ಫೆ 15 -28: ಎಸ್ಸೆಸ್ಸೆಫ್ ವಿಸ್ಡಮ್‌ನಿಂದ ಪರೀಕ್ಷಾ ಪೂರ್ವ ತರಬೇತಿ
ಮಂಗಳೂರು: ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಸಮಿತಿಯಿಂದ ಸೆಕ್ಟರ್ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 'ಹೌ ಟು ಫೇಸ್ ಎಕ್ಸಾಂ ?' ಏಕದಿನ ಕಾರ್ಯಾಗಾರವು ಫೆ. 15 ರಿಂದ 28 ರೊಳಗಾಗಿ ರಾಜ್ಯದ ಎಲ್ಲಾ ಸೆಕ್ಟರ್ ಕೇಂದ್ರಗಳಲ್ಲಿ ನಡೆಯಲಿದೆ.
ವಿದ್ಯಾರ್ಥಿಗಳು ಸಮೀಪದ ಸೆಕ್ಟರ್ ಕೇಂದ್ರಗಳಿಗೆ ಹೋಗಿ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





