ಕಾನೂನು ವಿವಿ ಸದಸ್ಯರಾಗಿ ಹೈಕೊರ್ಟ್ ವಕೀಲ ಅರುಣ್ ಶ್ಯಾಮ್ ನೇಮಕ

ಬೆಂಗಳೂರು, ಮಾ.1: ದಕ್ಷಿಣ ಕನ್ನಡ ಮೂಲದ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್ ಅವರನ್ನು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಶೈಕ್ಷಣಿಕ ಪರಿಷತ್ತಿನ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಇವರ ಸದಸ್ಯತ್ವದ ಅವಧಿ ಮುಂದಿನ ಮೂರು ವರ್ಷದ್ದಾಗಿದೆ. ಒಟ್ಟು 24 ಮಂದಿ ಈ ಪರಿಷತ್ತಿನಲ್ಲಿ ಇರುತ್ತಾರೆ. ಸುಪ್ರೀಂಕೋರ್ಟ್ ನ್ಯಾ.ಇಂದು ಮಲ್ಹೋತ್ರಾ, ಕರ್ನಾಟಕ ಮೂಲದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಪರಿಷತ್ತಿನ ಇತರೇ ಪ್ರಮುಖ ಸದಸ್ಯರಾಗಿದ್ದಾರೆ.
Next Story





