ದೆಹಲಿ ಹತ್ಯಾಕಾಂಡ: ಮುಸ್ಲಿಂ ಜಸ್ಟೀಸ್ ಫೋರಮ್‌ನಿಂದ ಮನವಿ

ಮಂಗಳೂರು, ಮಾ.2: ದೆಹಲಿಯಲ್ಲಿ ನಡೆದ ಹತ್ಯಾಕಾಂಡವನ್ನು ಖಂಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಒತ್ತಾಯಿಸಿ ಮುಸ್ಲಿಂ ಜಸ್ಟೀಸ್ ಫೋರಮ್ ಕರ್ನಾಟಕ ವತಿಯಿಂದ ದ.ಕ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಮುಸ್ಲಿಂ ಜಸ್ಟೀಸ್ ಫೋರಮ್ ಕರ್ನಾಟಕ ಸ್ಥಾಪಕ ಮತ್ತು ಗೌರವಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಅಧ್ಯಕ್ಷ ಡಾ.ಅಮೀರ್ ತುಂಬೆ, ಉಪಾಧ್ಯಕ್ಷ ಇರ್ಶಾದ್ ಯು.ಟಿ., ಕಾರ್ಯದರ್ಶಿ ಉಮರ್ ಕುಂಞಿ ಸಾಲೆತ್ತೂರ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ ವಹಾಬ್ ಕುದ್ರೋಳಿ, ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಇಕ್ಬಾಲ್ ಸಾಮನಿಗೆ, ಇದ್ದನ್ ಕುಂಞಿ, ಯೂಸುಫ್ ಉಚ್ಚಿಲ, ಸಲಾಂ ಉಚ್ಚಿಲ, ಇಮ್ರಾನ್ ಕುದ್ರೋಳಿ ಉಪಸ್ಥಿತರಿದ್ದರು.
Next Story





