ದೇಶವನ್ನು ಒಡೆಯಲು ಯತ್ನಿಸುವವರು ಎನ್ಎಸ್ ಜಿಗೆ ಭಯಪಡಬೇಕು: ಅಮಿತ್ ಶಾ

ಹೊಸದಿಲ್ಲಿ: ದೇಶವನ್ನು ಒಡೆಯಲು ಯತ್ನಿಸುವವರು ಮತ್ತು ಶಾಂತಿಗೆ ಭಂಗ ತರುವವರು ಎನ್ಎಸ್ ಜಿಗೆ (ನ್ಯಾಶನಲ್ ಸೆಕ್ಯುರಿಟಿ ಗಾರ್ಡ್) ಭಯಪಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಎನ್ಎಸ್ ಜಿಯ ಕಟ್ಟಡವೊಂದನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು
"ನಮಗೆ ಜಗತ್ತಿನಲ್ಲಿ ಶಾಂತಿ ಬೇಕು. ನಮ್ಮ 10 ಸಾವಿರ ವರ್ಷಗಳ ಇತಿಹಾಸದಲ್ಲಿ ಭಾರತವು ಎಂದಿಗೂ ಯಾರ ಮೇಲೂ ದಾಳಿ ನಡೆಸಿಲ್ಲ. ದೇಶವನ್ನು ಒಡೆಯಲು ಬಯಸುವವರಿಗೆ ಮತ್ತು ಶಾಂತಿಗೆ ಭಂಗ ತರುವವರು ಎನ್ ಎಸ್ ಜಿ ಬಗ್ಗೆ ಭಯ ಪಡಬೇಕು. ಅವರು ಮತ್ತೆ ಬಂದರೆ ಅವರನ್ನು ಎದುರಿಸುವುದು ಮತ್ತು ಸೋಲಿಸುವುದು ಎನ್ಎಸ್ ಜಿಯ ಹೊಣೆ" ಎಂದವರು ಹೇಳಿದರು.
Next Story





