ಮಹಾನಗರ ಪಾಲಿಕೆಯ 200 ನೌಕರರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಹ್ಯಾಕರ್ ಗಳು!
ಹೊಸದಿಲ್ಲಿ,ಫೆ.15: ಈ ತಿಂಗಳ ಮೊದಲ ವಾರದಲ್ಲಿ ಹೊಸದಿಲ್ಲಿ ಮಹಾನಗರ ಪಾಲಿಕೆ (ಎನ್ಡಿಎಂಸಿ)ಯ 200ಕ್ಕೂ ಅಧಿಕ ನೌಕರರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿರುವ ಹ್ಯಾಕರ್ ಗಳು ಹಣವನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್ಲೈನ್ ವಂಚನೆಯ ಬಗ್ಗೆ ಪೊಲೀಸರಲ್ಲಿ ಕೇವಲ ಎರಡು ದೂರುಗಳು ದಾಖಲಾಗಿವೆ. ಆದರೆ 200ಕ್ಕೂ ಅಧಿಕ ನೌಕರರು ಈ ವಂಚನೆಗೆ ಬಲಿಯಾಗಿದ್ದಾರೆ ಎಂದುಎನ್ಡಿಎಂಸಿ ನೌಕರರ ಯೂನಿಯನ್ ಹೇಳಿದೆ.
ವಿವಿಧ ಎಟಿಎಂಗಳ ಮೂಲಕ ಹಣವನ್ನು ಹಿಂದೆಗೆದುಕೊಳ್ಳಲಾಗಿದ್ದು,ತನ್ನ ಸದಸ್ಯರು ಲಕ್ಷಾಂತರ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಯೂನಿಯನ್ ಎನ್ಡಿಎಂಸಿ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ದುಷ್ಕರ್ಮಿಗಳು ನೌಕರರ ಎಟಿಎಂ ಕಾರ್ಡ್ಗಳ ಕ್ಲೋನಿಂಗ್ ಮೂಲಕ ಈ ವಂಚನೆಯನ್ನು ನಡೆಸಿರುವಂತಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story