ಅಸಾಂಪ್ರದಾಯಿಕ ರೀತಿಯ ಕಪ್ಪೆ ಬಂಡಾಸ್ ಮೀನುಗಾರಿಕೆ ನಿಷೇಧ
ಕಾರವಾರ, ಮಾ.2: ಕರ್ನಾಟಕ ಕಡಲ ಮೀನುಗಾರಿಕೆ ಅಧಿನಿಯಮ 1986ರ ಅನ್ವಯ ರಾಜ್ಯದ 12 ನಾಟಿಕಲ್ ಮೈಲ್ ಪ್ರದೇಶಗಳಲ್ಲಿ ಮೀನುಗಾರಿಕೆಯನ್ನು ಹಾಗೂ ತೀರ ಪ್ರದೇಶದಲ್ಲಿ ಚೌರಿ ಹಾಕಿ ಅಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆ ಬಂಡಾಸ್ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ.
ನಿಷೇಧದ ಉಲ್ಲಂಘನೆ ಕಂಡು ಬಂದಲ್ಲಿ ಕಠಿಣವಾದ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ರಾಜ್ಯ ಮಾರಾಟ ಕರ ರಿಯಾಯತಿ ಡಿಸೇಲ್ ವಿತರಣೆಯನ್ನು ನಿಲ್ಲಿಸುವುದರ ಜೊತೆಗೆ, ದೋಣಿಯ ಮೀನುಗಾರಿಕೆ ಪರವಾನಿಗೆ ಮತ್ತು ನೊಂದಣಿಯನ್ನು ರದ್ದು ಪಡಿಸಲಾಗುವುದು ಎಂದು ಮೀನುಗಾರಿಕಾ ಉಪನಿರ್ದೇಶಕರು ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.
Next Story





