ಬಡಗಬೆಳ್ಳೂರು: ಮಸ್ಜಿದುಲ್ ಇಮಾಮ್ ಶಿಬ್ಲಿ ನೂತನ ಕಟ್ಟಡ ಉದ್ಘಾಟನೆ

ಮೂಲರಪಟ್ನ, ಮಾ.1: ಇಲ್ಲಿನ ತಹ್ ಲೀಂ ಸಿಬಿಯಾನ್ ಮದರಸ ಹಾಗೂ ಮಸ್ಜಿದುಲ್ ಇಮಾಂ ಶಿಬ್ಲಿ ಇದರ ನವೀಕೃತ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ರವಿವಾರ ನಡೆಯಿತು.
ನೂತನ ಮದರಸ ಕಟ್ಟಡವನ್ನು ಇರ್ಶಾದ್ ದಾರಿಮಿ ಅಲ್ ಜಝರಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಮಾಮ್ ಶಿಬ್ಲಿ ಮಸೀದಿ ಅಧ್ಯಕ್ಷ ಬಿ.ಎಚ್ ಮುಹಮ್ಮದ್ ಅಶ್ರಫ್ ವಹಿಸಿದ್ದರು. ಮುಲರಪಟ್ನ ಮಸೀದಿ ಖತೀಬ್ ಅಬ್ದುಲ್ ಸಲಾಂ ಯಮಾನಿ ದುಆಃ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಡೆಕ್ಕನ್ ಪ್ಲಾಸ್ಟ್ ನಿರ್ದೇಶಕ ಹಾಜಿ ಬಿಎಚ್ ಅಸ್ಗರ್ ಅಲಿ, ನಂಡೆ ಪೆಂಞಲ್ ಅಭಿಯಾನದ ಅಧ್ಯಕ್ಷ ನೌಶಾದ್ ಹಾಜಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಅಹ್ ಶಾಫ್ ಹುಸೈನ್, ಎಂಬಿ ಅಶ್ರಫ್, ಅಬ್ದುಲ್ ಖಾದರ್, ಹೈದರ್ ಅಲಿ, ಬಿಎಚ್ ಇಸ್ಲಾಯಿಲ್ ಇಬ್ರಾಹೀಂ, ಎಂಎಸ್ ಸಾಲಿ, ಬಿಕೆ ಹಮೀದ್, ರಫೀಲ್ ಇಡ್ಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಸ್ಜಿದುಲ್ ಇಮಾಮ್ ಶಿಬ್ಲಿ ಇದರ ಇಮಾಮ್ ಮುಹಮ್ಮದ್ ಹನೀಫ್ ಬಾ ಹಸನಿ ಸ್ವಾಗತಿಸಿ, ವಂದಿಸಿದರು.














