ಬಸ್ ಢಿಕ್ಕಿ ಹೊಡೆದು ಬಾಲಕನ ಸಾವು:ಚಾಲಕನಿಗೆ ಥಳಿತ, ಬಸ್‌ಗೆ ಹಾನಿ
ಮುಝಫ್ಫರ್‌ನಗರ(ಉ.ಪ್ರ),ಫೆ.29: ಮದುವೆ ದಿಬ್ಬಣವೊಂದರ ಜೊತೆ ಸಾಗುತ್ತಿದ್ದ 16ರ ಹರೆಯದ ಬಾಲಕನೋರ್ವ ಬಸ್ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶುಕ್ರವಾರ ಇಲ್ಲಿಗೆ ಸಮೀಪದ ಖಾಯಿಖೇಡಾ ಗ್ರಾಮದಲ್ಲಿ ನಡೆದಿದೆ. ಕುಪಿತ ಸ್ಥಳೀಯರು ಚಾಲಕನನ್ನು ಥಳಿಸಿ ಬಸ್‌ಗೆ ಹಾನಿಯನ್ನುಂಟು ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದರು.
ಘಟನೆಯಿಂದ ಕೆರಳಿದ್ದ ಜನರು ಮೃತ ಬಾಲಕ ಮೋನುವಿನ ಶವವನ್ನು ರಸ್ತೆಯಲ್ಲಿರಿಸಿ ಪ್ರತಿಭಟನೆ ನಡೆಸಿದ್ದರು,ಮೊರಾನಾ-ಜನಸಠ್ ರಸ್ತೆಯಲ್ಲಿ ತಡೆಯನ್ನೂ ಒಡ್ಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಅವರು ಪ್ರತಿಭಟನೆಯನ್ನು ಹಿಂದೆಗೆದುಕೊಂಡರು ಎಂದು ಪೊಲೀಸರು ಹೇಳಿದರು.
Next Story





