ಅಂದರ್ ಬಾಹರ್: ನಾಲ್ವರ ಬಂಧನ
ಉಡುಪಿ, ಫೆ.15: ಸಂತೆಕಟ್ಟೆ ಮಾರುಕಟ್ಟೆಯ ಬಳಿ ಫೆ.13ರಂದು ಅಂದರ್ -ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ವರ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಮೂಲದ ಸಂತೆಕಟ್ಟೆ ನಿವಾಸಿ ಗೋಪಾಲ ಭೂಪತಿ ಲಮಾಣಿ (32), ಚಿತ್ರದುರ್ಗ ಮೂಲದ ಆದಿಉಡುಪಿ ನಿವಾಸಿ ದೇವೇಂದ್ರ ಓಬಯ್ಯ (33), ಬಾಗಲಕೋಟೆ ಮೂಲದ ಸಂತೆಕಟ್ಟೆ ನಿವಾಸಿ ಪ್ರಭು ರಾಮಣ್ಣ ಗುಬಚಿ (45), ಕೊಪ್ಪಳ ಮೂಲದ ಆಶೀರ್ವಾದ್ ಜಂಕ್ಷನ್ ನಿವಾಸಿ ಮಲ್ಲಿಕಾರ್ಜುನ ಬೆನ್ನಿ(26) ಬಂಧಿತ ಆರೋಪಿಗಳು. ಇವರಿಂದ 2,450ರೂ. ನಗದು ವಶ ಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





