ಜನರೇಶನ್ ನೆಕ್ಸ್ಟ್ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ: ಎಂಇಟಿ ಪಬ್ಲಿಕ್ ಸ್ಕೂಲ್ ಗೆ ಹಲವು ಪ್ರಶಸ್ತಿ

ಮಂಗಳೂರು, ಮಾ.2: ಇತ್ತೀಚೆಗೆ ಎಂ.ಇ.ಟಿ. ಪಬ್ಲಿಕ್ ಸ್ಕೂಲಿನಲ್ಲಿ ಜನರೇಶನ್ ನೆಕ್ಸ್ಟ್ ರಾಜ್ಯ ಮಟ್ಟದ ಸ್ಪರ್ಧೆ ಅಬಾಕಸ್/ವೇದಿಕ್ ಮ್ಯಾಕ್ಸ್ (ಸ್ಪೀಡ್ ಮ್ಯಾಕ್ಸ್) ಆಯೋಜಿಸಲಾಗಿತ್ತು.
ಈ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಎಂ.ಇ.ಟಿ. ಪಬ್ಲಿಕ್ ಸ್ಕೂಲಿನ 70 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 11 ವಿದ್ಯಾರ್ಥಿಗಳಾದ ಎಂ.ರಯಾನ್, ಧನುಷ್, ರಾಶಿ, ಶೈಝಾ ಶೇಖ್, ಸಾಯಿಮಾ ಮುಸ್ಕಾನ್, ಮರ್ಯಮ್ ಹನಾ, ಸೈಯದ್ ಅಫೀಫಾ, ಆಯೀಶಾ ಬಾನು, ಝೀನತ್ ಝಿಯಾನ್, ಸಾನಿಯಾ ಅಂಜುಮ್, ಅದ್ನಾನ್ ಜಾಫ್ರಿ, ಸೈಯದ್ ಮುಸ್ತಜೀಬ್, ಮುಹಮ್ಮದ್ ರಯಾನ್, ರೆಹಾನ್ ಯೂಸುಫ್ ಟ್ರೋಫಿ ಮತ್ತು ಮೆಡಲ್ ಗಳನ್ನು ಗಳಿಸಿದ್ದಾರೆ.
ವಿಜೇತ ವಿದ್ಯಾರ್ಥಿಗನ್ನು ಶಾಲಾ ಸಂಚಾಲಕರಾದ ಅಬ್ದುಲ್ ಜಲೀಲ್ ಸಾಹೇಬ್, ಶಾಲಾ ಕಾರ್ಯದರ್ಶಿ ಎಂ.ಇಕ್ಬಾಲ್, ಶಾಲಾ ಮುಖ್ಯಸ್ಥೆಯಾದ ಜುನೈದಾ ಸುಲ್ತಾನ, ಅಧ್ಯಾಪಕಿಯರಾದ ನಾಗರತ್ನಾ ಹಾಗೂ ಸ್ವಪ್ನಾ ಅಭಿನಂದಿಸಿದರು.
Next Story





