ಬೆಂಗರೆ: ಸಾಮರಸ್ಯಕ್ಕಾಗಿ ರಕ್ತದಾನ ಮಾಡಿ ಸ್ಫೂರ್ತಿಯಾದ ದೃಷ್ಟಿಹೀನ ಯುವಕ

ಮಂಗಳೂರು, ಮಾ.2: ಜಮಾಅತೆ ಇಸ್ಲಾಮೀ ಹಿಂದ್ ಕಸ್ಬಾ ಬೆಂಗರೆ, ಎಚ್‌ಆರ್‌ಎಸ್ ಮಂಗಳೂರು ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ವತಿಯಿಂದ ರವಿವಾರ ಕಸ್ಬಾ ಬೆಂಗರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಸಾಮರಸ್ಯಕ್ಕಾಗಿ ಆಯೋಜಿಸಲಾದ ಈ ಶಿಬಿರದಲ್ಲಿ ದೃಷ್ಟಿಹೀನ ಯುವಕನೊಬ್ಬ ರಕ್ತದಾನಗೈದು ಗಮನ ಸೆಳೆದರು. ಶಿಬಿರದಲ್ಲಿ 118 ಮಂದಿ ರಕ್ತದಾನಗೈದರು.
ಬೆಂಗ್ರೆ ಮಹಾಜನ ಸಭೆಯ ಅಧ್ಯಕ್ಷ ಚೇತನ್ ಬೆಂಗ್ರೆ, ಕಾರ್ಪೊರೇಟರ್ ಮುನೀಬ್ ಬೆಂಗ್ರೆ, ಜಮಾಅತೆ ಇಸ್ಲಾಮಿ ಹಿಂದ್ ಕಸ್ಬಾ ಬೆಂಗ್ರೆ ಅಧ್ಯಕ್ಷ ಅಬ್ದುಲ್ಲತೀಫ್ ಆಲಿಯಾ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಅಬ್ಬುಸ್ಸತ್ತಾರ್ ಮಾತನಾಡಿದರು.
ಈ ಸಂದರ್ಭ ಗರಿಷ್ಠ ರಕ್ತದಾನ ಮಾಡಿದ ಅಸ್ಲಮ್ ಕಸ್ಬಾ ಬೆಂಗ್ರೆ ಹಾಗೂ ಸಂಜಯ್ ಸುವರ್ಣ ತೋಟ ಬೆಂಗರೆ ಹಾಗೂ ಕಳೆದ 25 ವರ್ಷಗಳಿಂದ ಬ್ಲಡ್ ಬ್ಯಾಂಕ್ ಕ್ಷೇತ್ರದಲ್ಲಿ ಸೇವೆಗೈಯ್ಯುತ್ತಿರುವ ಕೆಎಂಸಿ ಆಸ್ಪತ್ರೆಯ ಟೆಕ್ನಿಕಲ್ ಸೂಪರವೈಸರ್‌ಗಳಾಗಿರುವ ಸೆಲೀನಾ ಡಿಸೋಜ ಹಾಗೂ ಶ್ರೀಜಿ ಮೇಡಮ್ ಅವರನ್ನು ಸನ್ಮಾನಿಸಲಾಯಿತು.
Next Story





