ಅಕ್ರಮ ಸಾಗಾಟ : ವಿದೇಶಿ ಚಿನ್ನ ಸಹಿತ ಐವರ ಸೆರೆ
ಮಂಗಳೂರು, ಫೆ.29: ಕಲ್ಲಿಕೋಟೆಯಿಂದ ಭಟ್ಕಳಕ್ಕೆ ಅಕ್ರಮವಾಗಿ ವಿದೇಶಿ ಚಿನ್ನವನ್ನು ಸಾಗಾಟ ಮಾಡುತ್ತಿದ್ದ ಐದು ಮಂದಿಯನ್ನು ಕಸ್ಟಮ್ಸ್ ಅಧಿಕಾರಿಗಳು ಕುಂದಾಪುರದಲ್ಲಿ ಬಂಧಿಸಿದ ಘಟನೆ ಬುಧವಾರ ನಡೆದಿದೆ.
ಖಚಿತ ಮಾಹಿತಿಯ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಕುಂದಾಪುರದಿಂದ ನಾಲ್ವರು ಮತ್ತು ಬೈಂದೂರ್‌ನಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 1.341 ಕೆಜಿ ತೂಕದ ಪೇಸ್ಟ್ ರೂಪದಲ್ಲಿದ್ದ ವಿದೇಶಿ ಶುದ್ಧ ಚಿನ್ನವನ್ನು ವಶಪಡಿಸಿಕೊಂ ಡಿದ್ದಾರೆ. ಇದರ ಮೌಲ್ಯ 56.99 ಲಕ್ಷ ರೂ. ಎಂದು ಕಸ್ಟಮ್ಸ್ ಅಧಿಕಾರಿಗಳು ಅಂದಾಜಿಸಿದ್ದಾರೆ. ಆದರೆ, ಆರೋಪಿಗಳ ಹೆಸರನ್ನು ಕಸ್ಟಮ್ಸ್ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story





