ದಿವಾಸ್ ಮಿಸ್ ಇಂಡಿಯಾ ಮುಡಿಗೇರಿಸಿದ ದೀಪಾಶ್ರೀ
ಬೆಂಗಳೂರು, ಫೆ.28: ದಿವಾಸ್ ಆಯೋಜಿಸಿದ್ದ ದಿವಾಸ್ ಮಿಸ್ ಇಂಡಿಯಾ ಕಾರ್ಯಕ್ರಮದಲ್ಲಿ ದಿವಾಸ್ ಮಿಸ್ ಇಂಡಿಯಾ ಪದಕವನ್ನು ದೀಪಾಶ್ರೀ ಮುಡಿಗೇರಿಸಿಕೊಂಡಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೀಪಾಶ್ರೀ, ದಿವಾಸ್ ಮಿಸ್ ಇಂಡಿಯಾ ಸ್ಪರ್ಧೆಯನ್ನು ಜೂನ್ 2019 ರಲ್ಲಿ ಗೋವಾದಲ್ಲಿ ಆಯೋಜಿಸಿದ್ದು, ಈ ಸ್ಪರ್ಧೆಯಲ್ಲಿ ಅನೇಕ ಮಂದಿ ಪಾಲ್ಗೊಂಡಿದ್ದು, ಅದರಲ್ಲಿ ಮೊದಲ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದೇನೆ ಎಂದರು.
ಇದೇ ವೇಳೆ ವೈದ್ಯರ ಜೀವನ ಚರಿತ್ರೆಯ ಬಗ್ಗೆ ಎಂ.ಎನ್.ಮುಸ್ತಾಫ ಅವರು ಬರೆದಿರುವ ಡಿಯರ್ ಡಾಕ್ಟರ್ಸ್ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
Next Story





