ಮಂಗಳೂರು : ಫೆ. 15ರಿಂದ ಇಂಡಿಯನ್ ಡಿಸೈನ್ ಸ್ಕೂಲ್ ನಲ್ಲಿ 'ಮಾಸ್ಟರ್ ಕ್ಲಾಸ್' ಆರಂಭ

ಮಂಗಳೂರು, ಫೆ. 14: ಇಂಡಿಯನ್ ಡಿಸೈನ್ ಸ್ಕೂಲ್ (ಐಡಿಎಸ್)ನ ಕಲಿಕೆ, ಜ್ಞಾನ ಹಂಚಿಕೆ ಹಾಗೂ ಕೌಶಲ ತರಬೇತಿ ಕೋರ್ಸ್ 'ಮಾಸ್ಟರ್ ಕ್ಲಾಸ್' (ಎಂಸಿ) ಐವೊರಿ ಎಂಕ್ಲೇವ್‌ನಲ್ಲಿ ಫೆ. 15ರಿಂದ ಆರಂಭವಾಗಲಿದೆ.
ಐಡಿಎಸ್‌ನ ಅಧ್ಯಕ್ಷ ಮುಹಮ್ಮದ್ ನಿಸಾರ್ ಈ ಕೋರ್ಸ್‌ನ ನೇತೃತ್ವವಹಿಸಲಿದ್ದಾರೆ. ಇವರ ಜೊತೆಗೆ ವಿಭಿನ್ನ ಕೋರ್ಸ್‌ಗಳ ವಿನ್ಯಾಸಕರಾಗಿ ಐಡಿಎಸ್‌ನ ನಿರ್ದೇಶಕಿ ಡಾ. ನಫೀಸಾ ಶಿರಿನ್, ಐಡಿಎಸ್‌ನ ಪ್ರಾಂಶುಪಾಲ ರಾಮನಾಥ್ ಇರಲಿದ್ದಾರೆ.
ನಿಮ್ಮ ಆಸಕ್ತಿಯನ್ನು ಈಡೇರಿಸಿಕೊಳ್ಳಲು ಅಥವಾ ಭವಿಷ್ಯದ ಉದ್ಯಮಿಯಾಗಲು ಎಲ್ಲ ಅಗತ್ಯದ ಕೌಶಲ ಹಾಗೂ ತಂತ್ರಗಳನ್ನು ಒಳಗೊಳ್ಳುವ, ಕೆಲವು ದಿನಗಳಿಂದ ಹಿಡಿದು ಕೆಲವು ವಾರಗಳ ವರೆಗಿನ ವಿವಿಧ ಕೋರ್ಸ್‌ಗಳಿಗೆ ಮಾಸ್ಟರ್ ಕ್ಲಾಸ್‌ನಲ್ಲಿ ಅವಕಾಶ ಇದೆ.
ಪ್ರಸ್ತುತ ಮಾಸ್ಟರ್ ಕ್ಲಾಸ್ ಐದು ವಿವಿಧ ಕೋರ್ಸ್‌ಗಳನ್ನು ನೀಡುತ್ತದೆ. ಪಾಕ ಕಲೆ, ಕ್ಯಾಲಿಗ್ರಫಿ, ಆಭರಣ ವಿನ್ಯಾಸ, ಗೃಹ ವಿಜ್ಞಾನ ಹಾಗೂ ಮನೆ ಅಲಂಕಾರ-ಸಜ್ಜುಗೊಳಿಸುವಿಕೆ. ಪ್ರಾಯ, ವೃತ್ತಿ ಹಾಗೂ ವಿದ್ಯಾರ್ಹತೆ ಗಮನಕ್ಕೆ ತೆಗೆದುಕೊಳ್ಳದೆ ಎಲ್ಲರಿಗೂ ಅತ್ಯುತ್ತಮ ಗುಣಮಟ್ಟದ ಕೌಶಲ ಕಲಿಸುವುದು ಮಾಸ್ಟರ್ ಕ್ಲಾಸ್‌ನ ಉದ್ದೇಶವಾಗಿದ್ದು, ಮಂಗಳೂರಿನಲ್ಲಿ ಪ್ರಪ್ರಥಮ ಲೈವ್ ಕಿಚನ್ ಸೆಟ್ ಅಪ್ ಸ್ಟೂಡಿಯೊ ತೆರಯಲಿದೆ. ಕೋರ್ಸ್ ಪೂರ್ಣಗೊಳಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
ಮಾಸ್ಟರ್ ಕ್ಲಾಸ್ ತರಗತಿಗಳು ಫೆ. 17ರಿಂದ ಆರಂಭವಾಗಲಿದೆ. ಐಡಿಎಸ್‌ನ ನಿರ್ದೇಶಕಿ ನಫೀಸಾ ಶಿರಿನ್ ಇದರ ನೇತೃತ್ವ ವಹಿಸಲಿದ್ದಾರೆ. ಸಫಿಯಾ ಹಮೀದ್ ಹಾಗೂ ಮರಿಯಮ್ ಅಹ್ಮದ್ ಮಾಸ್ಟರ್ ಕ್ಲಾಸ್ ಉದ್ಘಾಟಿಸಲಿದ್ದಾರೆ.










