ಉಡುಪಿ: ಖಾಸಗಿ ಬಸ್ - ಸ್ಕೂಟಿ ಢಿಕ್ಕಿ; ಮಹಿಳೆ ಮೃತ್ಯು

ಉಡುಪಿ, ಫೆ. 20: ಖಾಸಗಿ ಬಸ್ ಮತ್ತು ಸ್ಕೂಟಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗರ್ಭಿಣಿ ಮಹಿಳೆ ಮೃತಪಟ್ಟ ಘಟನೆ ಇಂದು ರಾತ್ರಿ ಕಿನ್ನಿಮುಲ್ಕಿ ಸಮೀಪ ನಡೆದಿದೆ.
ಮೃತರನ್ನು ಅಲೆವೂರು ಗ್ರಾಮ ಪಂಚಾಯತ್ ಸದಸ್ಯ ಸುಧಾಕರ್ ಪೂಜಾರಿ ಎಂಬವರ ಪತ್ನಿ, ಬ್ಯೂಟಿ ಪಾರ್ಲರ್ ಮಾಲಕಿ ಅಂಬಾಲಪಾಡಿ ಕಪ್ಪೆಟ್ಟು ನಿವಾಸಿ ಮಮತ ಪೂಜಾರಿ(35) ಎಂದು ಗುರುತಿಸಲಾಗಿದೆ.
ಕಿನ್ನಿಮುಲ್ಕಿ ಪೆಟ್ರೊಲ್ ಪಂಪ್‌ನಿಂದ ಪೆಟ್ರೊಲ್ ತುಂಬಿಸಿ ಗೋವಿಂದ ಕಲ್ಯಾಣ ಮಂಟಪ ಕಡೆ ಹೋಗುತ್ತಿದ್ದ ಸ್ಕೂಟಿಗೆ ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಸ್ಕೂಟಿ ಸವಾರೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ.
ಈ ಬಗ್ಗೆ ಉಡುಪಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





