ಬಿಜೆಪಿ ಆಡಳಿತದ ನಗರಸಭೆಯಿಂದ ಸಿಎಎ,ಎನ್‌ಆರ್‌ಸಿ ವಿರುದ್ಧ ನಿರ್ಣಯ

ಮುಂಬೈ,ಮಾ.2: ಮಹಾರಾಷ್ಟ್ರದ ಪರ್ಭನಿ ಜಿಲ್ಲೆಯ ಸೇಲುವಿನ ಬಿಜೆಪಿ ಆಡಳಿತದ ನಗರಸಭೆಯು ಸಿಎಎ ಮತ್ತು ಉದ್ದೇಶಿತ ಎನ್‌ಆರ್‌ಸಿ ಜಾರಿಯ ವಿರುದ್ಧ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಫೆ.28ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಲಾಗಿದೆ ಎಂದು ನಗರಭೆಯ ಅಧ್ಯಕ್ಷ ವಿನೋದ ಬೊರಡೆ ತಿಳಿಸಿದರು. ಮಂಡಳಿಯು ಏಳು ಮುಸ್ಲಿಮರು ಸೇರಿದಂತೆ 27 ಕೌನ್ಸಿಲರ್‌ಗಳು ಮತ್ತು ಮೂವರು ಸಹಸದಸ್ಯರನ್ನು ಹೊಂದಿದೆ.
ನಗರಸಭೆಯ ನಿರ್ಣಯವನ್ನು ಸ್ಥಳೀಯ ಜನಪ್ರತಿನಿಧಿಗಳೂ ಬೆಂಬಲಿಸಿದ್ದಾರೆ ಎಂದು ಬೊರಡೆ ತಿಳಿಸಿದರು.
Next Story





