ನಾಯಕರ ದ್ವೇಷ ಭಾಷಣದಿಂದ ಬೇಸತ್ತು ಪಕ್ಷ ತೊರೆದ ಬಿಜೆಪಿ ನಾಯಕಿ

ಕೋಲ್ಕತಾ, ಫೆ.29: ಹಲವಾರು ಸಿನೆಮಾಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಟಿ-ರಾಜಕಾರಣಿ ಸುಭದ್ರ್ರಾ ಮುಖರ್ಜಿ ಅವರು ಬಿಜೆಪಿಗೆ ರಾಜೀನಾಮೆ ನೀಡುವುದರೊಂದಿಗೆ ದಿಲ್ಲಿ ಹಿಂಸಾಚಾರದ ಪರಿಣಾಮ ಪ.ಬಂಗಾಳದಲ್ಲಿ ಕಂಡುಬಂದಿದೆ.
ಬಿಜೆಪಿಯ ಕಾರ್ಯ ನಿರ್ವಹಣೆ ಶೈಲಿಯಿಂದ ಪ್ರಭಾವಿತಳಾಗಿ ತಾನು 2013ರಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದ ನಡೆ ಸರಿಯಾದ ದಿಕ್ಕಿನಲ್ಲಿಲ್ಲ ಎನ್ನ್ನುವುದನ್ನು ತಾನು ಗಮನಿಸಿದ್ದೇನೆ. ದ್ವೇಷ ಭಾವನೆ ಮತ್ತು ಜನರನ್ನು ಅವರ ಧರ್ಮದಿಂದ ಅಳೆಯುವ ಧೋರಣೆ ಬಿಜೆಪಿಯ ಸಿದ್ಧಾಂತವನ್ನು ಅಲುಗಾಡಿಸುತ್ತಿದೆ. ಬಹಳಷ್ಟು ಯೋಚಿಸಿದ ಬಳಿಕ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿರುವ ಮುಖರ್ಜಿ, ದ್ವೇಷ ಭಾಷಣಕ್ಕಾಗಿ ಬಿಜೆಪಿ ನಾಯಕರಾದ ಅನುರಾಗ ಠಾಕೂರ್ ಮತ್ತು ಕಪಿಲ ಮಿಶ್ರಾ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದ್ದಾರೆ. ಇಂತಹ ನಾಯಕರಿರುವ ಪಕ್ಷದಲ್ಲಿ ಮುಂದುವರಿಯಲು ತಾನು ಬಯಸುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.
Next Story





