‘ವಾಯ್ಸ್ ಆಫ್ ಕರಾವಳಿ’: ಲಿಷಾ ಕೊಕ್ಕರ್ಣೆಗೆ ಪ್ರಶಸ್ತಿ

ಬ್ರಹ್ಮಾವರ, ಮಾ.1: ಬ್ರಹ್ಮಾವರ ರೋಟರಿ ವತಿಯಿಂದ ಬ್ರಹ್ಮಾವರ ನಿರ್ಮಲಾ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಅಪ್ರತಿಮ ಸಂಗೀತ ರಿಯಾಲಿಟಿ ಸ್ಪರ್ಧೆ ಅಕ್ಷಯ ಫರ್ನಿಚರ್ ಪ್ರಾಯೋಜಿತ ‘ವಾಯ್ಸ್ ಆಫ್ ಕರಾವಳಿ’ ಫೈನಲ್ನಲ್ಲಿ 7ನೆ ತರಗತಿಯ ವಿದ್ಯಾರ್ಥಿನಿ ಲಿಷಾ ಕೊಕ್ಕರ್ಣೆ ವಿಜೇತರಾಗಿದ್ದಾರೆ.
ವಿ.ಪಿ.ಶ್ರೀಹರಿ ಹೊಳ್ಳ ಹೊಸಪೇಟೆ ದ್ವಿತೀಯ, ಚಿನ್ಮಯಿ ಭಟ್ ಮಂಗಳೂರು ತೃತೀಯ, ನಿಶಾ ಕಂಚುಗೋಡು ತ್ರಾಸಿ ನಾಲ್ಕನೆ ಮತ್ತು ಸಮರ್ಥ ಚತುರ್ವೇದಿ ಶಿವಮೊಗ್ಗ ಐದನೇ ಸ್ಥಾನವನ್ನು ಪಡೆದರು. ಫೈನಲ್ ಹಂತದ ಎಲ್ಲ ಸ್ಪರ್ಧಿ ಗಳಿಗೂ ಸಮಾಧಾನಕರ ಬಹುಮಾನ ಹಾಗೂ ಟ್ರೋಫಿ ನೀಡಿ ಗೌರವಿಸ ಲಾಯಿತು.
ಕಾರ್ತಿಕ್ ವಿ.ಬಂಟಕಲ್ಲು ರೋಟರಿ ಬ್ರಹ್ಮಾವರದ ಯೂಟ್ಯೂಬ್ ಆಧಾರಿತ ಸಂಗೀತ ಸ್ಪರ್ಧೆ ಸ್ಟಾರ್ ಸಿಂಗರ್-2020 ಇದರ ವಿಜೇತರಾದರು. ಸೆಮಿಫೈನಲ್ ವರೆಗೆ ಆಗಮಿಸಿದ್ದ ಕಿರಿಮಂಜೇಶ್ವರದ ಅಂಧ ಗಾಯಕಿ ಮೇಘನಾಗೆ ಸಹಾಯಧನ ವಿತರಿಸಲಾಯಿತು.
ಸ್ಪರ್ಧೆಯಲ್ಲಿ ಯಶವಂತ್ ಎಂ.ಜಿ., ಡಾ.ಕಿರಣ್ ಕುಮಾರ್ ತೀರ್ಪುಗಾರ ರಾಗಿ ಸಹಕರಿಸಿದರು. ಈ ಸಂದರ್ಭದಲ್ಲಿ ಮನೋರೋಗ ತಜ್ಞ ಡಾ.ಪಿ.ವಿ. ಭಂಡಾರಿ ಅವರಿಗೆ ರೋಟರಿ ಬ್ರಹ್ಮಾವರ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮವನ್ನು ನಿಯೋಜಿತ ರೋಟರಿ ಗವರ್ನರ್ ರಾಜಾರಾಮ್ ಭಟ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರೋಟರಿ ಬ್ರಹ್ಮಾವರದ ಅಧ್ಯಕ್ಷ ಎಸ್.ಕೆ.ಪ್ರಾಣೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯ 3ರ ಸಹಾಯಕ ಗವರ್ನರ್ ಅಶೋಕ್ ಕುಮಾರ್ ಶೆಟ್ಟಿ ಹಾಗೂ ವಲಯ ಸೇನಾನಿ ದೇವದಾಸ್ ಶೆಟ್ಟಿಗಾರ್ ನಿರ್ಮಲ ಶಾಲೆಯ ಸಂಚಾಲಕಿ ಸಿಸ್ಟರ್ ರೋಸ್ ಫ್ಲೋರಿನ್, ಅಕ್ಷಯ ಫರ್ನಿಚರ್ ಮಾಲಕ ರಮೇಶ್ ಭಟ್ ರೋಟರಿ ಕಾರ್ಯರ್ಶಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ವಿಜಯ ಬಾಲನಿಕೇತನ ಸಂಸ್ಥೆಗೆ 50 ಸಾವಿರ ರೂ. ಸಹಾಯಧನ ವಿತರಿಸಲಾಯಿತು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು.







