ಆಯುಶ್ಮನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ

ಉಡುಪಿ, ಮಾ.1: ಉಡುಪಿ ಮಿತ್ರ ಆಸ್ಪತ್ರೆ, ಜಯಂಟ್ಸ್ ಗ್ರೂಪ್ ಉಡುಪಿ, ಮಾಳ್ಸಿ ಮೆಡಿಕಲ್ ಮತ್ತು ಮಹಾಲಸಾ ವಿಷನ್ ಒಳಕಾಡು ಮತ್ತು ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯುಶ್ಮನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಹಾಗೂ ಪ್ರಧಾನಮಂತ್ರಿ ಮಾನ್‌ಧನ್ ಮಾಹಿತಿ ಮತ್ತು ನೊಂದಣೆ ಕಾರ್ಯಾಗಾರವನ್ನು ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮಾಜಿ ನಗರಸಭಾ ಅಧ್ಯಕ್ಷ ಸೋಮಶೇಖರ್ ಭಟ್ ಉದ್ಘಾಟಿಸಿದರು. ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖೆಯ ಡಾ.ಅಕ್ಷತಾ ನಾಯಕ್ ಪ್ರಧಾನಮಂತ್ರಿ ಮಾನ್‌ಧನ್ ಯೋಜನೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಜಯಂಟ್ಸ್ ಅಧ್ಯಕ್ಷ ಲಕ್ಷೀಕಾಂತ ಬೆಸ್ಕೂರ್, ನಗರ ಸಭಾ ಸದ್ಯಸ್ಯರಾದ ಮಾನಸ ಸಿ.ಪೈ, ರಜನಿ ಹೆಬ್ಬಾರ್, ರಶ್ಮಿ ಭಟ್, ಮಿತ್ರ ಆಸ್ಪತ್ರೆಯ ಶ್ರೀಧರ್ ಹೊಳ್ಳ, ರಮೇಶ ಪೂಜಾರಿ, ಶ್ಯಾಮ್‌ಪ್ರಸಾದ್ ಕುಡ್ವ, ಚಿದಾನಂದ ಪೈ ಉಪಸ್ಥಿತರಿದ್ದರು.
Next Story





