ನಿರ್ಭಯಾ ಪ್ರಕರಣ: ಕಾನೂನು ನೆರವು ನಿರಾಕರಿಸಿದ ಪವನ್ ಗುಪ್ತಾ

ಹೊಸದಿಲ್ಲಿ, ಫೆ. 22: ತಿಹಾರ್ ಜೈಲಿನಲ್ಲಿರುವ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಪವನ್ ಗುಪ್ತಾ ತನ್ನ ಹೊಸ ವಕೀಲರನ್ನು ಭೇಟಿಯಾಗಲು ನಿರಾಕರಿಸಿದ್ದಾನೆ.
ಈ ಹಿಂದಿನ ವಕೀಲ ಎ.ಪಿ. ಸಿಂಗ್ ಹಿಂದೆ ಸರಿದ ಬಳಿಕ ಕಳೆದ ವಾರ ಪವನ್ ಗುಪ್ತಾನಿಗೆ ರವಿ ಖಾಝಿ ಅವರನ್ನು ವಕೀಲರನ್ನಾಗಿ ನಿಯೋಜಿಸಲಾಗಿತ್ತು.
ಪವನ್ ಗುಪ್ತಾನಿಗೆ ಪರಿಹಾರಾತ್ಮಕ ಅಥವಾ ಕ್ಷಮಾಧಾನ ಅರ್ಜಿಯಲ್ಲಿ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಇತರ ಮೂವರೊಂದಿಗೆ ಈತನನ್ನು ಮಾರ್ಚ್ 3ರಂದು ಬೆಳಗ್ಗೆ 6 ಗಂಟೆಗೆ ನೇಣಿಗೇರಿಸಲಾಗುವುದು.
ಕಳೆದ ಕೆಲವು ದಿನಗಳಿಂದ ತನಗೆ ಪವನ್ ಗುಪ್ತಾನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಆದುದರಿಂದ ಆತನ ಪರವಾಗಿ ಯಾವುದೇ ಕಾನೂನು ಪರಿಹಾರಕ್ಕೆ ಮನವಿ ಸಲ್ಲಿಸಿಲ್ಲ ಎಂದು ರವಿ ಖಾಝಿ ತಿಳಿಸಿದ್ದಾರೆ.
Next Story





