದ ಎಚ್ಚರಗೊಳ್ಳುವಂತೆ ಮಾಡುತ್ತದೆ ಮತ್ತು ಅದು ಸುಖನಿದ್ರೆಯನ್ನು ನೀಡುವುದಿಲ್ಲ. ಮದ್ಯಪಾನವು ವಿವಿಧ ಸ್ಥಿತಿಗಳಿಗೆ ಸ್ಪಂದನ ದರವನ್ನು ನಿಧಾನಗೊಳಿಸುತ್ತದೆ. ಸದಾ ಕಾಲ ಮಂಪರಿನಲ್ಲಿರುವಂತೆ ಮಾಡುತ್ತದೆ ಮತ್ತು ಶರೀರದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ನಿದ್ರೆಯು ಮದ್ಯಪಾನದಿಂದ ದೊರೆಯುವ ತಾತ್ಕಾಲಿಕ ಲಾಭವಾಗಿದೆ ಮತ್ತು ತೀವ್ರ ನಿರ್ಜಲೀಕರಣದಿಂದ ಹಿಡಿದು ಯಕೃತ್ತಿಗೆ ಹಾನಿಯವರೆಗೆ ಶರೀರದಲ್ಲಿ ಹಲವಾರು ಅಡ್ಡ ಪರಿಣಾಮಗಳನ್ನುಂಟು ಮಾಡುತ್ತದೆ.

►  ರಾತ್ರಿ ನಿದ್ರಾಭಂಗವಾದರೆ ದಿನವಿಡೀ ಬಳಲಿಕೆ ಇರುತ್ತದೆ

ವಯಸ್ಕ ವ್ಯಕ್ತಿ ದಿನಕ್ಕೆ 7-9 ಗಂಟೆಗಳ ಕಾಲ ನಿದ್ರಿಸಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಅಪೇಕ್ಷಿತ ಅವಧಿಯ ನಿದ್ರೆಯನ್ನು ಪಡೆಯದವರು ಮರುದಿನ ಬಳಲಿಕೆಗೆ ಗುರಿಯಾಗುತ್ತಾರೆ ಮತ್ತು ಕೆಲಸಗಳನ್ನು ಸರಿಯಾಗಿ ಮಾಡುವುದಿಲ್ಲ ಎನ್ನುವುದು ಹೆಚ್ಚಿನವರ ನಂಬಿಕೆ. ಇದು ಕೆಲಮಟ್ಟಿಗೆ ನಿಜ ಹೌದು. ಆದರೆ ನೀವು ಕೆಲವೊಮ್ಮೆ ಮಾತ್ರ ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುತ್ತಿದ್ದರೆ ನಿಮಗೆ ಮರುದಿನ ಬಳಲಿಕೆ ಅನುಭವವಾಗದಿರಬಹುದು. ನಿಮ್ಮ ನಿದ್ರೆಗೆ ವ್ಯತ್ಯಯವಾಗಬಹುದು,ಮತ್ತೆ ನಿದ್ರಿಸುವುದು ಕಷ್ಟವಾಗಬಹುದು. ಆದರೆ ಅದು ಮರುದಿನ ನಿಮ್ಮನ್ನು ಆಯಾಸಗೊಳಿಸುವುದಿಲ್ಲ. ಚಿಕ್ಕ ನಿದ್ರೆ ವ್ಯಕ್ತಿಯ ಸಾಧನೆಯನ್ನು ಮತ್ತು ಗ್ರಹಣ ಕೌಶಲ್ಯಗಳನ್ನು ಹೆಚ್ಚಿಸುತ್ತದೆ ಎನ್ನುತ್ತವೆ ಅಧ್ಯಯನಗಳು. ಆದರೆ ಆಗಾಗ್ಗೆ ನಿದ್ರಾಭಂಗವಾಗುತ್ತಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

►  ರಾತ್ರಿ ಟಿವಿ/ಮೊಬೈಲ್ ನೋಡುತ್ತಿದ್ದರೆ ಗಾಢನಿದ್ರೆ ಬರುತ್ತದೆ

ಬಹಳಷ್ಟು ಜನರು ತಮಗೆ ನಿದ್ರೆ ಬರುವವರೆಗೆ ಟಿವಿ ಅಥವಾ ಮೊಬೈಲ್‌ನಲ್ಲಿ ತಲ್ಲೀನರಾಗಿರುವುದಕ್ಕೆ ಇದು ಕಾರಣವಿರಬಹುದು. ಆದರೆ ಇದೊಂದು ಸಾಮಾನ್ಯ ತಪ್ಪು ಗ್ರಹಿಕೆಯಾಗಿದೆ. ಟಿವಿ ವೀಕ್ಷಣೆ ಅಥವಾ ಮೊಬೈಲ್ ಫೋನ್‌ನಲ್ಲಿ ಆಟ ಗಾಢನಿದ್ರೆಗೆ ಜಾರುವಂತೆ ಮಾಡುವುದಿಲ್ಲ. ವಾಸ್ತವಿಕವಾಗಿ ಹಾಸಿಗೆಯಲ್ಲಿ ಬೀಳುವ ಮುನ್ನ ಬೆಳಕನ್ನು ಹೊರಸೂಸುವ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಂತಹ ಸಾಧನೆಗಳ ಬಳಕೆಯು ನಿದ್ರೆಯ ಮೆಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತದೆ. ಟಿವಿ ಮತ್ತು ಮೊಬೈಲ್ ಫೋನ್‌ಗಳಿಂದ ಹೊರಸೂಸುವ ನೀಲಿ ಬಣ್ಣದ ಬೆಳಕು ನಿದ್ರೆಗೆ ಮುನ್ನ ಮಿದುಳನ್ನು ಶಾಂತಗೊಳಿಸುವ ಬದಲು ಅದಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ. * ಸರಿಯಾಗಿ ನಿದ್ರೆ ಬರುತ್ತಿಲ್ಲ ಎಂದರೆ ಅದು ದೊಡ್ಡ ಸಮಸ್ಯೆಯಲ್ಲ

 ಇದು ನಿಜವಲ್ಲ,ಸರಿಯಾಗಿ ನಿದ್ರೆ ಬಾರದ ಸಮಸ್ಯೆ ಆಗಾಗ್ಗೆ ಕಾಡುತ್ತಿದ್ದರೆ ಅದು ಇನ್‌ಸೋಮ್ನಿಯಾ ಅಥವಾ ನಿದ್ರಾಹೀನತೆ ಆಗಿರಬಹುದು. ಮೂರು ತಿಂಗಳುಗಳಿಂದಲೂ ವಾರಕ್ಕೆ ಕನಿಷ್ಠ ಮೂರು ರಾತ್ರಿಗಳಲ್ಲಿ ನೀವು ನಿದ್ರಾವಂಚಿತರಾಗುತ್ತಿದ್ದರೆ ನೀವು ದೀರ್ಘಕಾಲಿಕ ಇನ್‌ಸೋಮ್ನಿಯಾದಿಂದ ಬಳಲುತ್ತಿದ್ದೀರಿ ಎನ್ನ್ನುವುದನ್ನು ಅದು ಸೂಚಿಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X