ವಾರಸುದಾರರಿಗೆ ಸೂಚನೆ
ಉಡುಪಿ, ಮಾ.2: ಇಡೂರು ಕುಂಜಾಡಿ ಗ್ರಾಮದ ಜನ್ನಾಲ್ ಅಣಿ ಮೂಕಾಂಬಿಕ ಅರಣ್ಯ ಪ್ರದೇಶದಲ್ಲಿ ಕರ್ನಾಟಕ ಗೇರು ಅಭಿವೃಧ್ಧಿ ನಿಗಮಕ್ಕೆ ಸೇರಿದ ಗೇರು ಹಾಡಿಯಲ್ಲಿ ಮಾ.1ರ ಸಂಜೆ 4:30ಕ್ಕೆ 45ರಿಂದ 50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು ಕಂಡು ಬಂದಿದೆ.
ಮೃತರು ಹೊಟ್ಟೆಗೆ ಆಹಾರವಿಲ್ಲದೇ ಅಥವಾ ಅನಾರೋಗ್ಯದಿಂದ ಬಳಲಿ ಮೃತಪಟ್ಟಿರುವ ಸಾಧ್ಯತೆ ಇದ್ದು, ಈ ಬಗ್ಗೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08254-258233, ಮೊಬೈಲ್: 9480805460, ಬೈಂದೂರು ವೃತ್ತ ಕಚೇರಿ:08254-251031, ಮೊಬೈಲ್: 9480805434, ಪೊಲೀಸ್ ಕಂಟ್ರೋಲ್ ರೂಮ್:0820-256444ನ್ನು ಸಂಪರ್ಕಿಸುವಂತೆ ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





