ಪಿಪಿಸಿಯಲ್ಲಿ ಫೆ.20ಕ್ಕೆ ಮುದ್ದಣ-150
ಉಡುಪಿ, ಫೆ.15: ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಘಟಕ ಹಾಗೂ ಕವಿ ಮುದ್ದಣ 150ನೇ ವರ್ಷಾಚರಣಾ ಸಮಿತಿ ನಂದಳಿಕೆ ಇವುಗಳ ಆಶ್ರಯದಲ್ಲಿ ಮುದ್ದಣ-150ನೇ ವರ್ಷಾಚರಣೆಯು ಫೆ.20ರ ಗುರುವಾರ ಅಪರಾಹ್ಣ 3:30ಕ್ಕೆ ಕಾಲೇಜಿನಲ್ಲಿ ನಡೆಯಲಿದೆ.
ಉಡುಪಿ ಶ್ರೀಅದಮಾರು ಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್. ಸಾಮಗ, ಕಾಲೇಜಿನ ಗೌರವ ಕೋಶಾಧಿಕಾರಿ ಪ್ರದೀಪ್‌ಕುಮಾರ್, ನಂದಳಿಕೆ ಬಾಲಚಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮಕ್ಕೆ ಮೊದಲು ಮುದ್ದಣನ ಯಕ್ಷಗಾನ ಪ್ರಸಂಗಗಳ ಆಯ್ದಪದ್ಯಗಳನ್ನು ಭಾಗವತ ಕಿರಣ್ ಹೆಗಡೆ ಹಾಡಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
Next Story





