ಕೋಮು ಸಾಮರಸ್ಯದ ಮಾತಿಗೆ ಹುಟ್ಟೂರು ಪ್ರೇರಣೆ: ಅ್ಯಡ್ಲಿನ್ ಕ್ಯಾಸ್ತಲಿನೊ
ಉದ್ಯಾವರದಲ್ಲಿ ಲಿವಾ ಮಿಸ್ ದಿವಾ ಯೂನಿವರ್ಸ್‌ಗೆ ಹುಟ್ಟೂರ ಸನ್ಮಾನ

ಉಡುಪಿ, ಫೆ.29: ಮುಂಬೈಯಲ್ಲಿ ನಡೆದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಲಿವಾ ಮಿಸ್ ದಿವಾ ಯೂನಿವರ್ಸ್-2020 ಕಿರೀಟ ಮುಡೀ ಗೇರಿಸಿಕೊಂಡ ಉದ್ಯಾವರ ಮೂಲದ ಮಿಸ್ ಅ್ಯಡ್ಲಿನ್ ಕ್ಯಾಸ್ತಲಿನೊ ಅವರಿಗೆ ಉದ್ಯಾವರ ಸಂತ ಫ್ರಾನ್ಸಿಸ್ ಕ್ಷೇವಿಯರ್ ದೇವಾಲಯದ ಆವರಣದಲ್ಲಿ ಹುಟ್ಟೂರ ಅಭಿನಂದನಾ ಸಮಾರಂಭವನ್ನು ಶನಿವಾರ ಆಯೋಜಿಸಿಲಾಗಿತ್ತು.
ದೇವಾಲಯದ ನೇತೃತ್ವದಲ್ಲಿ ಐಸಿವೈಎಂ ಸುವರ್ಣ ಮಹೋತ್ಸವ ಸಮಿತಿ, ಕೆಥೊಲಿಕ್ ಸಭಾ ಮತ್ತು ಸ್ತ್ರೀ ಸಂಘಟನೆ ಉದ್ಯಾವರ ಘಟಕದ ಸಹಕಾರ ದೊಂದಿಗೆ ಆಯೋಜಿಸಲಾದ ಸಮಾರಂಭದಲ್ಲಿ ಅ್ಯಡ್ಲಿನ್ ಕ್ಯಾಸ್ತಲಿನೊ ಅವರನ್ನು ಸನ್ಮಾನಿಸಲಾಯಿತು.
ಇವರು ವರ್ಷಾಂತ್ಯದಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನು್ನ ಪ್ರತಿನಿಧಿಸಲಿದ್ದಾರೆ.
ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅ್ಯಡ್ಲಿನ್ ಕ್ಯಾಸ್ತಲಿನೊ, ಸ್ಪರ್ಧೆಯ ಸಮಯದಲ್ಲಿ ಕೋಮು ಸಾಮರಸ್ಯದ ಕುರಿತು ನನಗೆ ಮಾತನಾಡಲು ಪ್ರೇರಣೆ ನೀಡಿರುವುದು ನನ್ನ ಹುಟ್ಟೂರು ಉಡುಪಿ. ಅದೇ ಕೋಮು ಸಾಮರಸ್ಯವನ್ನು ಇಂದಿನ ವೇದಿಕೆ ಯಲ್ಲಿ ಸಹ ಕಾಣುತ್ತಿದ್ದೇನೆ. ನನ್ನ ಹುಟ್ಟೂರಿನ ಜನತೆ ನೀಡಿದ ಪ್ರೀತಿ ನನ್ನ ಮುಂದಿನ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗುರಿ ಮುಟ್ಟಲು ಪೆ್ರೀರಣೆ ಯಾಗಲಿದೆ ಎಂದು ಹೇಳಿದರು.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, ಲಿವಾ ಮಿಸ್ ದಿವಾ ಯೂನಿವರ್ಸ್ ಕಿರೀಟ ಪಡೆಯುವ ಮೂಲಕ ಅ್ಯಡ್ಲಿನ್ ಕ್ಯಾಸ್ತಲಿನೊ ಜಿಲ್ಲೆಯ ಗೌರವವನ್ನು ಹೆಚ್ಚಿಸಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಕೇವಲ ಸೌಂದರ್ಯದ ವಿಚಾರದಲ್ಲಿ ಮಾತ್ರ ಗಣನೆಗೆ ತೆಗೆದುಕೊಳ್ಳದೆ ಇತರ ಹಲವು ರೀತಿಯ ಸ್ಪರ್ಧೆಗಳಲ್ಲಿ ಗೆದ್ದಾಗ ಮಾತ್ರ ಇಂತಹ ಕಿರೀಟ ಮುಡಿಗೇರಿಸಿಕೊಳ್ಳಲು ಸಾಧ್ಯವಾಗು ತ್ತದೆ. ಪ್ರತಿಭೆ ಇದ್ದವರು ಮಾತ್ರ ಇಂತಹ ಸ್ಪರ್ಧೆಗಳನ್ನು ಗೆಲ್ಲಲು ಸಾಧ್ಯ ಎಂದರು.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರೆಕೆ, ಪ್ರಮೋದ್ ಮಧ್ವರಾಜ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಉದ್ಯಮಿ ಅಬ್ದುಲ್ ಜಲೀಲ್ ಸಾಹೇಬ್, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್ ಶುಭ ಹಾರೈಸಿದರು.
ಉದ್ಯಾವರ ಚರ್ಚಿನ ಸಹಾಯಕ ಧರ್ಮಗುರು ವಂ.ರೊಲ್ವಿನ್ ಆರಾನ್ಹಾ, ಉದ್ಯಮಿಗಳಾದ ಲಿಯೋ ಡಿಸೋಜಾ ದುಬೈ, ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೋನ್ಹಾ, ಸ್ತ್ರೀ ಸಂಘಟನೆ ಅಧ್ಯಕ್ಷೆ ಲೀನಾ ಮೆಂಡೊನ್ಸಾ, ಸಮಿತಿ ಅಧ್ಯಕ್ಷ ಮೈಕಲ್ ಡಿಸೋಜ, ಅ್ಯಡ್ಲಿನ್ ತಾಯಿ ಮೀರಾ ಕ್ಯಾಸ್ತಲಿನೊ ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತದ ಕುಲಪತಿ ವಂ.ಸ್ಟ್ಯಾನಿ ಬಿ.ಲೋಬೊ ಸ್ವಾಗತಿಸಿ ದರು. ಉದ್ಯಾವರ ಕೆಥೊಲಿಕ್ ಸಭಾ ಅಧ್ಯಕ್ಷ ಲಾರೆನ್ಸ್ ಡೆಸಾ ವಂದಿಸಿದರು. ಸ್ಟೀವನ್ ಕುಲಾಸೊ ಮತ್ತು ರೊಸಾಲಿಯಾ ಕಾರ್ಡೊಜಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮುನ್ನ ಉದ್ಯಾವರ ಜೈ ಹಿಂದ್ ಮಾರ್ಗವಾಗಿ ಉದ್ಯಾವರ ಪೇಟೆಯ ಮೂಲಕ ಮೇಲ್ಪೇಟೆ, ಗುಡ್ಡೆಂಗಡಿ ಮಾರ್ಗವಾಗಿ ಆಕರ್ಷಕ ಮೆರವಣಿಗೆಯಲ್ಲಿ ಅ್ಯಡ್ಲಿನ್ ಕ್ಯಾಸ್ತಲಿನೊ ಅವರನ್ನು ತೆರೆದ ವಾಹನ ಮೂಲಕ ದೇವಾಲಯದ ವಠಾರಕ್ಕೆ ಕರೆತರಲಾಯಿತು. ಬಳಿಕ ಚರ್ಚ್‌ನಲ್ಲಿ ಪ್ರಾರ್ಥನಾ ವಿಧಿಯನ್ನು ನೆರವೇರಿಸಲಾಯಿತು.







