‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿ ಇನ್ನಿಬ್ಬರು ಭಾರತೀಯರಿಗೆ ಸೋಂಕು

ಟೋಕಿಯೊ, ಫೆ. 17: ಜಪಾನ್‌ನ ಯೊಕೊಹಾಮ ಕರಾವಳಿಯಲ್ಲಿ ಲಂಗರು ಹಾಕಿರುವ ‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿರುವ ಇನ್ನಿಬ್ಬರು ಭಾರತೀಯರಲ್ಲಿ ಕೊರೋನವೈರಸ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಹಡಗಿನಲ್ಲಿರುವ ಭಾರತೀಯರ ಪೈಕಿ ಸೋಂಕಿಗೊಳಗಾದವರ ಸಂಖ್ಯೆ 6ಕ್ಕೇರಿದೆ.
ಭಾರತೀಯರನ್ನು ತೆರವುಗೊಳಿಸುವ ಸಾಧ್ಯತೆಗಳನ್ನು ಸರಕಾರ ಪರಿಶೀಲಿಸುತ್ತಿದೆ ಎಂದು ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಗಳು ತಿಳಿಸಿವೆ.
‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿ ಒಟ್ಟು 3,711 ಜನರಿದ್ದು ಅವರ ಪೈಕಿ 132 ಸಿಬ್ಬಂದಿ ಮತ್ತು 6 ಪ್ರವಾಸಿಗರು ಸೇರಿದಂತೆ 138 ಮಂದಿ ಭಾರತೀಯರು.
ಹೊಸದಾಗಿ ಇಬ್ಬರು ಭಾರತೀಯರಲ್ಲಿ ಸೋಂಕು ಇರುವುದು ರವಿವಾರ ಪತ್ತೆಯಾಗಿದೆ.
Next Story





