ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾಗಿ ಹಂಝ, ಪ್ರ.ಕಾರ್ಯದರ್ಶಿಯಾಗಿ ಮುಝಮ್ಮಿಲ್ ಮದನಿ ಆಯ್ಕೆ

ಉಳ್ಳಾಲ, ಮಾ.1: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಶನಿವಾರ ತಾಜುಲ್ ಉಲಮಾ ಸುನ್ನೀ ಸೆಂಟರ್ ಮೇಲಂಗಡಿಯಲ್ಲಿ ಸೆಕ್ಟರ್ ಅಧ್ಯಕ್ಷ ಶಬೀರ್ ಪೇಟೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ಪ್ರಾರ್ಥನೆ ಮೂಲಕ ಚಾಲನೆ ನೀಡಿದರು. ಡಿವಿಶನ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಙಲ್ ರವರು ಉದ್ಘಾಟಿಸಿದರು. 'ಭಯ ಬಿಡಿ ಭರವಸೆ ಇಡಿ' ಎಂಬ ವಿಷಯದಲ್ಲಿ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ಉಸ್ತಾದ್ ತರಗತಿ ನಡೆಸಿಕೊಟ್ಟರು. ಬಳಿಕ ಕೋಶಾಧಿಕಾರಿ ಮುಝಮ್ಮಿಲ್ ಕೋಟೆಪುರ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ನಂತರ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಮದನಿ ಕೋಟೆಪುರರವರು ವಾರ್ಷಿಕ ವರದಿ ವಾಚಿಸಿ ಸಭೆಯ ಅನುಮತಿಯೊಂದಿಗೆ ಅನುಮೋದಿಸಿದರು
ನಂತರ ಹಾಲಿ ಸಮಿತಿಯನ್ನು ವಿಸರ್ಜಿಸಿ 2020-21ರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಹಂಝ ಸುಂದರಿಭಾಗ್, ಪ್ರಧಾನ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಮದನಿ ಕೋಟೆಪುರ, ಕೋಶಾಧಿಕಾರಿಯಾಗಿ ಅತೀಕ್ ಕೋಡಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಜಾಬಿರ್ ಫಾಳಿಲಿ, ಹಾಫಿಲ್ ಮುಈನುದ್ದೀನ್ ರಝಾ ಅಲ್-ಅಮ್ಜದಿ ಅಝಾದ್ ನಗರ, ಜೊತೆ ಕಾರ್ಯದರ್ಶಿಗಳಾಗಿ ತಶ್ರೀಫ್ ಮೇಲಂಗಡಿ, ನಿಸಾರ್ ಸಖಾಫಿ ಮುಕ್ಕಚ್ಚೇರಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಿಹಾಂ ಮುಕ್ಕಚ್ಚೇರಿ, ರೈನ್ ಬೋ ಕನ್ವೀನರ್ ಆಗಿ ಮುಹಾಝ್ ಮೇಲಂಗಡಿ, ವಿಸ್ಡಂ ಕನ್ವೀನರ್ ಆಗಿ ಫೈಝಲ್ ಕೋಟೇಪುರ, ಮಹ್ಲರತುಲ್ ಬದ್ರಿಯ್ಯಾ ಮಜ್ಲಿಸ್ ಅಮೀರ್ ಆಗಿ ಸೈಫುಲ್ಲಾ ಸಖಾಫಿ ಮುಕಚ್ಚೇರಿ ಹಾಗೂ ಸಮಿತಿ ಸದಸ್ಯರಾಗಿ ಸಯ್ಯಿದ್ ಖುಬೈಬ್ ತಂಙಳ್, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಶಬೀರ್ ಪೇಟೆ, ಮುಝಮ್ಮಿಲ್ ಕೋಟೇಪುರ, ಸಿರಾಜ್ ಅಕ್ಕರೆಕೆರೆ, ಇಮ್ರಾನ್ ಕೋಡಿ, ಶಿಹಾಬ್ ಪೇಟೆ, ಶಫೀಕ್ ಹುಸೈನ್ ಮೇಲಂಗಡಿ, ನಿಝಾಮ್ ಒಂಭತ್ತುಕೆರೆ, ದಾವೂದ್ ಬೊಟ್ಟು, ರಿಲ್ವಾನ್ ಸುಂದರಿಬಾಗ್, ಹಮೀದ್ ಹಳೇಕೋಟೆ, ಹನೀಫ್ ಹಳೇಕೋಟೆ, ಸಲಾಂ ಹಳೇಕೋಟೆ ಅವರನ್ನು ನೇಮಿಸಲಾಯಿತು.
ವೀಕ್ಷಕರಾಗಿ ಇಸ್ಮಾಯಿಲ್ ತಲಪಾಡಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಡಿವಿಶನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಜೊತೆ ಕಾರ್ಯದರ್ಶಿ ಜಾಫರ್ ಯುಎಸ್ ಹಾಜರಿದ್ದರು. ಸೆಕ್ಟರ್ ಕಾರ್ಯದರ್ಶಿ ಮುಝಮ್ಮಿಲ್ ಮದನಿ ಸ್ವಾಗತಿಸಿ, ಧನ್ಯವಾದ ಅರ್ಪಿಸಿದರು.







