ಎ.ಎಮ್.ಸ್ಟೈಕರ್ಸ್ ಜುಬೈಲ್ ಕ್ರಿಕೆಟ್ ತಂಡದ ನೂತನ ಜೆರ್ಸಿ ಬಿಡುಗಡೆ

ಜುಬೈಲ್: ಜಾತಿ ಧರ್ಮಗಳ ಭೇದವಿಲ್ಲದೆ ರೋಗಿಗಳಿಗೆ ಬೇಕಾದ ರಕ್ತದ ಅವಶ್ಯಕತೆಯನ್ನು ಪೂರೈಸಲು ಅಹರ್ನಿಶಿಯಾಗಿ ದುಡಿಯುತ್ತಿರುವ ಬ್ಲಡ್ ಡೋನರ್ಸ್ ಮಂಗಳೂರು (ರಿ) ಎಂಬ ಸಂಸ್ಥೆಯ ಲೋಗೊ ಇರುವ ಎ.ಎಂ. ಸ್ಟ್ರೈಕರ್ಸ್ ಕ್ರಿಕೆಟ್ ತಂಡದ ಜೆರ್ಸಿಯನ್ನು (ಸಮವಸ್ತ್ರ) ಇತ್ತೀಚೆಗೆ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಬಿಡುಗಡೆಗೊಳಿಸಲಾಯಿತು.
ತಂಡದ ಜರ್ಸಿಗೆ ಪ್ರಾಯೋಜಕರಾಗಿ BHARCO, BRICK STONE, TEAM ZIGZAG ಕಾಣಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಂಡದ ಕಪ್ತಾನ ಇಂಝಮಾಮ್ ವಹಿಸಿಕೊಂಡರೆ ಸಾಮಾಜಿಕ ಸಂಸ್ಥೆಗಳ ಬಗ್ಗೆ ಅರಿವನ್ನು ಬ್ಲಡ್ ಡೋನರ್ಸ್ ಮಂಗಳೂರು (ರಿ) ತಂಡದ ಪದಾಧಿಕಾರಿಯಾಗಿರುವ ನೌಫಲ್ ಬಜ್ಪೆ ತಿಳಿಸಿಕೊಟ್ಟರು. ಅಥಿತಿಗಳಾಗಿ ಅಪ್ಪಿ ಬಜ್ಪೆ, ಆಷಿಕ್ ಗಂಜಿಮಠ ಮತ್ತು ಆಷಿಕ್ ಕರಂಬಾರ್ ಭಾಗವಹಿಸಿದ್ದರು.
Next Story







