Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಆಹಾರದೊಳಗೆ ಬೈನರಿ

ಆಹಾರದೊಳಗೆ ಬೈನರಿ

ವಾರ್ತಾಭಾರತಿವಾರ್ತಾಭಾರತಿ25 Feb 2020 12:00 AM IST
share
ಆಹಾರದೊಳಗೆ ಬೈನರಿ

ಒಬ್ಬ ಸಸ್ಯಾಹಾರಿಗಾಗಿ ಹತ್ತು ಜನ ಮಾಂಸಾಹಾರಿಗಳು ಕೂಡ ಸಸ್ಯಾಹಾರಿ ಊಟವನ್ನೇ ಮಾಡಬೇಕು ಎಂದು ಬಯಸಲಾಗುತ್ತದೆ. ಇದನ್ನು ಬಯಸುವವರು ಯಾರು ಎಂದು ಪ್ರಶ್ನಿಸಿದರೆ ನೇರವಾದ ಉತ್ತರ ನಮಗೆ ಸಿಗದು, ಕಾರಣ ಸಮಾಜೋರಾಜಕೀಯ ಕಾರಣಗಳು ಮಾಂಸ ತಿನ್ನುವ ಜನರನ್ನೇ ಬದಲು ಮಾಡಿವೆ. ಅಧಿಕಾರವುಳ್ಳವರು ತೋರುವ ದಾರಿಗಳನ್ನು ಎರಡನೆಯ ಮಾತಾಡದೇ ಒಪ್ಪುವ ಹಾಗೆ ಒತ್ತಡ ಹೇರುತ್ತಿವೆ. ಆದರೆ ನಮಗೆ ನಮ್ಮ ಬಹು ಆಹಾರದ ಕ್ರಮಗಳ ಪರಂಪರೆಯ ಬೆಂಬಲ ಇದ್ದಾಗ್ಯೂ ನಮ್ಮ ಬಾಯಿಳು, ಕೈಗಳು ಕಟ್ಟಿಕೊಂಡಿವೆ.

  ಊಟಕ್ಕೆ ಯಾರನ್ನಾದರೂ ಕರೆದರೆ ಅಥವಾ ನಾವೇ ಹೊರಗೆ ಹೋದರೆ ಮೊದಲು ಕೇಳಿಕೊಳ್ಳುವ ಪ್ರಶ್ನೆ, ವೆಜ್ಜೋ? ಅಥವಾ ನಾನ್ ವೆಜ್ಜೋ? ಎಂದು. ಇದೊಂದು ಬೈನರಿ ಭಾರತೀಯ ಸಮಾಜದೊಳಗೆ ಆಳವಾಗಿ ಬೇರುಬಿಟ್ಟಿದೆ. ಇದೊಂದು ಬಗೆಯಲ್ಲಿ ಜಾತಿ ಮತ್ತು ವರ್ಗವನ್ನು ಕಂಡುಕೊಳ್ಳುವ ಮಾರ್ಗವೂ ಹೌದು ಅಷ್ಟೇ ಮಾತ್ರವಲ್ಲ ಅದೊಂದು ಬಗೆಯ ಮಾನಸಿಕ ಸ್ಥಿತಿ ಕೂಡ. ಸಾಮಾಜಿಕ ಅಸ್ಪೃಶ್ಯತೆಯ ಜೊತೆಗೆ ಆಹಾರದ ಅಸ್ಪೃಶ್ಯತೆ ಆಚರಣೆ. ಇಂತಹದಕ್ಕೆ ನೂರೆಂಟು ವಿಜ್ಞಾನ - ಅಜ್ಞಾನದ ಕಾರಣಗಳು, ಉದಾಹರಣೆಗಳು, ಪರಿಣಾಮಗಳ ಕುರಿತು ವಿಜ್ಞಾನಿ, ವೈದ್ಯ ಮತ್ತು ಸಂತರಿಂದ ಗಂಟೆಗಟ್ಟಲೆ ಒಣ ಮಾತುಕತೆಗಳು, ಅತಾರ್ಕಿಕ ವಾಗ್ವಾದಗಳು ಟಿವಿ ಸುದ್ದಿ ಪತ್ರಿಕೆ ಎಲ್ಲ ಕಡೆ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಈಚೆಗೆ ಮಾಂಸಾಹಾರದ ಮೇಲೆ ವಿಪರೀತವಾದ ನಿಯಂತ್ರಣಗಳು ಎಲ್ಲ ಕಡೆಯಲ್ಲೂ ಶುರುವಾಗಿವೆ. ಅದೊಂದು ನೇರ ರಾಜಕೀಯ ಅಜೆಂಡಾ. ಆದರೆ ನಮ್ಮ ನೈಸರ್ಗಿಕ ವಾದ ಅಜೆಂಡಾ ಬೇರೆ ಇದೆ. ಅದು ಆಹಾರ ಸರಪಳಿ. ಒಂದನ್ನೊಂದು ತಿಂದು ಬದುಕುತ್ತಾ ಪ್ರಕೃತಿ ತನ್ನ ಲಭ್ಯ ಸಂಪನ್ಮೂಲಗಳೊಂದಿಗೆ ಸ್ವಯಂ ನಿಯಂತ್ರಣ ವ್ಯವಸ್ಥೆ ಹೊಂದಿದೆ. ಆದರೆ ಆ ವ್ಯವಸ್ಥೆಯನ್ನು ಅತಿಯಾದ ‘ತಿನ್ನುವಿಕೆ’ಯಿಂದ ನಾವು ಒಡೆದು ಕೆಡಿಸಿ ಇಟ್ಟಿದ್ದೇವೆ. ಅದನ್ನೇ ಈಗಲೂ ಮುಂದುವರಿಸುತ್ತಾ ಇನ್ನಷ್ಟು ಗಂಭೀರ ಸ್ವರೂಪದ ಗಾಯಗಳನ್ನು ಮಾಡಿಕೊಳ್ಳುತ್ತಿದ್ದೇವೆ.

ಮನುಷ್ಯನ ವಿಕಾಸದಲ್ಲಿ ಆಹಾರವು ಯಾವುದೇ ಆಯ್ಕೆಗಳಿಂದ ಕೂಡಿರಲಿಲ್ಲ ಬದಲಿಗೆ ಲಭ್ಯತೆಯ ಆಧಾರದ ಮೇಲೆ ನಡೆಯುತ್ತಿತ್ತು. ಹಣ್ಣು ಹಂಪಲು, ಗೆಡ್ಡೆ ಗೆಣಸು, ಬೇಟೆಯ ಹಸಿಮಾಂಸ ನಂತರ ಬೆಂಕಿಯ ಅವಿಷ್ಕಾರವಾದ ಆಮೇಲೆ ಬೇಯಿಸಿದ ಅಥವಾ ಸುಟ್ಟ ಮಾಂಸ ಬಲುರುಚಿಯೂ ಪ್ರಸಿದ್ಧಿಯೂ ಆಯಿತು. ಆ ನಂತರ ಬೇಟೆಗೆ ನಾನಾ ತರಹದ ತಂತ್ರಗಳು ಪ್ರವೇಶ ಮಾಡಿದವು. ಮಾನವ ವಿಕಾಸದ ಜೊತೆಗೆ ಅವನ ಆಹಾರದ ವಿಕಾಸವು ಆಗುತ್ತಲೇ ಬಂತು. ಹಸಿಯಿಂದ ಬೇಯಿಸುವ, ಸುಡುವ ಆನಂತರ ಅದಕ್ಕೆ ಬೇರೆ ಬೇರೆ ಪದಾರ್ಥಗಳನ್ನು ಸೇರಿಸುವ ವಿಧಾನಗಳು ಕೂಡ ಪ್ರಯೋಗಗೊಂಡು ‘ರಸ’ ಪ್ರಜ್ಞೆ ಉಂಟಾಯಿತು. ಈ ರಸಪ್ರಜ್ಞೆಯ ಕಾರಣದಿಂದ ಬೇರೆ ಬೇರೆ ಮಸಾಲೆ ಪದಾರ್ಥಗಳು ಪರಿಚಯಿಸಲ್ಪಟ್ಟವು. ಮುಂದೆ ರುಚಿ ಗ್ರಹಣವು ಬಹುವಾಗಿ ನಡೆದು ಅಡುಗೆಯು ಜೀವನ ಕ್ರಮದ ಒಂದು ಅವಿಭಾಜ್ಯ ಅಂಗವಾಯಿತು. ಈ ಒಂದು ಹಂತದವರೆಗೂ ಆಹಾರ ಅನ್ನುವುದು ಮನುಷ್ಯನ ಮುಕ್ತ ಆಯ್ಕೆಯ ಪದಾರ್ಥವಾಗಿತ್ತು. ಮನುಷ್ಯನ ವಿಕಾಸ ಮತ್ತಷ್ಟು ಆಗಿ ಹೊಸ ಆವಿಷ್ಕಾರಗಳೊಂದಿಗೆ ಆತನ ಧರ್ಮದ ಅಥವಾ ಮತದ ಆವಿಷ್ಕಾರವು ಮೊದಲುಗೊಂಡ ಮೇಲೆ ಆಹಾರದಲ್ಲಿ ವಿಪರೀತಾದ ವೈಪರೀತ್ಯಕ್ಕೆ ಮೊದಲಾಯಿತು.

ಪರಂಪರೆಯ ಪಾಕ

 ಉಪಖಂಡದಲ್ಲಿ ಮಾಂಸ ಎಲ್ಲ ಜಾತಿಮತದ ಜನರ ಆಹಾರವಾಗಿದ್ದುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಮುಂದೆ ಬಂದಂತಹ ಧಾರ್ಮಿಕವಾದ ಸ್ಥಾನಪಲ್ಲಟಗಳು ಇಂತಹ ಸಾರ್ವತ್ರಿಕ ಆಹಾರದ ಸ್ವರೂಪವನ್ನು ಬದಲು ಮಾಡಿಬಿಟ್ಟವು. ರಾಮಾಯಣದಲ್ಲಿ ಸೀತೆಯು ಸರಯೂ ನದಿ ದಾಟಿ ವನವಾಸಕ್ಕೆ ಹೋಗುವಾಗ ಗಂಡ, ಮೈದುನ ಮತ್ತು ತನ್ನನ್ನು ಕ್ಷೇಮವಾಗಿ ದಡವನ್ನು ತಲುಪಿಸಿದರೆ ಗಂಗೆಗೆ ‘ಪಲಾನ್ನ’ (ಮಾಂಸದನ್ನ / ಬಿರಿಯಾನಿ) ಅರ್ಪಿಸುವುದಾಗಿ ಪ್ರಾರ್ಥಿಸುತ್ತಾಳೆ. ಆ ಭಾಗವು ನನ್ನ ಸ್ಮೃತಿಯಲ್ಲಿ ತುಂಬಾ ಬಿಗಿಯಾಗಿ ಉಳಿದುಬಿಟ್ಟಿದೆ. ಆದರೆ ಮುಂದೆ ಜೈನ ಧರ್ಮವು ಹೆಚ್ಚು ಪ್ರಚಲಿತವಾದಂತೆ ವೈದಿಕ ಧರ್ಮವು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಜೈನ ದಂತೆಯೇ ‘ಅಹಿಂಸೆ’ ಮತ್ತು ಸಸ್ಯಾಹಾರಗಳಿಗೆ ತೊಡಗಿಸಿಕೊಂಡಂತೆ ಕಾಣುತ್ತದೆ. ಇದರ ಹೊರತಾಗಿ ವೈದಿಕ ಮತವು ಏಕಾಏಕಿ ಮಾಂಸಾಹಾರವನ್ನು ಕೈಬಿಡುವ ಕಾರಣಗಳು ಗೋಚರಿಸುವುದಿಲ್ಲ. ತದನಂತರವಂತೂ ನೂರೆಂಟು ಮತಗಳು, ಸಿದ್ಧಾಂತಗಳು, ದರ್ಶನಗಳು ಹುಟ್ಟಿಕೊಳ್ಳುತ್ತಾ ಅವುಗಳೆಲ್ಲವೂ ಒಂದೊಂದು ತೆರನಾದ ಆಹಾರ ಕ್ರಮಗಳನ್ನು ರೂಢಿಸಿಕೊಂಡುವು. ಈ ರೂಢಿಯು ನೈಸರ್ಗಿಕವಾದ ಮಾರ್ಗವಾಗಿರದೆ ಸಮಜೋರಾಜಕೀಯವಾದ ಬೇರೆ ನೆಲೆಗಳಿಗೆ ಒಳಪಟ್ಟು ‘ಅಸ್ಪಶ್ಯತೆ’ಯ ಮಗದೊಂದು ಮಾರ್ಗವಾದುವು.

ಆದರೆ ವಿಕಾಸದ ಕಾಲದಿಂದ ನಾವು ಬೆಳೆಸಿಕೊಂಡು ಬಂದಿದ್ದ ಆಹಾರ ಪರಂಪರೆಯೊಂದಿತ್ತಲ್ಲ.. ಅದು ಹೆಚ್ಚು ಆದಿವಾಸಿಗಳಲ್ಲಿ, ಬುಡಕಟ್ಟು ಜನರಲ್ಲಿ ಮತ್ತು ತಳವರ್ಗಗಳಲ್ಲಿ ಮಾತ್ರ ಉಳಿದುಕೊಂಡಿತು. ಮೇಲ್ವರ್ಗಗಳು ತಮ್ಮದೇ ಬೇರೆ ಆಹಾರ ಕ್ರಮಗಳು, ತಿನ್ನುವ ಬಗೆಗಳು ಅದಕ್ಕೆ ಬೇಕಾದ ಸಲಕರಣೆಗಳು ಇತ್ಯಾದಿಗಳನ್ನು ರೂಪಿಸಿಕೊಂಡಿತು. ಹೀಗೆ ರೂಪಿಸಿಕೊಳ್ಳುವಾಗ ಅದಕ್ಕೆ ಇದ್ದದ್ದು ತನ್ನದೇ ಆದ ಒಂದು ಪ್ರತ್ಯೇಕ ಸಮುದಾಯ ಪ್ರಜ್ಞೆ. ಇದು ಮಾನವನ ಸಮಷ್ಟಿ ಪ್ರಜ್ಞೆ ಖಂಡಿತಾ ಅಲ್ಲ. ಭೌಗೋಳಿಕ, ಆಡುನುಡಿ, ಉದ್ಯೋಗ, ಆಹಾರ ಪದಾರ್ಥ ಲಭ್ಯತೆ, ಅಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳು ಇತ್ಯಾದಿಗಳು ಹೆಚ್ಚು ಹೆಚ್ಚು ಪರಿಣಾಮಗಳನ್ನು ಬೀರುತ್ತಾ ಈ ಆಹಾರ ಕ್ರಮಗಳನ್ನು ರೂಪಿಸಿದವು. ನದಿ ಬಯಲಿನ ಜನ, ಸಮುದ್ರದ ಕಿನಾರೆಯ ಜನ, ಬೆಟ್ಟದ ಜನರು, ಬಯಲಿನ ಜನರು, ಕೆಂಪು ಮತ್ತು ಕಪ್ಪುಮಣ್ಣಿನವರು ಹೀಗೆ ನೂರಾರು ಸಂಗತಿಗಳು ಈ ಕ್ರಮ ವಿಚ್ಛೇದನದಲ್ಲಿ ಪಾಲ್ಗೊಂಡಿವೆ. ಈ ವಿಚ್ಛೇದನವು ವೈವಿಧ್ಯತೆಯನ್ನು ಹೆಚ್ಚು ಪೋಷಿಸಿತು. ಭಾಗವಾದಂತೆಲ್ಲಾ ಪದಾರ್ಥ ಬಳಕೆ, ರುಚಿಯ ಗಾಢತೆ ಹೆಚ್ಚಾದವು.

 ಇಲ್ಲಿ ನಮಗೆ ಉಂಟಾದ ಪರಮ ಅನ್ಯಾಯವೆಂದರೆ ಈ ವಿಭಾಗೀಕರಣವು ಮಾಂಸಾಹಾರ ಮತ್ತು ಸಸ್ಯಾಹಾರ ಎಂಬ ಎರಡು ದಾರಿಗಳನ್ನು ಹುಟ್ಟು ಹಾಕಿ ಜಾತಿಗಳ ಆಧಾರದ ಮೇಲೆ ಇಂತಹ ಆಹಾರ ತಿನ್ನಬಹುದು, ಉಳಿದವರು ಆಹಾರವನ್ನು ತಿನ್ನುವಂತಿಲ್ಲ ಎಂಬ ಅಘೋಷಿತ ಧರ್ಮಶಾಸನವು ಜಾರಿಗೆ ಬಂದಿದ್ದು. ಇದರ ಜೊತೆಗೆ ಮಾಂಸ ತಿನ್ನದವರು ‘ಶ್ರೇಷ್ಠ’ರು ಮತ್ತು ‘ಮೇಲುಜಾತಿಯವರು’ ಎನ್ನುವ ಹೊಸನಂಬುಗೆಗಳು ಸೃಷ್ಟಿಯಾದುವು. ಇಂತಹ ಪ್ರಸ್ತಾವವು ಈಗಾಗಲೇ ಚಾಲ್ತಿಯಲ್ಲಿದ್ದ ಧರ್ಮ ಸೂತ್ರಗಳಲ್ಲಿ ತಿದ್ದುಪಡಿಯಾಗುವ ಮೂಲಕ ಸೇರಿಸಲ್ಪಟ್ಟವು. ಅದು ಇವತ್ತಿಗೂ ಹಾಗೆಯೇ ಬೆಳೆದು ಬಂದು ನಿಂತಿದೆ. ಇದನ್ನು ನಾನು ‘ಆಹಾರದ ಅಸ್ಪೃಶ್ಯತೆ’ ಎಂದು ಕರೆಯುತ್ತೇನೆ.

ಉಭಯಹಾರಿಗಳ

ಉಭಯ ಕುಶಲೋಪರಿ

ಆಧುನಿಕ ಕಾಲದ ಧಾವಂತ ಏನನ್ನೂ ಬಿಡುವುದಿಲ್ಲವಾದರೂ ಈ ‘ವೆಜ್ಜು ಮತ್ತು ನಾನ್‌ವೆಜ್ಜು’ ಅಸ್ಪಶ್ಯತೆಯನ್ನು ಏನೂ ಮಾಡಲು ಸಾಧ್ಯವಾಗದೇ ಹೋಯಿತು. ಎರಡರಲ್ಲೂ ಬೆರಗಾಗಿಸುವ ಆಹಾರ ಪದಾರ್ಥಗಳು ಈಗ ಸಿದ್ಧವಾಗುತ್ತವೆ. ಮನೆಮನೆಗೂ ರವಾನೆ ಆಗುತ್ತವೆ. ಖಂಡಾಂತರ ಆಹಾರಕ್ರಮಗಳು ನಮಗೆ ಪರಿಚಯವಾಗಿವೆ. ಅವುಗಳಲ್ಲಿ ಮತ್ತೆ ಮಾಂಸ ಬೆರೆಸುವ ಮತ್ತು ಬೆರೆಸದೇ ಉಳಿಸುವ ಹಲವು ಕ್ರಮಗಳನ್ನು ಮಾರ್ಪಾಟು ಮಾಡಿಕೊಳ್ಳಲಾಗಿದೆ. ಜಾತಿ ಮತ್ತು ವರ್ಗದ ಸಂಘರ್ಷ ಇನ್ನಷ್ಟು ಹಂತಗಳಲ್ಲಿ ಮೇಲಕ್ಕೆ ಹೋಗಿದೆ. ಆದರೆ ಮುಕ್ತ ವ್ಯಾಪಾರಗಳ ಪರಿಣಾಮವಾಗಿ ಎಲ್ಲರೂ ಒಂದೆಡೆ ಕೆಲಸ ಮಾಡುತ್ತೇವೆ, ಸಮಾನವಾಗಿ ಸಂಪಾದನೆ ಮಾಡುತ್ತೇವೆ. ಆದರೆ ಒಂದೇ ಕಡೆ ಇಬ್ಬರು ಊಟ ಮಾಡಲು ಸಾಧ್ಯವಿಲ್ಲ. ಒಬ್ಬ ಸಸ್ಯಾಹಾರಿಗಾಗಿ ಹತ್ತು ಜನ ಮಾಂಸಾಹಾರಿಗಳು ಕೂಡ ಸಸ್ಯಾಹಾರಿ ಊಟವನ್ನೇ ಮಾಡಬೇಕು ಎಂದು ಬಯಸಲಾಗುತ್ತದೆ. ಇದನ್ನು ಬಯಸುವವರು ಯಾರು ಎಂದು ಪ್ರಶ್ನಿಸಿದರೆ ನೇರವಾದ ಉತ್ತರ ನಮಗೆ ಸಿಗದು, ಕಾರಣ ಸಮಾಜೋರಾಜಕೀಯ ಕಾರಣಗಳು ಮಾಂಸ ತಿನ್ನುವ ಜನರನ್ನೇ ಬದಲು ಮಾಡಿವೆ. ಅಧಿಕಾರವುಳ್ಳವರು ತೋರುವ ದಾರಿಗಳನ್ನು ಎರಡನೆಯ ಮಾತಾಡದೇ ಒಪ್ಪುವ ಹಾಗೆ ಒತ್ತಡ ಹೇರುತ್ತಿವೆ. ಆದರೆ ನಮಗೆ ನಮ್ಮ ಬಹು ಆಹಾರದ ಕ್ರಮಗಳ ಪರಂಪರೆಯ ಬೆಂಬಲ ಇದ್ದಾಗ್ಯೂ ನಮ್ಮ ಬಾಯಿಳು, ಕೈಗಳು ಕಟ್ಟಿಕೊಂಡಿವೆ.

ಆಹಾರದ ಬೈನರಿ

 ನಾವು ಒಂದೆಡೆ ಕೂತು ನಮಗೆ ಬೇಕಾದ ಆಹಾರ ಆರಿಸಿಕೊಳ್ಳುವ, ತಿನ್ನುವ ಸ್ವಾತಂತ್ರ ದೊರಕದೇ ಈಗಾಗಲೇ ನಮ್ಮಾಳಗೆ ಸ್ಥಾಪಿತವಾಗಿರುವ ಮಡಿವಂತಿಕೆಯ ಈ ಬೈನರಿಯನ್ನು ಮುಂದುವರಿಸಿದರೆ ಅದು ನಮ್ಮನ್ನು ಇನ್ನಷ್ಟು ಕ್ರೂರವಾದ ಬದುಕಿನ ವ್ಯವಸ್ಥೆಗೆ ಒಗ್ಗಿಸಿಬಿಡುತ್ತದೆ ಮತ್ತು ಅಂತಹ ಒತ್ತಡವನ್ನು ಹೇರುತ್ತಾ ನೈಸರ್ಗಿಕವಾದ ಆಹಾರ ಕ್ರಮಗಳನ್ನು ಸರ್ವನಾಶ ಮಾಡಿ ಕೃತಕವಾದ ಮತ್ತು ಹೆಚ್ಚು ಕೊಳ್ಳುಬಾಕತನದ ಆಹಾರ ಮಾರಾಟ ವ್ಯವಸ್ಥೆಗಳನ್ನು ಸಮಾಜದಲ್ಲಿ ಶಾಶ್ವತವಾಗಿ ನೆಲೆಯೂರಲು ಸಹಾಯ ಮಾಡುತ್ತವೆ. 21ನೇ ಶತಮಾನದ ಉಪಖಂಡದ ಜನರು ಈ ಆಹಾರದ ಬೈನರಿಯನ್ನು ಬಿಡಲೇಬೇಕು. ಅಂದ ಮಾತ್ರಕ್ಕೆ ಎಲ್ಲರೂ ಮಾಂಸ ತಿನ್ನಬೇಕು ಅಥವಾ ತಿನ್ನಬಾರದು ಅಂತಲ್ಲ. ಆದರೆ ಯಾವುದೇ ಕಾರಣಕ್ಕೂ ಇದು ಆಹಾರ ಸಂಸ್ಕೃತಿಯ ಪ್ರಮುಖ ಲಕ್ಷಣವಾಗಿ ಗೋಚರಿಸಬಾರದು, ಮಾಂಸ ತಿನ್ನುವವರನ್ನೋ, ಸೊಪ್ಪುತಿನ್ನುವವರನ್ನೋ ಅಪಹಾಸ್ಯ ಮಾಡುವ ದರಿದ್ರ ಮನಃಸ್ಥಿತಿಗಳಿಂದ ದೂರಾಗಿ ನಮಗೆ ಬೇಕಾದ ಯಾವುದೇ ಆಹಾರವನ್ನು ಮುಕ್ತವಾಗಿ ಆರಿಸಿಕೊಂಡು ಜೊತೆಯಲ್ಲಿ ಯಾವುದೇ ಮಡಿವಂತಿಕೆ ಇಲ್ಲದೆ ತಿನ್ನುವ ಮತ್ತು ಹಂಚಿಕೊಳ್ಳುವ ಪರಂಪರೆಯ ಉದಾರ ನೀತಿಯು ಮತ್ತೆ ನಮ್ಮ ಮನಸ್ಸುಗಳನ್ನು ಪ್ರವೇಶಿಸಬೇಕು. ವರ್ತಮಾನದ ಆಹಾರ ಸಂಸ್ಕೃತಿಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಈ ಬೈನರಿಯನ್ನು ನಾವು ಒಡೆದುಹಾಕಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X