ಬೀಡಿ ಗುತ್ತಿಗೆದಾರರಿಗೆ ಹೆಚ್ಚುವರಿ ಕಮೀಷನ್ ನೀಡಲು ಒಪ್ಪಿದ ಬೀಡಿ ಕಂಪೆನಿಗಳ ಮಾಲಕರು
ವಿಟ್ಲ : ಬೀಡಿ ಕಂಪೆನಿಗಳ ಮಾಲಕರಿಂದ ಬೀಡಿ ಗುತ್ತಿಗೆದಾರರಿಗೆ 2019ರ ಎಪ್ರಿಲ್ ನಿಂದ ಸಿಗಬೇಕಾದ ಹೆಚ್ಚುವರಿ ಕಮೀಷನ್ ಬಾಕಿ ಹಣವನ್ನು ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಕರಾವಳಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ಸ್ ಅಸೋಸಿಯೇಶನ್ ಅದ್ಯಕ್ಷ ಕೃಷ್ಣ ರೈ ತಿಳಿಸಿದ್ದಾರೆ.
ಅಸೋಸಿಯೇಶನ್ ವತಿಯಿಂದ ಗುತ್ತಿಗೆದಾರರಿಗೆ ಬರಬೇಕಿರುವ ಕಮಿಷನ್ ಹಣ ಪಾವತಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಪಿಕೆಟಿಪಿ ಮತ್ತು ಜೆಪಿಟಿಪಿ ಕಂಪೆನಿಯವರು ನೀಡುವುದಾಗಿ ಒಪ್ಪಿಕೊಂಡಿರುವುದರಿಂದ ಮುಷ್ಕರ ಕೈ ಬಿಡಲಾಗಿದೆ ಎಂದು ತಿಳಿಸಿದರು.
ಕರಾವಳಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ಸ್ ಅಸೋಸಿಯೇಶನ್ ಮನವಿಗೆ ಸ್ಪಂದಿಸಿದ ಮಾಲಕರಿಗೆ ಅಸೋಸಿಯೇಶನ್ ಅಧ್ಯಕ್ಷ ಕೃಷ್ಣ ರೈ, ಉಪಾಧ್ಯಕ್ಷ ದೀಪಕ್ ಕಿರಣ್ ಹಾಗೂ ಕಾರ್ಯದರ್ಶಿ ಮುಹಮ್ಮದ್ ಕಲ್ಯಾ ಅಭಿನಂದನೆ ಸಲ್ಲಿಸಿದ್ದಾರೆ.
Next Story





