ಇಸ್ಪೀಟು ಜುಗಾರಿ ಅಡ್ಡೆಗಳಿಗೆ ದಾಳಿ: ಒಟ್ಟು 47 ಮಂದಿ ಬಂಧನ
ಉಡುಪಿ, ಮಾ.2: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಮಾ.1ರಂದು ನಡೆಯುತ್ತಿದ್ದ ಇಸ್ಪೀಟು ಜುಗಾರಿಗೆ ದಾಳಿ ನಡೆಸಿರುವ ಪೊಲೀಸರು ಒಟ್ಟು 47 ಮಂದಿಯನ್ನು ಬಂಧಿಸಿದ್ದಾರೆ.
ಅಮಾಸೆಬೈಲು ಗ್ರಾಮದ ಬೊಳ್ಮನೆ ಬೂತಮಕ್ಕಿ ಎಂಬಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ಕೃಷ್ಣ ಶೆಟ್ಟಿ(30), ಉದಯ ಪೂಜಾರಿ (41), ರಮೇಶ(38), ರವಿ ಪೂಜಾರಿ(38), ಸುರೇಶ ಕೊಠಾರಿ(44), ಸಂತೋಷ (25) ಎಂಬವರನ್ನು ಅಮಾಸೆಬೈಲು ಪೊಲೀಸರು ಬಂಧಿಸಿ, 3,520ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ: ಕೋಟೇಶ್ವರ ಗ್ರಾಮದ ಕಾಗೇರಿ ಎಂಬಲ್ಲಿ ಕಟ್ಟಡದಲ್ಲಿರುವ ಯುನಿಟಿ ರಿಕ್ರಿಯೇಶನ್ ಅಸೋಸಿಯೇಶನ್ ಕ್ಲಬ್‌ನಲ್ಲಿ ಮಾ.1ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಸೂರ ಪೂಜಾರಿ(65), ಜಯರಾಜ(44), ಎಸ್. ಕುಮಾರ್(54), ಗಣೇಶ(46), ಸಂತೋಷ(42), ಶೀನ ಪೂಜಾರಿ(64), ಮಂಜುನಾಥ(45), ಗಣೇಶ(32), ನಾರಾಯಣ(55), ಉದಯ ಆಚಾರಿ(35), ಜಯಪ್ರಕಾಶ(49), ರಾಮಣ್ಣ ಶೆಟ್ಟಿ(55), ಉದಯ ಕುಮಾರ್ ಶೆಟ್ಟಿ(42) ಎಂಬವರನ್ನು ಕುಂದಾಪುರ ಪೊಲೀಸರು ಬಂಧಿಸಿ, 13,040ರೂ. ನಗದು ವಶಪಡಿಸಿಕೊಂಡಿದ್ದಾರೆ.
ಶಂಕರನಾರಾಯಣ: ಬೆಳ್ವೆ ಗ್ರಾಮದ ಗೋಳಿಯಂಗಡಿ ಎಂಬಲ್ಲಿರುವ ಶ್ರೀಲಕ್ಷ್ಮೀ ರಿಕ್ರಿಯೇಷನ್ ಕ್ಲಬ್‌ನಲ್ಲಿ ಮಾ.1ರಂದು ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಸಿದ್ದಾರ್ಥ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ, ಹರೀಶ್ ಶೆಟ್ಟಿ, ರಮೇಶ್ ಕುಲಾಲ್, ವಿಲ್ಸನ್, ಉದಯ ಭಂಡಾರಿ, ಹರೀಶ್ ತೋಳಾರ್, ಆನಂದ ಪೂಜಾರಿ, ಮಹಾಬಲ, ಮಂಜುನಾಥ, ಭುಜಂಗ ಶೆಟ್ಟಿ ಎಂಬವರನ್ನು ಶಂಕರನಾರಾಯಣ ಪೊಲೀಸರು ಬಂಧಿಸಿ, 1,03,205ರೂ. ನಗದು, 12 ಮೊಬೈಲ್, ಎರಡು ಕಾರುಗಳು, ಮ ಮೂರು ಬೆಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿದ್ದಾಪುರ ಗ್ರಾಮದ ದೊಟ್ಟಿನಬೇರು ಎಂಬಲ್ಲಿರುವ ಶಾಂತ ರಿಕ್ರಿಯೇಷನ್ ಕ್ಲಬ್ನಲ್ಲಿ ಅಂದರ್-ಬಾಹರ್ ಇಸ್ಟೀಟ್ ಜುಗಾರಿ ಆಡುತ್ತಿದ್ದ ಮಹೇಶ್ ಪೂಜಾರಿ, ಅನಿಲ್ ಶೆಟ್ಟಿ, ಹಿರಿಯಣ್ಣ ಶೆಟ್ಟಿ, ಅವಿನಾಶ್, ನಾಗರಾಜ ಎನ್., ರಂಗಸ್ವಾಮಿ ಎಂಬವರನ್ನು ಶಂಕರನಾರಾಯಣ ಪೊಲೀಸರು ಬಂಧಿಸಿ, 5 ಮೊಬೈಲ್‌ಗಳು, 6,745ರೂ. ನಗದು, ಒಂದು ಕಾರು ಮತ್ತು ಒಂದು ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಬೈಂದೂರು: ಯಡ್ತರೆ ಗ್ರಾಮದ ಸೌಪರ್ಣಿಕ ಕಾಂಪ್ಲೆಕ್ಸ್ನಲ್ಲಿರುವ ಎಂಜಿ ರಿಕ್ರಿಯೇಷನ್ ಕ್ಲಬ್‌ನಲ್ಲಿ ಅಂದರ್‌ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಪ್ರಶಾಂತ, ಸುರೇಶ, ರಾಜೇಶ್, ರಾಜು ರಾಮ ನಾಯಕ್, ಗಣೇಶ, ಸತೀಶ, ಜಯಂತ, ವಿರೇಂದ್ರ ಶೆಟ್ಟಿ, ಗೋಪಾಲ, ರಾಘವೇಂದ್ರ, ನಾರಾಯಣ ಖಾರ್ವಿ ಎಂಬವರನ್ನು ಬೈಂದೂರು ಪೊಲೀಸರು ಬಂಧಿಸಿ, 26,500 ರೂ. ನಗದು, 9 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.







