ಎಸ್ಕೆಎಸೆಸ್ಸೆಫ್ ಗ್ರಾಮಚಾವಡಿ ಶಾಖೆಯಿಂದ ಸ್ಥಾಪನಾ ದಿನಾಚರಣೆ
ಮಂಗಳೂರು,ಫೆ.20: ಎಸ್ಕೆಎಸೆಸ್ಸೆಫ್ನ 31ನೇ ಸ್ಥಾಪನಾ ದಿನವನ್ನು ಗ್ರಾಮಚಾವಡಿ ಶಾಖೆಯ ವತಿಯಿಂದ ಆಚರಿಸಲಾಯಿತು. ಅಲ್ಅಖ್ಸಾ ಮಸೀದಿಯ ಅಧ್ಯಕ್ಷ ಮುುಹಮ್ಮದ್ ಮೋನು ಧ್ವಜಾರೋಹಣಗೈದರು.
ಮಸೀದಿಯ ಖತೀಬ್ ಶಾಹ್ಜಹಾನ್ ಮಖ್ದೂಮಿ ದುಆಗೈದರು. ಗ್ರಾಮಚಾವಡಿ ಶಾಖೆಯ ಕಾರ್ಯದರ್ಶಿ ಹನೀಫ್ ದಾರಿಮಿ ಸ್ವಾಗತಿಸಿದರು. ಗ್ರಾಮಚಾವಡಿ ಶಾಖೆಯ ಅಧ್ಯಕ್ಷ ಹಂಝ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಫಾರೂಕ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಶ್ರಫ್ ಉಸ್ತಾದ್,ಹನೀಫ್ ಉಸ್ತಾದ್, ಹುಸೈನಾಕ, ಖಾದರಾಕ, ಇಸ್ಮಾಯಿಲ್, ನಝೀರ್, ಸಿರಾಜ್, ಹನೀಫ್ ಹಾಜಿ, ಹನೀಫ್, ಡಾ.ಫಕ್ರುದ್ದೀನ್, ಮುಹಮ್ಮದ್, ಅಬ್ದುಲ್ ಮಜೀದ್, ಸಿನಾನ್ ಮತ್ತಿತರರು ಉಪಸ್ಥಿತರಿದ್ದರು.
Next Story