Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರಜಾಪ್ರಭುತ್ವ ಶಕ್ತಿಗಳು...

ಪ್ರಜಾಪ್ರಭುತ್ವ ಶಕ್ತಿಗಳು ಒಟ್ಟಾಗಬೇಕಾದದ್ದು ಅನಿವಾರ್ಯ

ಜೋಗನಹಳ್ಳಿ ಗುರುಮೂರ್ತಿಜೋಗನಹಳ್ಳಿ ಗುರುಮೂರ್ತಿ28 Feb 2020 11:45 PM IST
share
ಪ್ರಜಾಪ್ರಭುತ್ವ ಶಕ್ತಿಗಳು ಒಟ್ಟಾಗಬೇಕಾದದ್ದು ಅನಿವಾರ್ಯ

ಇಂದು ದೇಶ ಸಂಕಷ್ಟ ಎದುರಿಸುತ್ತಿದೆ. ಮೊದಲನೆಯದಾಗಿ ದೇಶದಲ್ಲಿ ನಾಯಕರಿಲ್ಲದಿರುವುದು. ಅಂದರೆ, ಈಗಿರುವವರು ನಾಯಕರಲ್ಲವೇ? ಎಂಬ ಪ್ರಶ್ನೆ ಸಹಜ. ಖಂಡಿತ ಇಂದು ಯಾವ ಪಕ್ಷದಲ್ಲೂ ಸಮರ್ಥ ನಾಯಕರಿಲ್ಲ ಮತ್ತು ನಮ್ಮ ಜನರಿಗೂ ನಾಯಕನ ಗುಣಲಕ್ಷಣಗಳೇನೆಂಬುದು ಸರಿಯಾಗಿ ತಿಳಿದಿಲ್ಲ.

ಇತಿಹಾಸಕಾರ ಆರ್.ಸಿ. ಮಜುಮ್‌ದಾರ್ ಅಕ್ಬರನ ವಿಷಯ ಹೇಳುವಾಗ ಒಂದು ಮಾತು ಹೇಳುತ್ತಾರೆ. ‘‘ಹಿ ಈಸ್ ಎ ಗ್ರೇಟ್ ವಾರಿಯರ್ ಆ್ಯಂಡ್ ಎ ಬೆನವಲೆಂಟ್ ಅಡ್ಮಿನಿಸ್ಟ್ರೇನರ್’’ (ಆತ ಶೂರತ್ವವುಳ್ಳ ಯೋಧನೂ ಔದಾರ್ಯವುಳ್ಳ ಆಡಳಿತಗಾರನೂ ಆಗಿದ್ದ). ಹೌದು ಈ ಗುಣಗಳು ನಾಯಕನಾದವನಲ್ಲಿ ಮೇಳೈಸಿರಬೇಕು. ಆದರೆ, ಇಂದಿನ ನಮ್ಮ ಮುಖಂಡರಲ್ಲಿ ಶೂರತ್ವ, ಔದಾರ್ಯ, ಜಾಣ್ಮೆ, ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಬದಲು ಸ್ವಾರ್ಥ, ಅರೆತಿಳುವಳಿಕೆ, ವಿಕೃತತೆ, ಬೂಟಾಟಿಕೆ ಎಲ್ಲ ಕಡೆ ಮೆರೆಯುತ್ತಿದೆ. ಇದನ್ನು ಬಿಡಿಸಿ ನಮ್ಮ ಜನತೆಗೆ ಹೇಳಬೇಕಾದವರು ಯಾರು? ನಮ್ಮ ಬುದ್ಧಿ ಜೀವಿಗಳು, ಚಿಂತಕರು ಇದನ್ನು ತಿಳಿಸಬೇಕು. ಅದನ್ನು ನಮ್ಮ ಸುದ್ದಿ ಮಾಧ್ಯಮಗಳು ಎಲ್ಲ ಕಡೆ ಪಸರಿಸಬೇಕು, ಜನರಿಗೆ ಮನ ಮುಟ್ಟಿಸಬೇಕು. ಆದರೆ ನಮ್ಮ ಭಾರತೀಯ ಮಾಧ್ಯಮಗಳು? ಅವುಗಳು ಕೂಡ ತಮ್ಮದೇ ಹಿತಾಸಕ್ತಿ ಕಾಯ್ದುಕೊಳ್ಳುವ ಕಡೆ ಗಮನ ಕೊಡುತ್ತಿವೆ. ಕವಿ, ಸಾಹಿತಿಗಳು ಅನಧಿಕೃತ ಶಾಸಕರೆಂದು ಕವಿ ಶೆಲ್ಲಿ ಹೇಳುತ್ತಾನೆ. ಇದು ಸತ್ಯವಾಗಿದೆ. ಸಾಹಿತ್ಯವೆಂಬುದು ಬುದ್ಧಿ ಭಾವಗಳ ವಿದ್ಯುದಾಲಿಂಗನವೇ ಸೈ. ಆದರೆ ಇದನ್ನು ಅರ್ಥ ಮಾಡಿಕೊಂಡವರು ಸಾಹಿತ್ಯ ಲೋಕದಲ್ಲಿ ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ?

ಕೆಲವು ದಿನಗಳ ಹಿಂದಷ್ಟೇ ಕಲಬುರಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅಲ್ಲಿ ಭಾಗವಹಿಸಿದ ಎಷ್ಟು ಮಂದಿ ಈ ದೇಶದ ಇಂದಿನ ಪರಿಸ್ಥಿತಿಯನ್ನು ಅರ್ಥೈಸಿ ಜನರಿಗೆ ತಿಳಿಸಿದರು ಮತ್ತು ಅವರ ಕಣ್ಣಿಗೆ ಒಂದು ಕನಸನ್ನು ಕಟ್ಟಿಕೊಟ್ಟರು.? ಭಾರತ ಎತ್ತ ಸಾಗುತ್ತಿದೆ ಎಂಬುದನ್ನಾದರೂ ಸ್ಪಷ್ಟಪಡಿಸಿದರೇ? ಎಲ್ಲೆಲ್ಲಿ ತಪ್ಪುದಾರಿ ಇದೆಯೆಂದು ಗುರುತಿಸಿದರೇ? ಅದನ್ನು ಸರಿಮಾಡಿಕೊಳ್ಳುವುದು ಹೇಗೆ ಎಂದು ಹೇಳಿದರೇ?, ಅದನ್ನು ಕೇಳಿದ ಜನರಿಗೆ ನಮ್ಮ ಮುಂದಿನ ಮಾರ್ಗ ಎಲ್ಲಿದೆ ಎಂಬುದು ಅರಿವಿಗೆ ಬಂತೇ? ಭಾರತ ಹಲವು ಜಾತಿ, ಮತ, ಪಂಥ, ಸಂಸ್ಕೃತಿ, ಭಾಷಿಗರ ನಾಡು. ನಾಯಕನಾದವನು ಭಾರತದಲ್ಲಿ ಎಲ್ಲರ ಪ್ರಾಣ, ಮಾನ, ಆಸ್ತಿಯನ್ನು ಕಾಪಾಡಬೇಕು. ಆದರೆ ನಮ್ಮ ದೇಶದ ಪ್ರಧಾನಿ ಅದನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆಯೇ? ಇದು ಇಂದಿನ ಮಹತ್ವದ ಪ್ರಶ್ನೆ. ನಮ್ಮ ಹಿಂದಿನ ಚರಿತ್ರೆಯ ನಾಯಕರಲ್ಲಿ ಕೆಲವರಾದರೂ ಒಂದು ಸಮತೂಕದ ಪೂರ್ಣವಾದ ಮಾರ್ಗವನ್ನು ಸೃಷ್ಟಿಸಿ ಹೋಗಿದ್ದಾರೆ. ಅವರಲ್ಲಿ ಎದ್ದು ಕಾಣುವವರು ಅಶೋಕ, ಹರ್ಷವರ್ಧನ, ಅಕ್ಬರ್ ಮುಂತಾದವರು. ಅವರ ಒಲವು ನಿಲುವು ಮತ, ಪಂಥ ಯಾವುದೇ ಆಗಿದ್ದರೂ ಎಲ್ಲರನ್ನೂ ಎಲ್ಲವನ್ನೂ ಒಳಗೊಂಡು ಪ್ರೀತಿಯಿಂದ ರಾಜ್ಯಭಾರ ಮಾಡಿ ಒಂದು ಮಾದರಿಯನ್ನು ಹಾಕಿಕೊಟ್ಟು ಹೋಗಿದ್ದಾರೆ.

ಹದಿನಾರನೇ ಶತಮಾನದಲ್ಲಿ ಬಹುಜಾಣ್ಮೆಯಿಂದ ಮೂವತ್ತು ವರ್ಷ ಇಂಗ್ಲೆಂಡನ್ನು ಆಳಿದ ರಾಣಿ ಎಲಿಜಬೆತ್ ಈ ಸಮಯದಲ್ಲಿ ನಮಗೆ ನೆನಪಾಗುತ್ತಾರೆ. ಇಂಗ್ಲೆಂಡ್‌ನಲ್ಲಿ ಆಗ ಕೆಥೊಲಿಕ್, ಪ್ರೊಟೆಸ್ಟೆಂಟ್ ಮತ್ತು ಪೂರಿಟನ್ ಮತ ಪಂಥಗಳು ಚಾಲ್ತಿಯಲ್ಲಿದ್ದವು. ರಾಣಿಗೆ ಪ್ರೊಟೆಸ್ಟೆಂಟ್ ಪಂಥದ ಬಗ್ಗೆ ಹೆಚ್ಚು ಒಲವಿತ್ತು. ಆದರೆ, ಆ ರಾಣಿ ತನ್ನ ಅಂತರಂಗವನ್ನು ಯಾರಿಗೂ ತೋರಿಸಿಕೊಳ್ಳಲಿಲ್ಲ. ಈ ಮೂವರನ್ನು ಒಂದೇ ತೆರನಾಗಿ ನೋಡಿಕೊಂಡರು ಮತ್ತು ಯಾವುದೇ ಕಲಹ ಅಥವಾ ಅನಾಹುತ ಆಗದಂತೆ ನೋಡಿಕೊಂಡರು ಅದು ಇತ್ತೀಚೆಗೆ. ಆದರೆ ಭಾರತೀಯರು ಇದನ್ನು ಎರಡು ಸಾವಿರ ವರ್ಷದಲ್ಲೇ ಸಾಧಿಸಿ ತೋರಿಸಿದ್ದರು.

ನಮ್ಮ ಸಂವಿಧಾನದ ಆಶಯದಂತೆ ಜಾತ್ಯತೀತ ಸಮಾಜವಾದಿ ನಡವಳಿಕೆ ಇಂದಿನ ನಮ್ಮ ಮುಖಂಡರಲ್ಲಿ ಕಾಣುತ್ತಿಲ್ಲವಾಗಿ ದೇಶದ ಜನತೆಯ ಬಹು ಮಂದಿಯನ್ನು ಅತಂತ್ರಕ್ಕೆ ಮತ್ತು ಅಭದ್ರತೆಗೆ ದೂಡಲಾಗಿದೆ. ಒಬ್ಬರಿಗೊಬ್ಬರಿಗೆ ನಂಬಿಕೆ ವಿಶ್ವಾಸವಿಲ್ಲದ ಕಾರಣ ಅಲ್ಪಸಂಖ್ಯಾತರು, ದಲಿತರು, ರೈತರು ತಬ್ಬಲಿತನ ಅನುಭವಿಸಬೇಕಾಗಿದೆ ಮತ್ತು ಹಲವು ರೀತಿಯ ಸಂಕಷ್ಟಕ್ಕೆ ಗುರಿಯಾಗಬೇಕಾಗಿದೆ. ಇದರಿಂದ ಬಿಡುಗಡೆಯೆಂದರೆ ಮೊದಲು ವಿಚಾರವಂತ ದೇಶಪ್ರೇಮಿಗಳು, ಹೋರಾಟಗಾರರು ಒಟ್ಟಾಗಿ ಎದ್ದೇಳುವುದು ಅನಿವಾರ್ಯವಾಗಿದೆ.

share
ಜೋಗನಹಳ್ಳಿ ಗುರುಮೂರ್ತಿ
ಜೋಗನಹಳ್ಳಿ ಗುರುಮೂರ್ತಿ
Next Story
X