ಮರಣ ಪತ್ರ ಬರೆದಿಟ್ಟು ನಾಪತ್ತೆ
ಗಂಗೊಳ್ಳಿ, ಮಾ.2: ಮರಣ ಪತ್ರ ಬರೆದಿಟ್ಟು ವ್ಯಕ್ತಿಯೊಬ್ಬರು ನಾಪತ್ತೆಯಾಗಿ ರುವ ಘಟನೆ ಮಾ.1ರಂದು ಮಧ್ಯಾಹ್ನ 2:30ರ ಸುಮಾರಿಗೆ ತ್ರಾಸಿ ಬೀಚ್ ಸಮೀಪ ನಡೆದಿದೆ.
ನಾಪತ್ತೆಯಾದವರನ್ನು ತ್ರಾಸಿ ಬೀಚ್ ಬಳಿಯ ನಿವಾಸಿ ವೆಂಕಟೇಶ್ ಪೈ(42) ಎಂದು ಗುರುತಿಸಲಾಗಿದೆ. ರಿಕ್ಷಾ ಚಾಲಕರಾಗಿರುವ ಇವರು, ತನ್ನ ರಿಕ್ಷಾವನ್ನು ಮನೆಯ ಆವರಣದಲ್ಲೇ ನಿಲ್ಲಿಸಿ, ‘ನನ್ನ ಸಾವಿಗೆ ನಾನೇ ಕಾರಣ, ದಯವಿಟ್ಟು ನನ್ನನ್ನು ಹುಡುಕಬೇಡಿ’ ಎಂಬುದಾಗಿ ಕಪಾಟಿನಲ್ಲಿ ಚೀಟಿ ಬರೆದಿಟ್ಟು, ಮನೆ ಯಿಂದ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





