ಎಸ್ಕೆಎಸೆಸ್ಸೆಫ್ ಕಿನ್ಯ ಶಾಖೆಯಿಂದ ಸ್ಥಾಪನಾ ದಿನಾಚರಣೆ
ಮಂಗಳೂರು, ಫೆ.20: ಎಸ್ಕೆಎಸೆಸ್ಸೆಫ್ನ 31ನೇ ಸ್ಥಾಪನಾ ದಿನವನ್ನು ಕಿನ್ಯ ಶಾಖೆಯ ವತಿಯಿಂದ ಆಚರಿಸಲಾಯಿತು. ಎಸ್ಕೆಎಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ಕೋಶಾಧಿಕಾರಿ ಸೈಯದ್ ಅಮೀರ್ ತಂಙಳ್ ಅಲ್ಬುಖಾರಿ ಕಿನ್ಯ ನೆರವೇರಿಸಿದರು.
ಸಮಸ್ತ ವಿದ್ಯಾಭ್ಯಾಸ ಮಂಡಳಿ ಮುದರಿಸ್ ರಿಯಾಝ್ ರಹ್ಮಾನಿ ಕಿನ್ಯ ದುಆಗೈದರು. ದೇರಳಕಟ್ಟೆ ವಲಯ ಪ್ರಧಾನ ಕಾರ್ಯದರ್ಶಿ ಫಾರೂಕ್ ದಾರಿಮಿ ಗ್ರಾಮಚಾವಡಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶೇಖಬ್ಬ ಹಾಜಿ, ಇಬ್ರಾಹೀಂ ಪಡಪ್ಪು, ಕಿನ್ಯ ಶಾಖೆಯ ಕೋಶಾಧಿಕಾರಿಕಾರಿ ಶೇಖ್ ಇಬ್ರಾಹೀಂ, ಕಿನ್ಯ ಶಾಖೆಯ ವರ್ಕಿಂಗ್ ಕಾರ್ಯದರ್ಶಿ ಅರ್ಷಾದ್ ಮೀಂಪ್ರಿ, ಕಿನ್ಯ ಶಾಖೆಯ ಕೌನ್ಸಿಲರ್ ಮುಸ್ತಫ ಫೈಝಿ,ಅಬ್ದುಲ್ ಖಾದರ್ ಕುರಿಯಕ್ಕಾರ್,ಇಕ್ಬಾಲ್ ಮುಸ್ಲಿಯಾರ್, ಮುಝಮ್ಮಿಲ್, ಶಮೀರ್ ಬಿಎ ಉಪಸ್ಥಿತರಿದ್ದರು.
ಕಿನ್ಯ ಶಾಖೆಯ ಅಧ್ಯಕ್ಷ ಇಮ್ರಾನ್ ಅಝ್ಹರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕಿನ್ಯ ವಂದಿಸಿದರು.
Next Story