ಪೆಟ್ರೋಲ್ ಬಂಕ್ ಪರವಾನಿಗೆಗೆ ಕನಿಷ್ಠ ಅಂತರ ನಿಗದಿ ಅಗತ್ಯ : ಜಯಪ್ರಕಾಶ್ ಹೆಗ್ಡೆ
ತೈಲ ಸಮಾಗಮದ ಸಮಾರೋಪ

ಉಡುಪಿ, ಮಾ.1: ಒಂದು ಪೆಟ್ರೋಲ್ ಬಂಕ್‌ನಿಂದ ಇನ್ನೊಂದು ಬಂಕ್‌ಗೆ ಕನಿಷ್ಠ ಅಂತರವನ್ನು ನಿಗದಿ ಪಡಿಸುವ ಕುರಿತು ಸರಕಾರ ಯೋಜನೆ ರೂಪಿಸ ಬೇಕು. ಮದ್ಯದ ಅಂಗಡಿಗಳಂತೆ ಎಲ್ಲಂದರಲ್ಲಿ ಪೆಟ್ರೋಲ್ ಬಂಕ್ ತೆರೆಯು ವುದು ಅಪಾಯಕಾರಿ. ಬಂಕ್ ಹೆಚ್ಚುವುದರಿಂದ ಪೈಪೋಟಿ ಹೆಚ್ಚಾಗಿ ವರ್ತಕರು ನಷ್ಟ ಅನುಭವಿ ಸಬೇಕಾಗುತ್ತದೆ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾ ಮಂಡಳದ ಆಶ್ರಯ ದಲ್ಲಿ ದಕ್ಷಿಣ ಕನ್ನಡ- ಉಡುಪಿ ಸಂಘದ ಸಹಯೋಗದಲ್ಲಿ ಉಡುಪಿ ಕರಾವಳಿ ಬೈಪಾಸ್ ಬಳಿಯ ಲಿಗಾಡೋ ಹೊಟೇಲ್ ಸಭಾಂಗಣದಲ್ಲಿ ರವಿವಾರ ನಡೆದ ಎರಡು ದಿನಗಳ ತೈಲ ಸಮಾಗ ಮದ ಸಮಾರೋಪ ಸಮಾರಂಭದಲ್ಲಿ ಅವು ಸಮಾರೋಪ ಭಾಷಣ ಮಾಡಿದರು.
ಜನರ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತುವವರು ನಿಜವಾದ ಜನಪ್ರತಿ ನಿಧಿಗಳಾಗುತ್ತಾರೆ. ಆದುದರಿಂದ ಪೆಟ್ರೋಲಿಂಯ ವರ್ತಕರ ಸಮಸ್ಯೆಗಳ ಕುರಿತು ದೇಶದ ಎಲ್ಲ ಸಂಸದರು ಒಕ್ಕೋರಲಿನಿಂದ ಸಂಸತ್ತಿನಲ್ಲಿ ಮಾತನಾಡಿದರೆ ಹೆಚ್ಚು ಪರಿಣಾಮಕಾರಿ ಯಾಗಿರುತ್ತದೆ. ಇದಕ್ಕೆ ಪ್ರಧಾನ ಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರು ತಕ್ಷಣವೇ ಸ್ಪಂಧಿಸುವ ಸಾಧ್ಯತೆ ಇರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಹಿಂದೆ ಕ್ರೂಡ್ ಆಯಿಲ್ ಒಂದು ಬ್ಯಾರೆಲ್‌ಗೆ 70 ಡಾಲರ್ ಇದ್ದಾಗ ಮತ್ತು ಈಗ 50 ಡಾಲರ್ ಆದಾಗಲೂ ಪೆಟ್ರೋಲ್ ದರದಲ್ಲಿ ಯಾವುದೇ ವ್ಯಾತ್ಯಾಸಗಳು ಕಂಡುಬಂದಿಲ್ಲ. ಇದೀಗ ಕೊರೊನಾ ವೈರಸ್ ಮತ್ತು ಇರಾನ್ -ಅಮೆರಿಕಾ ಯುದ್ಧ ಭೀತಿಯಿಂದಾಗಿ ಕ್ರೂಡ್ ಆಯಿಲ್ ಬೆಲೆ ಜಾಸ್ತಿ ಕೂಡ ಆಗಬಹುದು ಅಥವಾ ಕಡಿಮೆಯೂ ಆಗಬಹುದಾಗಿದೆ. ಇದರಿಂದ ಗ್ರಾಹಕರು ಮತ್ತು ವರ್ತಕರಿಗೆ ಲಾಭವಾಗಲಿದೆ ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ನಾವು ಸಂಘಟಿತರಾ ದಾಗ ಮಾತ್ರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದುದ ರಿದ ಪೆಟ್ರೋಲಿಯಂ ವರ್ತಕರು ತಮ್ಮ ಸಮಸ್ಯೆಗಳ ಬಗ್ಗೆ ಒಗ್ಗಟ್ಟಿನಿಂದ ಸರಕಾರದ ಮುಂದೆ ಇಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಮಹಾಮಂಡಳದ ಅಧ್ಯಕ್ಷ ಎಚ್.ಎಸ್.ಮಂಜಪ್ಪ ವಹಿಸಿ ದ್ದರು. ವೇದಿಕೆಯಲ್ಲಿ ಮಹಾ ಮಂಡಳದ ಕಾರ್ಯದರ್ಶಿ ಆನಂದ ಕಾರ್ನಾಡ್, ಉಪಾಧ್ಯಕ್ಷರಾದ ರಾಜದೀಪ್ ಕೌಜಲಗಿ, ಕೆ.ವಿಶ್ವಾಸ್ ಶೆಣೈ, ಅನೀಸ್ ಸನವುಲ್ಲಾ, ಮುಖ್ಯ ಸಂಯೋಜಕ ಸತೀಶ್ ಎನ್.ಕಾಮತ್, ಖಜಾಂಚಿ ವಿಶ್ವನಾಥ ಪಾಟೇಲ್, ಡಿಕೆಯುಪಿಡಿಎ ಅಧ್ಯಕ್ಷ ವಾಮನ ಪೈ, ಕಾರ್ಯದರ್ಶಿ ರಾಜೇಂದ್ರ ಕಟ್ಟೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು. ಸಂಘದ ಅತ್ಯುತ್ತಮ ಘಟಕಗಳಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಮ್ಮೇಳನ ಸಮಿತಿ ಅಧ್ಯಕ್ಷ ಎಚ್.ಆರ್.ತಿವಾರಿ ಸ್ವಾಗತಿಸಿದರು. ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
‘ಪೆಟ್ರೋಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಿ’
ಇಡೀ ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್‌ಗಳಿಗೆ ಏಕರೂಪದ ದರ ನಿಗದಿಪಡಿಸುವ ನಿಟ್ಟಿನಲ್ಲಿ ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಮಹಾಮಂಡಳದ ಅಧ್ಯಕ್ಷ ಅಧ್ಯಕ್ಷ ಎಚ್.ಎಸ್.ಮಂಜಪ್ಪ ತಿಳಿಸಿದರು.
ಎಲ್ಲಕ್ಕಿಂತ ಹೆಚ್ಚು ಶೇ.32ರಷ್ಟು ತೆರಿಗೆಯನ್ನು ಪೆಟ್ರೋಲ್‌ನಿಂದ ಹಾಗೂ ಶೇ.19ರಷ್ಟು ತೆರಿಗೆಯನ್ನು ಡಿಸೇಲ್‌ನಿಂದ ವಸೂಲಿ ಮಾಡಲಾಗುತ್ತಿದೆ. ಪೆಟ್ರೋಲಿಯಂ ವರ್ತಕರು ಇಷ್ಟು ತೆರಿಗೆ ಪಾವತಿಸುತ್ತಿದ್ದರೂ ನಮ್ಮ ಗೋಳು ಕೇಳುವವರೇ ಇಲ್ಲವಾಗಿದೆ ಎಂದರು.
ಪೆಟ್ರೋಲಿಯಂ ವರ್ತಕರಿಗೆ ಸಿಗುವ ಕಮಿಷನ್ ಇಂದಿನ ಕಾಲಕ್ಕೆ ಸಾಕಾಗು ತ್ತಿಲ್ಲ. ಎಲ್‌ಪಿಜಿಗೆ 60ರಿಂದ 65ರೂ. ಕಮಿಷನ್ ದೊರೆತರೆ, ಒಂದು ಲೀಟರ್ ಪೆಟ್ರೋಲ್ ಮಾರಾಟದಲ್ಲಿ ಕೇವಲ 3.5ರೂ. ಮತ್ತು ಡಿಸೇಲ್‌ನಲ್ಲಿ 2ರೂ. ಕಮಿಷನ್ ಸಿಗುತ್ತಿದೆ. ಆದುದರಿಂದ ಕಮಿಷನ್ ದರವನ್ನು ಸರಕಾರ ಪರಿಷ್ಕರಣೆ ಮಾಡಬೆೀಕು ಎಂದು ಅವರು ಒತ್ತಾಯಿಸಿದರು.







