Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಟ್ಟುಗುಳ್ಳ ಬೀಜ, ಮಣ್ಣಿನ ಗುಣದ ಬಗ್ಗೆ...

ಮಟ್ಟುಗುಳ್ಳ ಬೀಜ, ಮಣ್ಣಿನ ಗುಣದ ಬಗ್ಗೆ ಸಂಶೋಧನೆ ಅಗತ್ಯ: ಸೋದೆ ಸ್ವಾಮೀಜಿ

ವಾರ್ತಾಭಾರತಿವಾರ್ತಾಭಾರತಿ27 Feb 2020 10:19 PM IST
share
ಮಟ್ಟುಗುಳ್ಳ ಬೀಜ, ಮಣ್ಣಿನ ಗುಣದ ಬಗ್ಗೆ ಸಂಶೋಧನೆ ಅಗತ್ಯ: ಸೋದೆ ಸ್ವಾಮೀಜಿ

ಉಡುಪಿ, ಫೆ.27: ಉಡುಪಿ ಜಿಲ್ಲೆಯ ವಿಭಿನ್ನ ಬೆಳೆಯಾಗಿರುವ ಮಟ್ಟುಗುಳ್ಳ ವನ್ನು ಮಟ್ಟು ಗ್ರಾಮದ ಭೂಮಿಯಲ್ಲಿ ಬೆಳೆದರೆ ಮಾತ್ರ ಅದರ ನಿಜವಾದ ರುಚಿ ದೊರೆಯಲು ಸಾಧ್ಯವಾಗುತ್ತದೆ. ಆದುದರಿಂದ ಮಟ್ಟು ಗ್ರಾಮದ ಮಣ್ಣಿನ ಗುಣ ಮತ್ತು ಮಟ್ಟುಗುಳ್ಳದ ಬೀಜದ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ಮಾಡ ಬೇಕಾಗಿದೆ ಎಂದು ಸೋದೆ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಎಂಐಎಂ) ವತಿ ಯಿಂದ ರಾಜ್ಯ ಸರಕಾರದ ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಷನ್ ಸೆಂಟರ್ ಇದರ ಸಹಯೋಗದೊಂದಿಗೆ ಗುರುವಾರ ಎಂಐಎಂ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಯ ಭೌಗೋಳಿಕ ಮಾನ್ಯತೆ ಪಡೆದ ಬೆಳೆಯಾಗಿರುವ ಮಟ್ಟು ಗುಳ್ಳದ ಭವಿಷ್ಯಕ್ಕಾಗಿ ರೂಪುರೇಷೆ ಹಾಗೂ ಸುಸ್ಥಿರ ಅಭಿವೃದ್ಧಿಯ ಕಾರ್ಯ ತಂತ್ರದ ಕುರಿತ ಚರ್ಚಾ ಕಾರ್ಯಕ್ರಮವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.

ವಾದಿರಾಜ ಸ್ವಾಮೀಜಿ ಮಟ್ಟುಗುಳ್ಳವನ್ನು ಬಂಗಾಳದಿಂದ ತಂದು ಮಟ್ಟು ಗ್ರಾಮದಲ್ಲಿ ಬಿತ್ತಿದರು ಎಂಬ ಪ್ರತೀತಿ ಇದೆ. ಈ ತರಕಾರಿ ಬೆಳೆ ಇಂದು ಜಗತ್ತಿನ ಎಲ್ಲ ಕಡೆಗಳಲ್ಲಿ ಪಸರಿಸಿ ಮಟ್ಟುವಿನ ಹೆಸರನ್ನು ಎಲ್ಲ ಕಡೆ ಗುರುತಿಸುವಂತೆ ಮಾಡಿದೆ. ಜಗತ್ತಿನಲ್ಲೇ ವಿಭಿನ್ನವಾಗಿರುವ ಈ ತರಕಾರಿ ಬೆಳೆಯನ್ನು ಉಳಿಸಿ ಕೊಳ್ಳುವುದು ಉಡುಪಿಯ ಪ್ರತಿಯೊಬ್ಬರ ಕರ್ತವ್ಯ ಕೂಡ ಆಗಿದೆ ಎಂದರು.

ಉಡುಪಿ ಚೇಂಬರ್ ಆಫ್ ಕಾಮರ್ಸ್‌ನ ಕೃಷ್ಣರಾವ್ ಕೊಡಂಚ ಮಾತ ನಾಡಿ, ಬಡ ಮಟ್ಟು ಗ್ರಾಮವನ್ನು ಆರ್ಥಿಕವಾಗಿ ಮೇಲಕ್ಕೇತ್ತುವ ದೂರದೃಷ್ಠಿ ಯೊಂದಿಗೆ ವಾದಿರಾಜ ಸ್ವಾಮೀಜಿ ಗುಳ್ಳದ ಬೀಜವನ್ನು ಮಟ್ಟು ಗ್ರಾಮದಲ್ಲಿ ಬಿತ್ತಿದರು. ಸಮುದ್ರ ಮತ್ತು ನದಿಯ ಮಧ್ಯೆ ಇರುವ ಫಲವತ್ತಾದ ಮಟ್ಟು ಗ್ರಾಮದ ಭೂಮಿಯನ್ನು ಕೇವಲ ಮಟ್ಟುಗುಳ್ಳ ಬೆಳೆಗಾಗಿ ಮೀಸಲಿಡಬೇಕು. ಅಲ್ಲಿಂದ ಒಂದು ಇಂಚು ಭೂಮಿಯನ್ನು ಕೂಡ ಹಾಳು ಮಾಡಬಾರದು ಎಂದು ತಿಳಿಸಿದರು.

ಕೃಷಿಕರು ಇಂದು ಬಹಳ ಕಷ್ಟದ ಬದುಕು ನಡೆಸುತ್ತಿದ್ದಾರೆ. ಆದುದರಿಂದ ಕೃಷಿಯನ್ನು ಸರಕಾರ ಕೈಗಾರಿಕೆ ಎಂಬುದಾಗಿ ಘೋಷಿಸ ಬೇಕು. ಆ ಮೂಲಕ ಕೃಷಿಗೆ ಆದ್ಯತೆ ನೀಡಿ ಅಗತ್ಯ ನೆರವು ಕಲ್ಪಿಸಬೇಕು. ಇದರಿಂದ ಮಾತ್ರ ಕೃಷಿ ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಾುತ್ತದೆ ಎಂದು ಅವರು ಹೇಳಿದರು.

ಮಟ್ಟುಗುಳ್ಳು ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ ಮಾತನಾಡಿದರು. ಎಂಐಎಂ ನಿರ್ದೇಶಕ ಡಾ.ರವೀಂದ್ರನಾಥ್ ನಾಯಕ್ ಸ್ವಾಗತಿಸಿದರು. ಸೆಂಟರ್ ಫಾರ್ ಸೋಶಿಯಲ್ ಎಂಟರ್‌ಪ್ರಿನರ್‌ಶಿಪ್‌ನ ಸಂಯೋಜಕ ಡಾ.ಹರೀಶ್ ಜಿ.ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸ್ವರ್ಣ್ ಜಿ.ಕಾಂಚನ್ ವಂದಿಸಿದರು.

ಮಟ್ಟುಗುಳ್ಳ ರಫ್ತು ಮಾಡಲು ಚಿಂತನೆ: ಬಂಗೇರ

ಮಾರುಕಟ್ಟೆಯಲ್ಲಿ ಮಟ್ಟುಗುಳ್ಳದ ಹೆಸರಿನಲ್ಲಿ ಬೇರೆ ಗುಳ್ಳಗಳನ್ನು ಮಾರಾಟ ಮಾಡುತ್ತಿರುವುದನ್ನು ತಡೆಯಲು ಇಂದು ಮಟ್ಟುಗುಳ್ಳ ಬೆಳೆಗಾರರ ಸಂಘ ಮಟ್ಟುಗುಳ್ಳಕ್ಕೆ ಸ್ಟಿಕ್ಕರ್ ಅಂಟಿಸಿ ಮಾರಾಟ ಮಾಡುತ್ತಿದೆ. ಇಂದು ಮಟ್ಟುಗುಳ್ಳ ವನ್ನು ಹೆಚ್ಚು ಬೆಳೆಸಲಾಗು ತ್ತಿದ್ದು, ಇಳುವರಿ ಕೂಡ ಹೆಚ್ಚಾಗಿದೆ. ಆದುದರಿಂದ ಇದನ್ನು ಮುಂದೆ ವಿದೇಶಗಳಿಗೆ ರಫ್ತು ಮಾಡುವ ಬಗ್ಗೆ ಕೂಡ ಚಿಂತನೆ ನಡೆಸ ಲಾಗುತ್ತಿದೆ ಎಂದು ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ ತಿಳಿಸಿದರು.

ವಾರಕ್ಕೊಮ್ಮೆ ಮಟ್ಟುಗುಳ್ಳಕ್ಕೆ ದರ ನಿಗದಿ ಪಡಿಸಲಾಗುತ್ತಿದೆ. ಜಾಸ್ತಿ ಇಳುವರಿಯಾದಾಗ ಬೆಲೆ ಕೂಡ ಕಡಿಮೆ ಮಾಡಲಾಗುತ್ತಿದೆ. ಮುಂದೆ ಸ್ವಂತ ಜಾಗ ಖರೀದಿಸಿ, ಅದರಲ್ಲಿ ದಾಸ್ತಾನು ಕೇಂದ್ರವನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಹೀಗೆ ದಾಸ್ತಾನು ಕೇಂದ್ರದಲ್ಲಿ ಸುಮಾರು ಎರಡು ತಿಂಗಳು ಗಳ ಕಾಲ ಮಟ್ಟುಗುಳ್ಳವನ್ನು ದಾಸ್ತಾನು ಇರಿಸಬಹುದಾಗಿದೆ ಎಂದರು.

ಈಗ ಇರುವ ಸಂಘವನ್ನು ಸೊಸೈಟಿಯನ್ನಾಗಿಸುವ ಉದ್ದೇಶ ಕೂಡ ನಮ್ಮ ಮುಂದೆ ಇದೆ. ಈ ಮೂಲಕ ಮಟ್ಟುಗುಳ್ಳ ಬೆಳೆಗಾರರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಕೂಡ ಹಾಕಿಕೊಳ್ಳಲಾಗುವುದು. ಇಂದು ಮಟ್ಟುಗುಳ್ಳ ಬೆಳೆಗೆ ರಾಸಾಯಿನಿಕ ಬದಲು ಸಾವಯವ ಗೊಬ್ಬರನ್ನು ಬಳಸಲಾಗುತ್ತಿದೆ. ಇದರಿಂದ ಮಟ್ಟುಗುಳ್ಳದ ರುಚಿಯನ್ನು ಹೆಚ್ಚಿಸಬಹುದಾಗಿದೆ ಎಂದು ಅವರು ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X