ಗಾಂಜಾ ಸೇವನೆ: ಮೂವರು ವಶಕ್ಕೆ
ಮಣಿಪಾಲ, ಫೆ.29: ಗಾಂಜಾ ಸೇವನೆಗೆ ಸಂಬಂಧಿಸಿ ಮೂವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಮಣಿಪಾಲದಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೆ.20ರಂದು ಮಣಿಪಾಲ ಪೊಲೀಸ್ ಠಾಣೆಗೆ ಭೇಟಿ ನೀಡಿದ ಎಂಐಟಿ ವಿದ್ಯಾರ್ಥಿ ಹರ್ಷಿತ್ ಡಿ.ಜಿ.(24) ಹಾಗೂ ಫೆ.21ರಂದು ಮಣಿಪಾಲ ಮಾಂಡವಿ ಎಮಾರಾಲ್ಡ್ ಆಪಾರ್ಟ್‌ಮೆಂಟ್ ಬಳಿ ಸುಪ್ರತೀಕ್ ಬಸು(21) ಮತ್ತು ಗೌರವ್ ಕುಮಾರ್ ಸಿಂಗ್ ಎಂಬವ ರನ್ನು ವಶಕ್ಕೆ ಪಡೆದು, ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರುಪಡಿಸಿದ್ದು ಈ ಪರೀಕ್ಷೆ ಯಿಂದ ಇವರೆಲ್ಲ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
Next Story





