ದುರ್ಗಾ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ: ಬ್ಯಾನರ್ ಅಳವಡಿಸಿ ಪಂಚಾಯತ್‌ಗೆ ಎಚ್ಚರಿಕೆ

ಕಾರ್ಕಳ: ದುರ್ಗಾ ಗ್ರಾಮದ ಕೈಲಾಸ್ ಸ್ಟೋರ್ ಬಳಿಯಿಂದ ನಾರ್ಕಟ್‌ಗೆ ತೆರಳುವ ರಸ್ತೆಯ ಅವ್ಯವಸ್ಥೆ, ದುಸ್ಥಿತಿ ಕಂಡು ಬೇಸತ್ತ ಗ್ರಾಮಸ್ಥರು ಕೊನೆಗೂ ಪಂಚಾಯತ್ ಹಾಗೂ ಜನಪತ್ರಿನಿಧಿಗಳ ವಿರುದ್ಧ ತಮ್ಮ ಅಕ್ರೋಶವನ್ನು ಬ್ಯಾನರ್ ಅಳವಡಿಸಿವ ಮೂಲಕ ಹೊರಹಾಕಿದ್ದಾರೆ.
ಬ್ಯಾನರ್‌ನಲ್ಲಿ ಏನಿದೆ..?
ನಾಯಕರುಗಳೇ, ನಮ್ಮ ಮತ ಬೇಕು. ನಮ್ಮ ಸಮಸ್ಯೆಗಳು ಬೇಡ. ಓಟಿಗಾಗಿ ಇದೇ ರಸ್ತೆಯಲ್ಲಿ ಓಡಾಡ್ತಿರಿ. ಆಮೇಲೆ ಈ ದಾರಿಯನ್ನೇ ಮರೆತುಬಿಡ್ತೀರಿ. ದುರ್ಗ ಗ್ರಾಮದ ಕೈಲಾಸ್ ಸ್ಟೋರ್-ನಾರ್ಕಟ್ ರಸ್ತೆಯಿದು. ರಸ್ತೆಯ ಅವ್ಯವಸ್ಥೆ ಬಗ್ಗೆ ಹೇಗೆ ನಿಮಗೆ ಗಮನವಿಲ್ಲವೋ ಹಾಗೆಯೇ ನಿಮಗೆ ಮತ ಹಾಕಬಾರದೆಂಬ ನಿರ್ಧಾರ ನಮ್ಮದು. ತುರ್ತಾಗಿ ಡಾಮರೀಕರಣ ನಡೆಸಿ ಇಲ್ಲದಿದ್ದರೆ ಮತಕ್ಕಾಗಿ ಆಗಮಿಸದಿರಿ. ಇಂತಿ ನೊಂದ ಸ್ಥಳೀಯರು ಎಂಬ ಬರವಣಿಗೆಯ ಬ್ಯಾನರ್ ಅಳವಡಿಸುವ ಮೂಲಕ ತಮ್ಮ ಅಕ್ರೋಶ ಹೊರಹಾಕಿದ್ದಾರೆ.
Next Story





