ಇರಾನ್: ಕೊರೋನವೈರಸ್ ಸಾವಿನ ಸಂಖ್ಯೆ 54ಕ್ಕೆ: ಸೋಂಕಿಗೊಳಗಾದವರ ಸಂಖ್ಯೆ 978

ಟೆಹರಾನ್, ಮಾ. 1: ನೂತನ-ಕೊರೋನವೈರಸ್ ನಿಂದಾಗಿ ಇರಾನ್ ನಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆ 54ಕ್ಕೆ ಏರಿದೆ ಎಂದು ಆ ದೇಶದ ಆರೋಗ್ಯ ಸಚಿವಾಲಯ ರವಿವಾರ ತಿಳಿಸಿದೆ. ಅದೇ ವೇಳೆ, ಸೋಂಕಿಗೆ ಒಳಗಾದವರ ಸಂಖ್ಯೆ ಒಂದೇ ದಿನದಲ್ಲಿ ಹಿಂದಿನ ಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಾಗಿದ್ದು, 978ಕ್ಕೆ ಏರಿದೆ.
ದೇಶದ ಹಲವಾರು ನಗರಗಳಲ್ಲಿ ಖಚಿತಪಟ್ಟಿರುವ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು. ಇರಾನ್‌ನ ಮಹತ್ವದ ಶಿಯಾ ಪ್ರಾರ್ಥನಾಲಯವಿರುವ ಮಶ್ಶಾದ್ ನಗರವೂ ಇದರಲ್ಲಿ ಸೇರಿದೆ. ಈ ಪ್ರಾರ್ಥನಾಲಯವನ್ನು ಈ ವಲಯದ ಎಲ್ಲೆಡೆಯಿಂದ ಭಕ್ತರು ಸಂದರ್ಶಿಸುತ್ತಾರೆ.
ಇರಾನ್‌ನ ಕೊರೋನವೈರಸ್ ಸಾವಿನ ಸಂಖ್ಯೆಯಲ್ಲಿ ಒಂದು ದಿನದಲ್ಲಿ 11 ಹೆಚ್ಚಳವಾಗಿದೆ ಹಾಗೂ 385 ನೂತನ ಪ್ರಕರಣಗಳು ದೃಢಪಟ್ಟಿವೆ.
Next Story





