Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪ್ರತಿಭಟನೆ ಜನತಂತ್ರದ ಜೀವಾಳ

ಪ್ರತಿಭಟನೆ ಜನತಂತ್ರದ ಜೀವಾಳ

ವಾರ್ತಾಭಾರತಿವಾರ್ತಾಭಾರತಿ18 Feb 2020 11:56 PM IST
share
ಪ್ರತಿಭಟನೆ ಜನತಂತ್ರದ ಜೀವಾಳ

ಜಗತ್ತಿನ ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟನೆ ಎಂಬುದು ಪ್ರಶ್ನಾತೀತ.ಜನತಂತ್ರದ ಆರೋಗ್ಯದ ದೃಷ್ಟಿಯಿಂದ ಜನರ ಪ್ರತಿರೋಧ, ಪ್ರತಿಭಟನೆ ಸದಾ ಜೀವಂತವಾಗಿರಬೇಕು. ಅನೇಕ ಬಾರಿ ಸರಕಾರ ಅನ್ಯಾಯ ಮಾಡಿದಾಗ ಜನರು ಪ್ರತಿಭಟನೆ ಮಾಡಿ ಸರಕಾರವನ್ನು ಎಚ್ಚರಿಸಿ ಸರಿ ದಾರಿಗೆ ತಂದ ನೂರಾರು ಉದಾಹರಣೆಗಳಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಚುನಾಯಿಸುವುದರಿಂದ ತಾವು ಚುನಾಯಿಸಿದ ಸರಕಾರ ತಪ್ಪುಮಾಡಿದಾಗ ಜನರು ಬೀದಿಗಿಳಿದು ಹೋರಾಡಲೇ ಬೇಕಾಗುತ್ತದೆ. ಪಕ್ಷ ಯಾವುದಾದರೂ ಇರಲಿ ಜನರ ಪ್ರತಿಭಟನೆಯ ಧ್ವನಿ ಸದಾ ಜೀವಂತವಾಗಿರಬೇಕು. ಆದರೆ ಇತ್ತೀಚೆಗೆ ನಮ್ಮ ದೇಶದಲ್ಲಿ ಜನರ ಪ್ರತಿಭಟನೆಯ ಬಗ್ಗೆ ಪ್ರಭುತ್ವದ ಅಸಹನೆ ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ.

ಅಧಿಕಾರದಲ್ಲಿ ಇರುವವರನ್ನು ಪ್ರಶ್ನಿಸುವುದೇ ಅಪರಾಧವಾಗಿ ಪರಿಗಣಿಸಲ್ಪಡಲಾಗುತ್ತಿದೆ. ಹೇಗಾದರೂ ಮಾಡಿ ಅವರ ಧ್ವನಿಯನ್ನು ಹತ್ತಿಕ್ಕುವ ಮಸಲತ್ತುಗಳು ಸರಕಾರದಿಂದಲೇ ನಡೆಯುತ್ತಿವೆ. ಆಳುವ ಪಕ್ಷದ ನೀತಿ, ಧೋರಣೆಗಳನ್ನು ಹಾಗೂ ಪ್ರಧಾನಿಯನ್ನು ಟೀಕಿಸಿದರೆ ದೇಶದ್ರೋಹದ ಹಣೆಪಟ್ಟಿ ಕಟ್ಟಿ ಬಾಯಿ ಮುಚ್ಚಿಸಲು ಯತ್ನಿಸಲಾಗುತ್ತಿದೆ. ಅನೇಕ ಬಾರಿ ಚಳವಳಿಗಾರರನ್ನು ಜೈಲಿಗೆ ದಬ್ಬಲಾಗುತ್ತಿದೆ. ಚಳವಳಿಗಾರರಿಂದ ಸಾರ್ವಜನಿಕ ಜೀವನಕ್ಕೆ ವ್ಯತ್ಯಯ ಉಂಟಾದರೆ ಸರಕಾರ ಕ್ರಮ ಕೈಗೊಳ್ಳಲು ಅಭ್ಯಂತರವಿಲ್ಲ. ಆದರೆ ಶಾಂತಿಯುತ ಆಂದೋಲನ ನಡೆಸಿದವರನ್ನು ಹತ್ತಿಕ್ಕುವುದು ಸರಿಯಲ್ಲ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರಿಗೆ ಜನರ ಪ್ರತಿಭಟನೆಯನ್ನು ಸಹಿಸಲು ಆಗುತ್ತಿಲ್ಲ. ರಾಜ್ಯದ ಅಧಿಕಾರವೆಲ್ಲವೂ ಬೆಂಗಳೂರಿನಲ್ಲಿ ಕೇಂದ್ರೀಕರಣಗೊಂಡಿರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳ ಜನ ರಾಜಧಾನಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕ ಬಾರಿ ದೇಶದ ರಾಜಧಾನಿ ದಿಲ್ಲಿಗೂ ಹೋಗುತ್ತಾರೆ. ಇದನ್ನು ಪ್ರಭುತ್ವ ಸಹಾನುಭೂತಿಯಿಂದ ನೋಡಬೇಕು. ಚಳವಳಿ ಮಾಡುವ ಜನರನ್ನು ಶತ್ರುಗಳಂತೆ ನೋಡಬಾರದು. ಬೆಂಗಳೂರಿನ ಪೊಲೀಸ್ ಇಲಾಖೆ ಇತ್ತೀಚೆಗೆ ಪ್ರತಿಭಟನೆಯನ್ನು ಹತ್ತಿಕ್ಕಲು ಅನುಸರಿಸಿದ ತಂತ್ರ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಬೆಂಗಳೂರಿನ ಪುರಭವನದ ಮೆಟ್ಟಿಲ ಮೇಲೆ ಪ್ರತಿಭಟನಾ ಧರಣಿ ನಡೆಸಲು ಪರವಾನಿಗೆ ಬೇಕಿದ್ದರೆ ಹತ್ತು ಲಕ್ಷ ರೂಪಾಯಿವರೆಗಿನ ಬಾಂಡ್ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಹಿಂದೆ ಈ ಮೊತ್ತ ಹತ್ತು ಸಾವಿರ ರೂಪಾಯಿ ಇತ್ತು. ಈಗ ದಿಢೀರನೇ ಹತ್ತು ಲಕ್ಷ ರೂಪಾಯಿಗೆ ಹೆಚ್ಚಿಸಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡುವವರು ಕೆಲಸಕ್ಕೆ ಬಾರದವರು, ಸುಮ್ಮನೆ ಮಾಡುತ್ತಾರೆ ಎಂದು ಪೊಲೀಸರು ಭಾವಿಸಿದಂತೆ ಕಾಣುತ್ತದೆ. ಆದರೆ ವಾಸ್ತವವಾಗಿ ಪ್ರತಿಭಟನೆಗೆ ಬರುವವರು ಈ ಸಮಾಜವನ್ನು ಕಟ್ಟಿದ ದುಡಿಯುವ ಜನ.ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ಅಸಂಘಟಿತ ನೌಕರರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು, ವಿದ್ಯಾರ್ಥಿಗಳು ತಮ್ಮ ಕೂಗನ್ನು ಸರಕಾರದ ಕಿವಿಗೆ ಮುಟ್ಟಿಸಲು ಬರುತ್ತಾರೆ. ಈ ಪ್ರತಿಭಟನೆಗಳಲ್ಲಿ ಅನೇಕ ಬಾರಿ ಸಮಾಜದ ಹಿರಿಯರು, ಗಣ್ಯರು, ಸಾಹಿತಿ, ಕಲಾವಿದರು ಪಾಲ್ಗೊಳ್ಳುತ್ತಾರೆ. ಬಹುತೇಕ ಮಾತ್ರವಲ್ಲ ನೂರಕ್ಕೆ ನೂರರಷ್ಟು ಸಂದರ್ಭಗಳಲ್ಲಿ ಈ ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯುತ್ತವೆ. ಇಂತಹ ಸಾತ್ವಿಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಹತ್ತು ಲಕ್ಷ ರೂಪಾಯಿ ನಿಗದಿ ಪಡಿಸಿದ ಪೊಲೀಸರ ಕ್ರಮ ಸರಿಯಲ್ಲ. ಪೊಲೀಸರ ಮೂಲಕ ಜನರ ಧ್ವನಿಯನ್ನು ಹತ್ತಿಕ್ಕಲು ರಾಜ್ಯದ ಬಿಜೆಪಿ ಸರಕಾರ ಹುನ್ನಾರ ನಡೆಸಿರುವುದನ್ನು ಎಲ್ಲರೂ ಖಂಡಿಸಬೇಕಾಗಿದೆ.

ಈ ಮುಂಚೆ ಅಂದರೆ ಎಪ್ಪತ್ತರ ದಶಕದ ಕೊನೆಯವರೆಗೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲು ಅವಕಾಶವಿತ್ತು. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ಅದನ್ನು ನಿರ್ಬಂಧಿಸಿ ಪ್ರತಿಭಟನೆಗೆ ವಿಧಾನಸೌಧದ ಎದುರಿನ ಕಬ್ಬನ್ ಪಾರ್ಕ್‌ನಲ್ಲಿ ಜಾಗವನ್ನು ನಿಗದಿಗೊಳಿಸಲಾಯಿತು. ಆನಂತರ ಮುಂದೆ ಬಂದ ಸರಕಾರಗಳು ಈ ಪ್ರತಿಭಟನೆಯನ್ನು ಒಂದು ಕಿ.ಮೀ. ದೂರದ ಸ್ವಾತಂತ್ರ್ಯ ಉದ್ಯಾನಕ್ಕೆ ದಬ್ಬಿದವು. ಅಲ್ಲಿ ಜನರ ಗಮನ ಸೆಳೆಯಲು ಆಗುವುದಿಲ್ಲ ಎಂದು ಜನರೇ ಕ್ರಮೇಣ ಬೆಂಗಳೂರಿನ ಪುರಭವನದ ಬಳಿ ಸೇರಿ ಪ್ರತಿಭಟನೆ ನಡೆಸತೊಡಗಿದರು. ಇಂತಹ ಶಾಂತಿಯುತ ಪ್ರತಿಭಟನೆಯನ್ನು ಸಹಿಸಲು ಈ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.
ಪ್ರತಿಭಟನೆ ನಡೆಸುವವರು ಕಾನೂನು ಉಲ್ಲಂಘನೆ ಮಾಡಿದರೆ ಪೊಲೀಸರು ಕ್ರಮ ಕೈಗೊಳ್ಳಲು ಅಭ್ಯಂತರವಿಲ್ಲ. ಆದರೆ ಜನರ ಬಾಯಿ ಮುಚ್ಚಿಸಲು ಕಠಿಣ ನಿಯಮಾವಳಿ ರೂಪಿಸುವುದು ಸರಿಯಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ರೈತ ಚಳವಳಿ ಮೂಲಕ ಉನ್ನತ ಸ್ಥಾನಕ್ಕೆ ಬಂದವರು. ತಕ್ಷಣ ಅವರು ಮಧ್ಯಪ್ರವೇಶಿಸಿ ಪೊಲೀಸರ ಈ ಜನವಿರೋಧಿ, ಜನತಂತ್ರ ವಿರೋಧಿ ಕ್ರಮವನ್ನು ವಾಪಸ್ ಪಡೆಯುವಂತೆ ಕ್ರಮ ಕೈಗೊಳ್ಳಬೇಕು. ಪ್ರತಿಪಕ್ಷಗಳೂ ಸದನದಲ್ಲಿ ಈ ಬಗ್ಗೆ ಧ್ವನಿಯೆತ್ತಬೇಕು. ಜನ ಚಳವಳಿಗೆ ಯಾವುದೇ ನಿಯಂತ್ರಣ ಬೇಡ.

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವ ಯಾವ ಪಕ್ಷದ ಸರಕಾರವೂ ಜನ ಪ್ರತಿಭಟನೆಯನ್ನು ನಿರ್ಬಂಧಿಸುವುದಿಲ್ಲ. ಕೇರಳದಂತಹ ನೂರಕ್ಕೆ ನೂರರಷ್ಟು ಸಾಕ್ಷರತೆ ಇರುವ ರಾಜ್ಯದಲ್ಲಿ ಜನರು ಧರಣಿ ಮಾಡಿ ತಮ್ಮ ಅಹವಾಲು ಹೇಳಿಕೊಳ್ಳಲಿ ಎಂದು ಅಲ್ಲಿನ ಸರಕಾರ ಶಾಸನ ಸಭೆಯ ಎದುರಿಗೆ ಪ್ರತಿಭಟನೆಗೆಂದು ಶಾಶ್ವತ ಜಾಗವನ್ನು ನಿಗದಿಪಡಿಸಿದೆ. ಅಲ್ಲಿ ಶಾಂತಿಯುತ ಪ್ರತಿಭಟನೆಗಳು ಆಗಾಗ ನಡೆಯುತ್ತವೆ.

 ಆದರೆ ಬಿಜೆಪಿ ಚುನಾವಣೆ ಮೂಲಕ ಅಧಿಕಾರಕ್ಕೆ ಬಂದರೂ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ನಂಬಿಕೆಯಿಲ್ಲ ಎಂಬ ಆರೋಪವಿದೆ. ಈ ಆರೋಪಕ್ಕೆ ಪೂರಕವಾಗಿ ಬಿಜೆಪಿ ನಡೆದುಕೊಂಡು ಬಂದಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೇ ವಿಧಾನಸೌಧದಲ್ಲಿ ಜನ ಸಾಮಾನ್ಯರ ಪ್ರವೇಶಕ್ಕೆ ಬಿಗಿಯಾದ ನಿರ್ಬಂಧ ವಿಧಿಸಲಾಯಿತು. ಈಗ ಪುರಭವನದ ಮುಂದೆ ಪ್ರತಿಭಟನೆಗೆ ಕಡಿವಾಣ ಹಾಕಲು ಹೊರಟಿದೆ. ಇದು ಸರಕಾರಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ. ಈಗಲಾದರೂ ಅದು ತನ್ನ ಲೋಪವನ್ನು ತಿದ್ದಿಕೊಂಡು ಜನರಿಗೆ ಪ್ರತಿಭಟನೆ ಮಾಡಲು ಮುಕ್ತ ಅವಕಾಶ ನೀಡಲಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X