ಕಾಂಗ್ರೆಸ್ ನಾಯಕ ಕೆ.ಕೆ.ಸರಳಾಯ ಅಂತ್ಯಕ್ರಿಯೆ

ಉಡುಪಿ, ಮಾ.1: ನಿಧನರಾದ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹಾಗೂ ಸಹಕಾರಿ ಧುರೀಣ ಕೆ.ಕಷ್ಣರಾಜ್ ಸರಳಾಯರ ಅಂತ್ಯಕ್ರಿಯೆಯನ್ನು ರವಿವಾರ ನಗರದ ಬೀಡಿನಗುಡ್ಡೆಯ ಹಿಂದು ರುಧ್ರಭೂಮಿಯಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘಪತಿ ಭಟ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಯು.ಆರ್.ಸಭಾಪತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಯಕರ ಶೆಟ್ಟಿ ಇಂದ್ರಾಳಿ, ಡಾ.ಹರಿಶ್ಚಂದ್ರ, ಡಾ.ಅಶೋಕ್ ಕುಮಾರ್ ಒಕುಡೆ, ಅಲೆವೂರು ಗಣಪತಿ ಕಿಣಿ, ಅಲೆವೂರು ಶ್ರೀಧರ ಶೆಟಿ, ಪ್ರದೀಪ್‌ಚಂದ್ರ ಕುತ್ಪಾಡಿ, ಜನಾರ್ದನ ತೋನ್ಸೆ, ದಿನೇಶ್ ಪುತ್ರನ್, ಬಿ.ನರಸಿಂಹಮೂರ್ತಿ, ಭಾಸ್ಕರ ರಾವ್ ಕಿದಿಯೂರು, ಸತೀಶ್ ಅಮೀನ್ ಪಡುಕರೆ, ನಾಗೇಶ್ ಉದ್ಯಾವರ, ಇಸ್ಮಾಯಿಲ್ ಅತ್ರಾಡಿ, ಅಣ್ಣಯ್ಯ ಸೇರಿಗಾರ್, ಹರೀಶ್ ಕಿಣಿ, ನಾಗೇಶ್ ಭಟ್, ಪ್ರಖ್ಯಾತ ೆಟ್ಟಿ, ಯತೀಶ್ ಕರ್ಕೆರ ಹಾಜರಿದ್ದರು.
ಇದಕ್ಕೂ ಮುನ್ನ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಸರಳಾಯರ ಪಾರ್ಥಿವ ಶರೀರವನ್ನು ಇಟ್ಟು ಗೌರವ ಸಲ್ಲಿಸಲಾಯಿತು.





