ಪ್ರಕಾಶ್ ಶೆಟ್ಟಿಗೆ ಬಂಟ್ಸ್ ಸ್ಟಾರ್ ಅಚೀವರ್ಸ್ ಅವಾರ್ಡ್

ಮಂಗಳೂರು, ಮಾ.2: ಉದ್ಯಮಿ, ಹೋಟೆಲ್ ಆತಿಥ್ಯ ಕ್ಷೇತ್ರದ ಅಂತಾರಾಷ್ಟ್ರೀಯ ಗೋಲ್ಡ್ ಫಿಂಚ್ ಬ್ರಾಂಡ್‌ನ ಪ್ರವರ್ತಕ, ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿಗೆ ಇಂಡಿಯನ್ ಬಂಟ್ಸ್ ಚೇಂಬರ್ ಅಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಆಯೋಜಿಸಿದ 2020ರ ಬಂಟ್ಸ್ ಸ್ಟಾರ್ ಅಚೀವರ್ಸ್ ಅವಾರ್ಡ್, ಎಕ್ಸೆಲೆನ್ಸ್ ಇನ್ ಹಾಸ್ಪಿಟಾಲಿಟಿ ಇಂಡಸ್ಟ್ರಿ ಕ್ಷೇತ್ರದ ಪುರಸ್ಕಾರ ವನ್ನು ಮುಂಬೈಯ ಸಹಾರಾ ಸ್ಟಾರ್ ಹೊಟೇಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಸದಾನಂದ ಗೌಡ ಪ್ರದಾನ ಮಾಡಿದರು.
ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಇದರ ಅಧ್ಯಕ್ಷ ಕೆ.ಸಿ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂಸದ ಗೋಪಾಲ್ ಶೆಟ್ಟಿ, ಯೂನಿಯನ್ ಬ್ಯಾಂಕ್‌ನ ಸಿಇಒ ರಾಜ್‌ಕಿರಣ ರೈ ಉಪಸ್ಥಿತರಿದ್ದರು.
Next Story





