ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ 2 ಲಕ್ಷ ರೂ. ಚೆಕ್ ವಿತರಿಸಿದ 'ಟೀಂ ಬಿ-ಹ್ಯೂಮನ್ ಮಂಗಳೂರು'

ಕೊಡಗು : ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಕುಶಾಲನಗರದ ಜಾಬಿರ್ ನಿಝಾಮಿ ಎಂಬವರ ಎರಡು ವರ್ಷದ ಮಗುವಿನ ಚಿಕಿತ್ಸೆಗೆ 2 ಲಕ್ಷ ರೂ. ಚೆಕ್ ವಿತರಿಸುವ ಮೂಲಕ ಟೀಂ ಬೀ-ಹ್ಯೂಮನ್ ಮಾನವೀಯತೆ ಮೆರೆದಿದೆ.
ಮಗುವಿನ ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ರೂ. ವ್ಯಯಿಸಲಾಗಿದೆ. ಮದ್ರಸ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಜಾಬಿರ್ ನಿಝಾಮಿಯವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ತನ್ನ ಮಗುವಿನ ಚಿಕಿತ್ಸೆಯನ್ನು ಮುಂದುವರಿಸಲು ಸಹಕರಿಸುವಂತೆ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದರು.
ಮಂಗಳೂರಿನ ಸಾಮಾಜಿಕ ಸಂಸ್ಥೆಯಾದ ಟೀಂ ಬಿ ಹ್ಯೂಮನ್ ಇದನ್ನು ಗಮನಿಸಿದ್ದು, ದಾನಿಗಳಿಂದ ಸಂಗ್ರಹಿಸಿದ ಎರಡು ಲಕ್ಷ ರೂ. ಮೊತ್ತದ ಚೆಕ್ಕನ್ನು ಮಗುವಿನ ತಂದೆಗೆ ಹಸ್ತಾಂತರಿಸಿದೆ. ಟೀಂ ಬಿ-ಹ್ಯೂಮನ್ ಮಂಗಳೂರು ನಿಯೋಗದಲ್ಲಿ ಆಸಿಫ್ ಡೀಲ್ಸ್, ಇಮ್ತಿಯಾಝ್, ಪ್ರದೀಪ್ ಕೊಟ್ಟಾರಿ, ಫಝಲ್ ಕಣ್ಣೂರು , ರಫೀಕ್ ತಲಶ್ಶೇರಿ ಇದ್ದರು.
Next Story





