Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಏನಿದು ಜೀವವನ್ನು ಹೈರಾಣಾಗಿಸುವ ಉಬ್ಬಸ...

ಏನಿದು ಜೀವವನ್ನು ಹೈರಾಣಾಗಿಸುವ ಉಬ್ಬಸ ರೋಗ?

ವಾರ್ತಾಭಾರತಿವಾರ್ತಾಭಾರತಿ29 Feb 2020 7:23 PM IST
share

ಉಬ್ಬಸ ರೋಗದಿಂದ ಉಂಟಾಗುವ ತೊಂದರೆ ಅದನ್ನು ಅನುಭವಿಸಿದವರಿಗೇ ಗೊತ್ತು. ಉಬ್ಬಸ ರೋಗಿಯು ಉಸಿರಾಡುವಾಗ ಶಿಳ್ಳೆಯಂತಹ ಶಬ್ದ ಹೊರಹೊಮ್ಮುತ್ತದೆ. ಉಸಿರಾಟ ಕಷ್ಟವಾಗುತ್ತದೆ. ಶ್ವಾಸನಾಳ ಸಂಕುಚಿತಗೊಂಡು ಗೊರಗೊರ ಶಬ್ದ ಬರುತ್ತಿರುತ್ತದೆ. ಸಾಮಾನ್ಯವಾಗಿ ಉಸಿರನ್ನು ಹೊರಗೆ ಬಿಡುವಾಗ ಈ ಸ್ಥಿತಿ ಕಾಣಿಸಿಕೊಳ್ಳುತ್ತದೆ, ಆದರೆ ಕೆಲವರಲ್ಲಿ ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ ಶಬ್ದ ಕೇಳಿ ಬರುತ್ತದೆ. ಶೇ.20ರಷ್ಟು ಮಕ್ಕಳು ತಮ್ಮ 10ನೇ ವರ್ಷ ಪ್ರಾಯದವರೆಗೆ ಉಬ್ಬಸದಿಂದ ನರಳುತ್ತಿರುತ್ತಾರೆ. ಹೆಚ್ಚಿನ ಪೋಷಕರಲ್ಲಿ ಇದು ಆತಂಕವನ್ನು ಸೃಷ್ಟಿಸುತ್ತದೆಯಾದರೂ, ಇದೊಂದು ಸಾಮಾನ್ಯ ವಿದ್ಯಮಾನವಾಗಿದ್ದು, ಚಿಕಿತ್ಸೆಯೂ ಸುಲಭದ್ದಾಗಿದೆ.

ಉಬ್ಬಸ ರೋಗದ ಕಾರಣಗಳು

ಹಲವಾರು ಕಾರಣಗಳು ಉಬ್ಬಸವನ್ನುಂಟು ಮಾಡುತ್ತವೆ. ಹೆಚ್ಚಾಗಿ ಅಸ್ತಮ್ಯಾಟಿಕ್ ಬ್ರಾಂಕೈಟಿಸ್ ಅಥವಾ ಶ್ವಾಸನಾಳಗಳ ಒಳಪೊರೆಯ ಉರಿಯೂತದಿಂದ ಉಬ್ಬಸವುಂಟಾ ಗುತ್ತದೆ. ಶ್ವಾಸನಾಳದ ಕೆಳಭಾಗದಲ್ಲಿ ಸೋಂಕುಗಳು ಉಂಟಾದಾಗ ಶ್ವಾಸನಾಳ ಸಂಕುಚಿತಗೊಂಡು ಉಸಿರಾಟದ ವೇಳೆ ಶಬ್ದವುಂಟಾಗುತ್ತದೆ. ಉಬ್ಬಸ ದಾಳಿಯಿಡುವ ಮೊದಲು ಶೀತ ಅಥವಾ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಸಾಮಾನ್ಯವಾಗಿ 3ರಿಂದ 8 ವರ್ಷ ಪ್ರಾಯದ ನಡುವೆ ಈ ಸ್ಥಿತಿಯುಂಟಾಗುತ್ತದೆ. ಶ್ವಾಸ ಚೀಲಗಳ ಉರಿಯೂತವು ಮಕ್ಕಳಿಗಿಂತ ವಯಸ್ಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸೋಂಕು ಆಗಿದ್ದು,ಇದನ್ನು ಬ್ರಾಂಕಿಯಲ್ ಅಸ್ತಮಾ ಟ್ರಾಪಿಕಲ್ ಎಸಿನೊಫಿಲಿಯಾ ಎಂದು ಕರೆಯಲಾಗುತ್ತದೆ. ಸೇವಿಸಿದ ಆಹಾರವು ಜಠರದಿಂದ ಹಿಮ್ಮುಖವಾಗಿ ಅನ್ನನಾಳ ವನ್ನು ಪ್ರವೇಶಿಸಿ ಕಿರಿಕಿರಿಯನ್ನುಂಟು ಮಾಡುವ ಗ್ಯಾಸ್ಟ್ರೊ-ಒಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ (ಜಿಇಆರ್‌ಡಿ),ಕೀಟಗಳು ಕಡಿದಾಗ ಉಂಟಾಗುವ ಅಲರ್ಜಿ,ಅಲರ್ಜಿಕ್ ರಿನಿಟಿಸ್ ಅಥವಾ ಅಲರ್ಜಿಯಿಂದ ಮೂಗು ಸೋರುವಿಕೆ,ಪರಾವಲಂಬಿ ಜೀವಿಗಳ ಸೋಂಕಿನಿಂದಾಗಿ ಶ್ವಾಸಕೋಶಗಳಲ್ಲಿ ಒಂದು ಬಗೆಯ ಬಿಳಿಯ ರಕ್ತಕಣಗಳಾಗಿರುವ ಎಸಿನೊಫಿಲ್‌ಗಳ ಸಂಗ್ರಹಕ್ಕೆ ಕಾರಣವಾಗುವ ಲೋಫ್ಲರ್ಸ್‌ ಸಿಂಡ್ರೋಮ್,ದುಂಡುಹುಳು ಸೋಂಕು ಇವೆಲ್ಲ ಉಬ್ಬಸ ರೋಗವನ್ನುಂಟು ಮಾಡುತ್ತವೆ.

ರೋಗನಿರ್ಧಾರ ಹೇಗೆ?

ಉಬ್ಬಸ ರೋಗಿಯು ಶ್ವಾಸವನ್ನು ಒಳಗೆ ತೆಗೆದುಕೊಂಡಾಗ ಅಥವ ಹೊರಗೆ ಬಿಟ್ಟಾಗ ಶಿಳ್ಳೆಯಂತಹ ಶಬ್ದ ಕೇಳಿ ಬರುತ್ತದೆ. ಅದೊಂದು ವಿಶಿಷ್ಟ ಶಬ್ದವಾಗಿದ್ದು ವೈದ್ಯರು ಸ್ಟೆಥಾಸ್ಕೋಪ್ ಮೂಲಕ ಆ ಶಬ್ದವನ್ನು ಆಲಿಸಿ ದೃಢಪಡಿಸಿಕೊಳ್ಳುತ್ತಾರೆ. ದೈಹಿಕ ತಪಾಸಣೆಯ ಬಳಿಕ ಸಂಭಾವ್ಯ ಕಾರಣವನ್ನು ಆಧರಿಸಿ ಕೆಲವು ಪರೀಕ್ಷೆಗಳಿಗೆ ಒಳಗಾಗುವಂತೆ ವೈದ್ಯರು ಸೂಚಿಸಬಹುದು. ಅಸ್ತಮಾವನ್ನು ನಿರ್ಧರಿಸುವಲ್ಲಿ ಉಸಿರಾಟದ ಪರೀಕ್ಷೆಯು ನೆರವಾಗುತ್ತದೆ. ನ್ಯುಮೋನಿಯಾ ಮತ್ತು ಇತರ ಸಮಸ್ಯೆಗಳನ್ನು ಗುರುತಿಸಲು ಸಾಮಾನ್ಯವಾಗಿ ಎದೆಯ ಎಕ್ಸ್-ರೇಗಳನ್ನು ಬಳಸಲಾಗುತ್ತದೆ.

ಚಿಕಿತ್ಸೆ ಏನು?

ಉಬ್ಬಸಕ್ಕೆ ಚಿಕಿತ್ಸಾ ಕ್ರಮಗಳು ಉಸಿರಾಟವನ್ನು ಸರಾಗಗೊಳಿಸಲು ಸಂಕುಚಿತಗೊಂಡ ಶ್ವಾಸನಾಳಗಳನ್ನು ಸಹಜ ಸ್ಥಿತಿಗೆ ಮರಳಿಸುವ ಉದ್ದೇಶವನ್ನು ಹೊಂದಿರುತ್ತವೆ. ಸಾಲ್ಬುಟಾಮಲ್,ಸಾಲ್ಮೆಟೆರಾಲ್ ಮತ್ತು ಇಪ್ರಾಟೋಪಿಯಂ ಇವು ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಿಗಳಲ್ಲಿ ಸೇರಿವೆ. ಸಾಧ್ಯವಿದ್ದಲ್ಲಿ ಕಾರಣವನ್ನು ಸಂಪೂರ್ಣವಾಗಿ ನಿವಾರಿಸುವುದನ್ನು ಗುರಿಯಾಗಿಸಿಕೊಂಡು ಚಿಕಿತ್ಸೆಯನ್ನು ನಡೆಸಲಾಗುತ್ತದೆ. ಉದಾಹರಣೆಗೆ ಉಬ್ಬಸಕ್ಕೆ ನ್ಯುಮೋನಿಯಾ ಕಾರಣವಾಗಿದ್ದರೆ ಅದನ್ನು ಗುಣಪಡಿಸಲು ಆ್ಯಂಟಿಬಯಾಟಿಕ್‌ಗಳನ್ನು ನೀಡಲಾಗುತ್ತದೆ.

ಉಬ್ಬಸಕ್ಕೆ ಮನೆಮದ್ದು ಏನು?

ಉಬ್ಬಸ ರೋಗಿಗಳಿಗೆ ವೈದ್ಯರು ಯಥೇಚ್ಛ ನೀರು ಹಾಗೂ ಸೂಪ್ ಮತ್ತು ಹಣ್ಣಿನ ರಸದಂತಹ ಇತರ ದ್ರವಗಳನ್ನು ಸೇವಿಸಲು ಸೂಚಿಸುತ್ತಾರೆ. ರೋಗಿಯು ಅಲರ್ಜಿಕಾರಕಗಳಿಂದ ತೊಂದರೆಯನ್ನು ಅನುಭವಿಸಿದ್ದ ಇತಿಹಾಸವಿದ್ದರೆ ಹೊಗೆ ಮತ್ತು ಧೂಳಿನಿಂದ ದೂರವಿರಬೇಕಾಗುತ್ತದೆ. ಇದರಿಂದಾಗಿ ಉಬ್ಬಸ ಕಾಡುವ ಸಂದರ್ಭಗಳು ಕಡಿಮೆಯಾಗುತ್ತವೆ. ಉಬ್ಬಸದ ತೊಂದರೆಯು ತೀವ್ರವಾಗಿದ್ದರೆ ಅಥವಾ ಉಬ್ಬಸದೊಂದಿಗೆ ಜ್ವರವೂ ಇದ್ದರೆ ವೈದ್ಯರ ಅಭಿಪ್ರಾಯವನ್ನು ಕೋರುವುದು ಅಗತ್ಯವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X