ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ವಾರ್ಷಿಕ ಮಹಾಸಭೆ

ಬಂಟ್ವಾಳ, ಫೆ.14: ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಆಲಡ್ಕ ಎಸ್ಸೆಸ್ಸೆಫ್ ಸೆಕ್ಟರ್ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಹಾಲಿ ಸಮಿತಿಯನ್ನು ಸ್ವಲ್ಪ ಬದಲಾವಣೆಯೊಂದಿಗೆ 2020ನೇ ಸಾಲಿಗೆ ಮುಂದುವರಿಸಲಾಯಿತು. ಅಧ್ಯಕ್ಷರಾಗಿ ಉಸ್ಮಾನ್ ಸಖಾಫಿ ಸಜಿಪ, ಪ್ರ.ಕಾರ್ಯದರ್ಶಿಯಾಗಿ ಪಿ.ಎಸ್ ಇಬ್ರಾಹಿಂ ಆಲಡ್ಕ, ಕೋಶಾಧಿಕಾರಿಯಾಗಿ ಸಲಾಂ ಕಾರಾಜೆ ಮತ್ತು ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಮೀಮ್ ಆಲಡ್ಕ ಅವರನ್ನು ಮರು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ 'ಭಯ ಬಿಡಿ, ಭರವಸೆ ಇಡಿ' ಎಂಬ ವಿಷಯದಲ್ಲಿ ಬದ್ರುದ್ದೀನ್ ಅಹ್ಸನಿ ಕೊಳಕೆ ತರಗತಿ ಮಂಡಿಸಿದರು. ಫೆ.21ರಂದು ಕಾರಾಜೆಯಲ್ಲಿ ನಡೆಯುವ ಪೇರೋಡ್ ಉಸ್ತಾದರ ಪ್ರಭಾಷಣದ ಪ್ರಚಾರಾರ್ಥ ಪೋಸ್ಟರ್ ಅನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಪ್ರ.ಕಾರ್ಯದರ್ಶಿ ವರದಿ ವಾಚಿಸಿದರು.
ವೀಕ್ಷಕರಾಗಿ ಡಿವಿಷನ್ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಮತ್ತು ಕೋಶಾಧಿಕಾರಿ ಅಲೀ ಮದನಿ ಆಗಮಿಸಿದ್ದರು. ಡಿವಿಷನ್ ಅಧ್ಯಕ್ಷ ಅಕ್ಬರ್ ಮದನಿ ಆಲಂಪಾಡಿ, SJM ಸಜೀಪ ರೇಂಜ್ ಪ್ರ.ಕಾರ್ಯದರ್ಶಿ ಮಜೀದ್ ಸಖಾಫಿ ಮೆಲ್ಕಾರ್, ಸೆಕ್ಟರ್ ಉಪಾಧ್ಯಕ್ಷ ಮುಝಮ್ಮಿಲ್ ಸಖಾಫಿ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಹಾಫಿಳ್ ತೌಸೀಫ್ ಹಿಮಮಿ ಮತ್ತು ಇತರ ಕಾರ್ಯಕರ್ತರ ಹೆಸರಿನಲ್ಲಿ ತಹ್ಲೀಲ್ ಹೇಳಿ ಪ್ರಾರ್ಥನೆ ಮಾಡಲಾಯಿತು.











