ಶಾಹೀನ್ ಬಾಗ್ ಪ್ರತಿಭಟನೆಯಿಂದ ಬಂದ್ ಆಗಿದ್ದ ಪ್ರಮುಖ ರಸ್ತೆ ಮತ್ತೆ ಸಂಚಾರಕ್ಕೆ ಮುಕ್ತ

ಹೊಸದಿಲ್ಲಿ, ಫೆ.21: ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ವಿರುದ್ಧ ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದ ದಿಲ್ಲಿಯ ಶಾಹೀನ್ ಬಾಗ್ ಸಮೀಪದ ಪ್ರಮುಖ ರಸ್ತೆಯನ್ನು 69 ದಿನಗಳ ಬಳಿಕ ಉತ್ತರಪ್ರದೇಶ ಹಾಗೂ ದಿಲ್ಲಿ ಪೊಲೀಸರು ತಡೆಬೇಲಿಯನ್ನು ತೆಗೆಯುವ ಮೂಲಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು.
ಎರಡು ತಿಂಗಳುಗಳಿಂದ ಧರಣಿ ನಿರತರನ್ನು ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಇಬ್ಬರು ಸಂಧಾನಕಾರರು ಭೇಟಿಯಾದ ಮರು ದಿನವೇ ರಸ್ತೆ ಮತ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
‘‘ಟ್ರಾಫಿಕ್ ಪರಿಸ್ಥಿತಿಗೆ ಸಂಬಂಧಿಸಿ ರಚನಾತ್ಮಕ ಪರಿಹಾರ ಕಂಡುಕೊಳ್ಳುವ ಜೊತೆಗೆ ಪ್ರತಿಭಟನೆ ನಡೆಸುವ ತಮ್ಮ ಹಕ್ಕನ್ನು ಕಾಪಾಡಿಕೊಳ್ಳುವಂತೆ ನಾವು ಪ್ರತಿಭಟನಾಕಾರರಲ್ಲಿ ವಿನಂತಿಸಿಕೊಂಡಿದ್ದೆವು ’’ ಎಂದು ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಓರ್ವ ಸಂಧಾನಕಾರರಾಗಿರುವ ಹಿರಿಯ ವಕೀಲ ಸಂಜಯ್ ಹೆಗ್ಡೆ ಪ್ರತಿಭಟನಾಕಾರರನ್ನು ಗುರುವಾರ ಭೇಟಿಯಾದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
Next Story





