‘ಪಿಸಿ ಆ್ಯಂಡ್ ಪಿಎನ್‌ಡಿಟಿ ಕಾಯ್ದೆ ಉಲ್ಲಂಘಿಸಿದಲ್ಲಿ ಕ್ರಮ’
ಉಡುಪಿ, ಮಾ.2: ಜಿಲ್ಲಾ ಮಟ್ಟದ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ್ರೂಣ ಲಿಂಗ ಪತ್ತೆ ಕಾಯ್ದೆಯ ಸಲಹಾ ಸಮಿತಿ ಸಭೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡರ ಅಧ್ಯಕ್ಷತೆಯಲ್ಲಿ ಅಜ್ಜರಕಾಡಿನ ಡಿಎಚ್‌ಓ ಕಚೇರಿಯಲ್ಲಿ ನಡೆಯಿತು.
ಭ್ರೂಣದ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಭ್ರೂಣದ ಸ್ಕ್ಯಾನಿಂಗ್ ಚಿತ್ರ ಅಥವಾ ಸಿಡಿಗಳನ್ನು ಬಳಸಿಕೊಂಡು ್ರೂಣದ ಲಿಂಗ ಪತ್ತೆ ಮಾಡುವ ಸಾಧ್ಯತೆಗಳಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭ್ರೂಣದ ಚಿತ್ರಗಳನ್ನಾಗಲೀ, ಸಿಡಿಗಳನ್ನಾಗಲೀ ನೀಡದಂತೆ ಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಪಿಸಿ ಎಂಡ್ ಪಿ.ಎನ್.ಡಿ.ಟಿ ಕಾಯ್ದೆ ಅನುಷ್ಠಾನ ಗೊಳ್ಳುತ್ತಿರುವ ಬಗ್ಗೆ ತಪಾಸಣೆ ನಡೆಸಲಾಗುತ್ತದೆ. ಪಿಸಿ ಎಂಡ್ ಪಿ.ಎನ್.ಡಿ.ಟಿ ಕಾಯ್ದೆಗಳನ್ನು ಉಲ್ಲಂಘಿಸಿರುವ ಸಾಕ್ಷ್ಯಾಧಾರಗಳು ದೊರೆತಲ್ಲಿ ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಜನವರಿ ತಿಂಗಳಲ್ಲಿ 24 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿದ್ದು, ಕಾಯ್ದೆ ಉಲ್ಲಂಘಿಸಿರುವ ಒಂದು ಸಂಸ್ಥೆಗೆ ನೋಟೀಸು ನೀಡಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್ ಸಭೆಗೆ ಮಾಹಿತಿ ನೀಡಿದರು.
ಫೆಬ್ರವರಿ ತಿಂಗಳಿನಲ್ಲಿ 20 ಸೆಂಟರ್‌ಗಳಿಗೆ ಭೇಟಿ ನೀಡಿದ್ದು, ಪಿಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ರೂಲ್ ನಂಬ್ರ 8ರ ಪ್ರಕಾರ 3 ಸಂಸ್ಥೆಗಳಿಗೆ ಮತ್ತು ನಾನ್ ಮೆಂಟೇನೆನ್ಸ್ ಆಪ್ ರೆಕಾರ್ಡ್ ರೂಲ್ ನಂಬ್ರ 29ರ ಪ್ರಕಾರ 1 ಸಂಸ್ಥೆಗೆ ನೋಟೀಸ್ ನೀಡಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಪಿಸಿ ಎಂಡ್‌ಪಿಎನ್‌ಡಿಟಿ ಸಲಹಾ ಸಮಿತಿ ಅಧ್ಯಕ್ಷ ಡಾ.ಪ್ರತಾಪ್ ಕುಮಾರ್, ಸಮಿತಿ ಸದಸ್ಯೆ ಡಾ. ಪಾರ್ವತಿ ಭಟ್, ಕೆಎಂಸಿ ಮಣಿಪಾಲದ ಡಿಸಿಎಚ್ ಡಿಎನ್‌ಬಿ ಶಿಶು ತಜ್ಞ ಡಾ.ಸುನಿಲ್ ಸಿ.ಮುಂಡ್ಕೂರು, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್ ಅಧ್ಯಕ್ಷೆ ಶೋಬಾ ಎಂ.ಹೆಗ್ಡೆ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞೆ ಡಾ.ದೀಕ್ಷಿತ,ಸರಕಾರಿ ನೌಕರರ ಸಂಘದಜಿಲ್ಲಾ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಜ್ಯೋತಿ ಶೆಟ್ಟಿ ಉಪಸ್ಥಿತರಿದ್ದರು.







