Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಕಾಶ್ಮೀರ ಎಂದು ಹೇಳಿ, ಶಿಮ್ಲಾವನ್ನು ...

ಕಾಶ್ಮೀರ ಎಂದು ಹೇಳಿ, ಶಿಮ್ಲಾವನ್ನು ತೋರಿಸಿದರಾಯಿತು....

*ಚೇಳಯ್ಯ chelayya@gmail.com*ಚೇಳಯ್ಯ chelayya@gmail.com22 Feb 2020 6:45 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕಾಶ್ಮೀರ ಎಂದು ಹೇಳಿ, ಶಿಮ್ಲಾವನ್ನು  ತೋರಿಸಿದರಾಯಿತು....

‘‘ಸಾರ್ ಆ ಮೈದಾನದಲ್ಲಿ ಬರೇ ಒಂದು ಲಕ್ಷ ಜನ ಸೇರೋಕ್ಕಾಗೋದು...70 ಲಕ್ಷ ಜನರನ್ನು ಸೇರಿಸುವ ಭರವಸೆ ನೀಡಿದ್ದೀರಲ್ಲ?’’ ಚೌಕೀದಾರ್ ಬಳಿ ಆಪ್ತ ಸಹಾಯಕ ಕಂಗಾಲಾಗಿ ಕೇಳಿದ.

‘‘ಎಲ್ಲಾ ಅಕೌಂಟ್‌ಗೆ ಹದಿನೈದು ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಭರವಸೆ ಕೊಟ್ಟು ಚುನಾವಣೆ ಗೆದ್ದಿದ್ದೇನೆ. ಈವರೆಗೆ ಹಾಕಿದ್ದೇನಾ?’’ ಚೌಕೀದಾರ್ ಮರು ಪ್ರಶ್ನಿಸಿದರು.

‘‘ಇಲ್ಲ....’’ ಆ. ಸಹಾಯಕ ಹೇಳಿದ.

‘‘ಹಾಗೆಯೇ ಇದು...’’ ಚೌಕೀದಾರ್ ಗಡ್ಡ ನೀವಿದರು.

‘‘ಆದ್ರೆ ಟ್ರಂಪು ಸಾಹೇಬರು 70 ಲಕ್ಷ ಜನ ಸೇರ್ತಾರೆ ಎನ್ನುವುದನ್ನು ನಂಬಿದ್ದಾರೆ....ಅವರಿಗೆ ಬೇಜಾರಾಗಲ್ವಾ...’’ ಆ. ಸಹಾಯಕ ಕೇಳಿದ.

‘‘ಅವರು ಜನಗಣತಿ ಮಾಡೋಕೆ ಬರ್ತಾ ಇರೋದಾ....ರಸ್ತೆಗೆ ಗೋಡೆ ಕಟ್ಟಿದ ಹಾಗೆ ಮೈದಾನದ ನಾಲ್ಕೂ ದಿಕ್ಕಿಗೆ ಕನ್ನಡ ಇಟ್ರೆ ಆಯಿತು. ಇರುವ ಜನರೇ ಹಲವು ಪಟ್ಟ ಕಾಣ್ತಾರೆ...’’ ಚೌಕೀದಾರ್ ಸಲಹೆ ನೀಡಿದರು. ಆ. ಸಹಾಯಕ ರೋಮಾಂಚನಗೊಂಡ. ಆದರೂ ಸಣ್ಣ ಅನುಮಾನ....‘‘ಸಾರ್...ಆ ಕನ್ನಡಿಯಲ್ಲಿ ಟ್ರಂಪ್ ಸಾಹೇಬರಿಗೆ ಅವರ ಮುಖವೇ ಕಂಡರೆ....’’

‘‘ಕಂಡರೆ ಏನಾಯಿತು...ಅವರಿಗೂ ಖುಷಿಯಾಗುತ್ತೆ....ಆದರೆ ಗುಜರಾತ್ ಅಭಿವೃದ್ಧಿಯ ಮುಖ ಕಾಣದ ಹಾಗೆ ಮಾಡಿದರೆ ಆಯಿತು...ಹಾಗೆಯೇ ಫೋಟೊ ಎಡಿಟ್ ಮಾಡಿ ಸಿಎಎ ವಿರುದ್ಧ ಪ್ರತಿಭಟನೆಗೆ ನೆರೆದ ಜನರನ್ನೆಲ್ಲ ಟ್ರಂಪ್ ಸಾಹೇಬರನ್ನು ನೋಡೋದಕ್ಕೆ ಬಂದಿರೋರು ಎಂದು ಮೀಡಿಯಾಗಳಲ್ಲಿ ಹಾಕಿದರೆ ಆಯಿತು...’’ ಚೌಕೀದಾರ್ ಇನ್ನೊಂದು ಸಲಹೆ ನೀಡಿದರು. ‘‘ಸಾರ್ ಬೇಕಾದರೆ ಕೇಜ್ರಿವಾಲ್ ಪ್ರಮಾಣ ವಚನಕ್ಕೆ ಸೇರಿದ ಜನರನ್ನೂ ಒಟ್ಟಿಗೇ ಸೇರಿಸಬಹುದು...’’ ಆ. ಸಹಾಯಕ ಸಲಹೆ ನೀಡಿದ. ಚೌಕೀದಾರರಿಗೆ ಖುಷಿಯಾಯಿತು.

‘‘ಸಾರ್...ಟ್ರಂಪ್ ಸಾಹೇಬರಿಂದ ಭಾರತಕ್ಕಾಗಿ ಏನೇನು ವರ ಕೇಳಲಿದ್ದೀರಿ ಸಾರ್...’’ ಆ. ಸಹಾಯಕ ಆಸೆಯಿಂದ ಕೇಳಿದ.

‘‘ಟ್ರಂಪ್ ಸಾಹೇಬರ ಪಾದ ಚರಣಗಳಲ್ಲಿ ನಮಗೊಂದು ಆಶ್ರಯಬೇಕು....ಸದಾ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಡುತ್ತಿರಬೇಕು....ಆಗಾಗ ಟ್ವಿಟರ್‌ನಲ್ಲಿ ಮೋದಿ ನಂ. 2 ಅಂತ ಬರೀಬೇಕು....ಭಾರತ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ಆಗಾಗ ಮಾಧ್ಯಮಗಳಿಗೆ ಹೇಳಿಕೆ ನೀಡಬೇಕು....ಈ ಪ್ರಮುಖ ಬೇಡಿಕೆಗಳಿಗೆ ಟ್ರಂಪ್ ಸಹಿ ಹಾಕಬೇಕು ಎಂದು ನಾವು ಒತ್ತಾಯಿಸಿದ್ದೇವೆ’’ ಚೌಕೀದಾರ್ ವಿವರಿಸಿದರು.

‘‘ಪ್ರತಿಯಾಗಿ ನೀವು ಯಾವ್ಯಾವ ಬೇಡಿಕೆಗಳಿಗೆ ಸಹಿ ಹಾಕುತ್ತಿದ್ದೀರಿ ಸಾರ್...?’’ ಆ. ಸಹಾಯಕ ಪ್ರಶ್ನಿಸಿದ.

‘‘ಅವರು ನಮ್ಮಲ್ಲಿರುವ ವಸ್ತುಗಳನ್ನು ಕೇಳುವುದೇ ಭಾರತಕ್ಕೊಂದು ಮರ್ಯಾದೆ. ಪಾಪ....ಒಂದಿಷ್ಟು ಹಾಲು, ಕೋಳಿ, ಕುರಿ ಇತ್ಯಾದಿಗಳನ್ನು ಮಾರಲು ಜಾಗ ಕೇಳುತ್ತಿದ್ದಾರೆ. ವ್ಯಾಪಾರ ಮಾಡುವುದಕ್ಕೆ ಒಂದಿಷ್ಟು ಜಾಗ ಕೇಳುತ್ತಿದ್ದಾರೆ....ಬಹುಶಃ ಮೋದಿ ಪ್ರಧಾನಿಯಾದ ಬಳಿಕ ಈ ದೇಶದ ಮೇಲೆ ಅಮೆರಿಕದ ಕಣ್ಣು ಬಿದ್ದಿದೆ. ಹಿಂದೆಲ್ಲ ಹೀಗೆ, ನಿಮ್ಮ ದೇಶದಲ್ಲಿ ನಾನು ವ್ಯಾಪಾರ ಮಾಡ್ಲಾ ಎಂದು ಯಾರಾದರೂ ಅಮೆರಿಕದ ಅಧ್ಯಕ್ಷರು ಕೇಳಿದ್ದಾರೆಯೇ?’’ಚೌಕೀದಾರ್ ಮರು ಪ್ರಶ್ನಿಸಿದರು. ‘‘ನಮ್ಮ ರೈತರಿಗೆಲ್ಲ ಪ್ರಾಬ್ಲಂ ಆಗತ್ತಂತೆ....’’ ಆ. ಸಹಾಯಕ ಆತಂಕ ವ್ಯಕ್ತಪಡಿಸಿದರು.

 ‘‘ಈ ದೇಶದಲ್ಲಿ ರೈತರಿರುವುದೇ ಪ್ರಾಬ್ಲಂ. ಅವರು ಎಲ್ಲೆಲ್ಲ ಇದ್ದಾರೋ ಅಲ್ಲೆಲ್ಲ ಗೋಡೆಗಳನ್ನು ಕಟ್ಟುವುದಕ್ಕೆ ಹೇಳಿ. ನಮ್ಮ ರೈತರನ್ನು ನೋಡಿ ಟ್ರಂಪ್ ಸಾಹೇಬರು ದೇಶದ ಬಗ್ಗೆ ತಪ್ಪು ತಿಳ್ಕೋಬಾರದು. ಮುಂದಿನ ದಿನಗಳಲ್ಲಿ ನಾವೆಲ್ಲರೂ ಅಮೆರಿಕದ ಕೋಳಿ, ಅಮೆರಿಕದ ಹಾಲು, ಅಮೆರಿಕದ ಪೇಡ ತಿಂದು ಭಾರತ ಅಮೆರಿಕವಾಗಲಿದೆ....’’ ಚೌಕೀದಾರ್ ಹೆಮ್ಮೆಯಿಂದ ಹೇಳಿದರು.

‘‘ಸಾರ್ ಟ್ರಂಪ್ ಭೇಟಿಯಿಂದ ಭಾರತಕ್ಕೆ ಆರ್ಥಿಕವಾಗಿ ಇನ್ನೇನು ಲಾಭ ಇದೆ ಸಾರ್...?’’ ಆ. ಸಹಾಯಕ ಒಂದೊಂದನ್ನೇ ನೋಟ್ ಮಾಡಿಕೊಂಡು ಕೇಳಿದ.

‘‘ನೋಡಿ...ಟ್ರಂಪ್ ಸಾಹೇಬರು ಈ ದೇಶಕ್ಕೆ ಮೊದಲ ಹೆಜ್ಜೆಯನ್ನು ಊರಿದ ನೆಲದ ಮಣ್ಣನ್ನು ನಾವು ಏಲಂ ಮಾಡಲಿದ್ದೇವೆ. ಅದರಿಂದ ಸಿಕ್ಕಿದ ಹಣವನ್ನು ಖಜಾನೆಗೆ ಸೇರಿಸಲಿದ್ದೇವೆ....ತಾಜ್‌ಮಹಲ್‌ಗೆ ಟ್ರಂಪ್ ಮತ್ತು ಅವರ ಪತ್ನಿ ಭೇಟಿ ನೀಡುವುದರಿಂದ ತಾಜ್‌ಮಹಲ್‌ನ ಹಿರಿಮೆ ಹೆಚ್ಚಲಿದೆ...ಟ್ರಂಪ್ ಮತ್ತು ನಾನು ಒಟ್ಟಾಗಿ ಕುಳಿತುಕೊಳ್ಳುವ ವೇದಿಕೆಯನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾಡಲಿದ್ದೇವೆ. ಇದು ಮುಂದೆ ಬೃಹತ್ ಪ್ರವಾಸಿ ತಾಣವಾಗಿ ಭಾರತದ ಆರ್ಥಿಕತೆಯನ್ನು ಹೆಚ್ಚಿಸಲಿದೆ....’’

‘‘ಸಾರ್ ಟ್ರಂಪ್ ಸಾಹೇಬರ ಮಧ್ಯಾಹ್ನದ ಊಟಕ್ಕೆ ಬೀಫ್ ಮಸ್ಟ್ ಅಂತೆ ....ಏನ್ಮಾಡೋದು...ಗೋರಕ್ಷಕರು ದಾಳಿ ಮಾಡಿದರೆ ಕತೆ?’’ ಆ. ಸಹಾಯಕ ದೊಡ್ಡ ಪ್ರಶ್ನೆಯನ್ನು ಮುಂದಿಟ್ಟ.

 ‘‘ಭಾರತದ ಅತ್ಯುತ್ತಮ ತಳಿಯ ಗೋವುಗಳನ್ನು ತಂದು, ಅದರೊಳಗಿರುವ ಎಲ್ಲ ದೇವತೆಗಳನ್ನು ಹೊರಗೆ ಕಳುಹಿಸಿ ಅದನ್ನು ಮಾಂಸ ಮಾಡಿ ಟ್ರಂಪ್ ಸಾಹೇಬರಿಗೆ ಬಡಿಸಲಾಗುತ್ತದೆ. ಗೋವಿನೊಳಗಿರುವ ಯಾವುದೇ ದೇವತೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಮಾಡಲಾಗುವುದಿಲ್ಲ...ಎಂದು ಭರವಸೆ ನೀಡಿದರಾಯಿತು..’’ ಚೌಕೀದಾರ್ ಸಲಹೆ ನೀಡಿದರು. ಎನ್‌ಆರ್‌ಸಿಯಲ್ಲಿ ಬೀದಿ ಪಾಲಾದ ಅಸ್ಸಾಂ ಜನರ ನೆನಪಾಯಿತು ಆ. ಸಹಾಯಕನಿಗೆ ‘‘ಸಾರ್...ಅಲ್ಲಿಂದ ದೇವತೆಗಳು ಹೊರಬಂದರೆ ಅವರು ಎಲ್ಲಿ ನೆಲೆಸಬೇಕು...?’’

‘‘ಅಮೆರಿಕದಿಂದ ವಿಶೇಷ ತಳಿಯ ಗೋವುಗಳನ್ನು ತಂದು ನಮ್ಮ ದೇವತೆಗಳಿಗೆಲ್ಲ ಅಲ್ಲೇ ಆಶ್ರಯ ನೀಡಿದರಾಯಿತು. ಟ್ರಂಪ್ ಸಾಹೇಬರಿಗೆ ಊಟವೂ ಆಯಿತು. ನಮ್ಮ ದೇವತೆಗಳಿಗೆ ಡಿಟೆನ್‌ಶನ್ ಸೆಂಟರ್ ಕೂಡ ಆಯಿತು...’’ ಚೌಕೀದಾರ್ ಸಂತೃಪ್ತಿಯಿಂದ ಹೇಳಿದರು.

‘‘ಸಾರ್...ಧಾರ್ಮಿಕ ಸ್ವಾತಂತ್ರದ ಕುರಿತಂತೆ ತಮಗೆ ಟ್ರಂಪ್ ಅವರು ಸಲಹೆಗಳನ್ನು ನೀಡುತ್ತಾರಂತೆ....’’ ಆ. ಸಹಾಯಕ ಕಳವಳದಿಂದ ಕೇಳಿದ.

‘‘ಆಗ ಪಾಕಿಸ್ತಾನವೇ ಎಲ್ಲಕ್ಕೂ ಕಾರಣ ಎಂದರೆ ಆಯಿತು. ಪಾಕಿಸ್ತಾನದಲ್ಲಿರುವ ಧಾರ್ಮಿಕ ಸ್ವಾತಂತ್ರಕ್ಕಿಂತ ಭಾರತದಲ್ಲಿ ಚೆನ್ನಾಗಿದೆ ಎಂದು ಹೇಳೋಣ’’

‘‘ಕಾಶ್ಮೀರ ನೋಡ್ಬೇಕು ಅಂದ್ರೆ.....’’

‘‘ಕಾಶ್ಮೀರಕ್ಕೆ ಫುಲ್ ಗೋಡೆ ಕಟ್ಟಿ. ನೇರವಾಗಿ ಶಿಮ್ಲಾಕ್ಕೆ ಕರಕೊಂಡು ಹೋಗಿ, ಅದನ್ನೇ ಕಾಶ್ಮೀರ ಎಂದರೆ ಆಯಿತು...’’

‘‘ಗುಜರಾತ್‌ನ ಶಾಲೆಗಳನ್ನು ತೋರಿಸಿ ಅಂದ್ರೆ....’’

‘‘ನೇರವಾಗಿ ದಿಲ್ಲಿಯ ಕೇಜ್ರಿವಾಲ್ ಶಾಲೆಗಳನ್ನು ತೋರಿಸಿ ಇದೇ ಗುಜರಾತ್‌ನ ಶಾಲೆ ಎಂದರೆ ಆಯಿತು...’’

 ಆ. ಸಹಾಯಕ ಮನಸ್ಸು ನಿರಾಳವಾಯಿತು. ಸ್ವಲ್ಪ ಹೊತ್ತಲ್ಲೇ ಮತ್ತೊಂದು ಪ್ರಶ್ನೆ ತಲೆಯೆತ್ತಿತು ‘‘ಸಾರ್....ಟ್ರಂಪ್ ಅವರು ತಾಜ್‌ಮಹಲ್‌ಗೆ ಪತ್ನಿ ಸಮೇತ ಭೇಟಿ ನೀಡುತ್ತಿದ್ದಾರೆ. ನಿಮ್ಮ ಪತ್ನಿ ಎಲ್ಲಿ ಎಂದು ಕೇಳಿದರೆ ಯಾರನ್ನು ತೋರಿಸುತ್ತೀರಿ?’’

ಚೌಕೀದಾರ್ ಒಮ್ಮೆಲೆ ಗಾಢ ವೌನ ತಳೆದರು. ಆ. ಸಹಾಯಕ ಮೆಲ್ಲಗೆ ಅಲ್ಲಿಂದ ಜಾಗ ತೆರವು ಮಾಡಿದ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
*ಚೇಳಯ್ಯ chelayya@gmail.com
*ಚೇಳಯ್ಯ chelayya@gmail.com
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X